ಉತ್ತರ ಕನ್ನಡ ಜಿಲ್ಲೆಯ ಹಿರಿಯ ಸಾಹಿತಿ ಯಲ್ಲಾಪುರದ ಮಾಜಿ ಪತ್ರಕರ್ತ ನಾ.ಸು.ಭರತನಳ್ಳಿ ಇಂದು ನಿಧನರಾಗಿದ್ದಾರೆ. ಜಿಲ್ಲೆಯ ಹಿರಿಯ ಪತ್ರಕರ್ತರಾಗಿ,ಸಾಹಿತಿಯಾಗಿ ಸಿದ್ಧಾಪುರದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದು ಸೇರಿದಂತೆ ಅನೇಕ ಗೌರವ, ಮನ್ನಣೆಗಳಿಗೆ ಅವರು ಪಾತ್ರರಾಗಿದ್ದರು.
ಯಲ್ಲಾಪುರದ ಗ್ರಾಮೀಣ ಸಾಂಪ್ರದಾಯಿಕ ಹವ್ಯಕ ಕುಟುಂಬದ ನಾ.ಸು.ಭರತನಳ್ಳಿ ಕುಟುಂಬದ ಕೆಲವರು ಸೇರಿದಂತೆ ಅನೇಕರು ಪತ್ರಕರ್ತರು,ಬರಹಗಾರರಾಗಲು ನಾ.ಸು.ಪ್ರೇರಣೆಯಾಗಿದ್ದರು. ಅವರ ನಿಧನಕ್ಕೆ ಜಿಲ್ಲಾ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ರೋಹಿದಾಸ ನಾಯಕ, ಹಿರಿಯ ಸಾಹಿತಿ ವಿಷ್ಣು ನಾಯಕ, ಸಿದ್ಧಾಪುರ ತಾಲೂಕಾ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಕನ್ನೇಶ್ ಕೋಲಶಿರ್ಸಿ, ಹಳಿಯಾಳ ತಾಲೂಕಾ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್.ವಾಸರೆ, ಟಿ.ಎಸ್.ಎಸ್. ಮಾಜಿ ನಿರ್ಧೇಶಕ ಆರ್.ಆರ್. ಹೆಗಡೆ, ಪ್ರಾಂಶುಪಾಲ ಎಂ.ಕೆ.ನಾಯ್ಕ, ಜಿಲ್ಲಾ ಸಾಹಿತ್ಯ ಪರಿಷತ್ ಮಾಜಿ ಕಾರ್ಯದರ್ಶಿ ಬೀರಣ್ಣ ನಾಯ್ಕ ಮೊಗಟಾ, ಸಾಹಿತಿಗಳಾದ ತಮ್ಮಣ್ಣ ಬೀಗಾರ್, ಜಿ.ಜಿ. ಹೆಗಡೆ, ಪಿ.ಆರ್.ನಾಯ್ಕ ಕುಮಟಾ, ರತ್ನಾಕರ ನರಮುಂಡಿಗೆ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.