

ಎರಡನೇ ಹಂತದ ನಾಳೆಯ ಗ್ರಾ.ಪಂ. ಚುನಾವಣೆ ಮುಗಿದರೆ ರಾಜ್ಯದಲ್ಲಿ ಮತ್ತೆ ಕನಿಷ್ಟ 5 ವರ್ಷ ಗ್ರಾ.ಪಂ. ಚುನಾವಣೆ ಇಲ್ಲ. ಈ ವರ್ಷದ ಚುನಾವಣೆ ವಿಶೇಶವೆಂದರೆ….. ಕೆಲವು ಹೊಸಮುಖಗಳು ಚುನಾವಣೆ ಎದುರಿಸಿದ್ದು ಮತ್ತು ಅದೇ ಕೆಲವು ಹಳೆ ತಲೆಗಳು ಚುನಾವಣಾ ಕಣದಲ್ಲಿರುವುದು.
ರಾಜ್ಯ, ಜಿಲ್ಲೆ, ತಾಲೂಕು ಮಟ್ಟಗಳಲ್ಲಿ ಈ ಚುನಾವಣೆ ನಡೆದು ಗ್ರಾಮೀಣ ಜನರು ಈ ವರ್ಷ ತಮ್ಮ ಹೊಸಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುತಿದ್ದಾರೆ. ಸಿದ್ಧಾಪುರದಲ್ಲಿ ಚುನಾವಣೆಯ ತುರುಸು ತಾರಕಕ್ಕೇರಿದ್ದು ಬಿ.ಜೆ.ಪಿ.ಯಲ್ಲಿ ಬಿ.ಜೆ.ಪಿ. ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಕೆ.ಜಿ.ನಾಯ್ಕ ಮತ್ತು ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನಡುವಿನ ಮೊದಲ ಬಲಾಬಲ ಪರೀಕ್ಷೆ ಎನ್ನಲಾಗುತ್ತಿದೆ.
ಈಗ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ಜಿಲ್ಲಾ ಬಿ.ಜೆ.ಪಿ. ಮಾಜಿ ಅಧ್ಯಕ್ಷ ಕೆ.ಜಿ.ನಾಯ್ಕ ಬಣ ಸಿದ್ಧಾಪುರ ತಾಲೂಕಿನಾದ್ಯಂತ ಹೆಚ್ಚು ಜನರನ್ನು ಕಣಕ್ಕಿಳಿಸಿದ್ದಾರೆ. ಇವರ ಬಣದ ಕಾರ್ಯಕರ್ತರ ವಿರುದ್ಧ ಶಾಸಕ ವಿಶ್ವೇಶ್ವರ ಹೆಗಡೆ ಕೆಲವು ಸ್ವಜಾತಿಯವರು, ಈಗ ಕಾಂಗ್ರೆಸ್ ಪಕ್ಷದೊಂದಿಗೆ ಮುನಿಸಿಕೊಂಡು ಕಾಂಗ್ರೆಸ್ ಬಂಡಾಯ ಮತ್ತು ಅಧೀಕೃತ ಬಿ.ಜೆ.ಪಿ. ಸೇರ್ಪಡೆಯಾದವರಿಗೆ ಧನ ಸಹಾಯ ಮಾಡಿ ಬಲಾಬಲ ಪರೀಕ್ಷೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಈ ಬಿ.ಜೆ.ಪಿ. ಬಣ ಹೋರಾಟದ ಎದುರು ಕಾಂಗ್ರೆಸ್ ಕಾರ್ಯಕರ್ತರು ಸೆಣಸುತಿದ್ದು ಕಾಂಗ್ರೆಸ್ ನಲ್ಲಿ ಕೂಡಾ ವಸಂತನಾಯ್ಕ ಬಣ ಮತ್ತು ದೇಶಪಾಂಡೆ ಪರವಾಗಿರುವ ಬಿ.ಜೆ.ಪಿ. ಬಣ ತಯಾರಾಗಿರುವ ವರ್ತಮಾನವಿದೆ.
ವಸಂತನಾಯ್ಕರ ಅನಾರೋಗ್ಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಜವಾಬ್ಧಾರಿ ನಿರ್ವಹಿಸಿರುವ ವಿ.ಎನ್. ನಾಯ್ಕ ಮತ್ತು ಕೆಲವರು ಕಾಂಗ್ರೆಸ್ ನ ಭೀಮಣ್ಣ ನಾಯ್ಕ ಮತ್ತು ಸುಷ್ಮಾ ರಾಜ್ ಗೋಪಾಲರೆಡ್ಡಿ ನೀಡಿರುವ ತಲಾ ಐದು ಸಾವಿರ ರೂಪಾಯಿಗಳನ್ನು ಅಭ್ಯರ್ಥಿಗಳಿಗೆ ತಲುಪಿಸಿರುವ ವರ್ತಮಾನವಿದೆ.
ಬಿ.ಜೆ.ಪಿ. ಯಲ್ಲಿ ಕೆ.ಜಿ.ನಾಯ್ಕರ ನೇತೃತ್ವದ ಬಣ ತಮ್ಮ ಅಭ್ಯರ್ಥಿಗಳಿಗೆ ತಲಾ 10-15 ಸಾವಿರ ತಲುಪಿಸಿದ್ದರೆ, ಶಾಸಕರು, ಸಂಸದರ ಅಭ್ಯರ್ಥಿಗಳು ಅವರ ನೇರ ಸಂಪರ್ಕದ ಹುರಿಯಾಳುಗಳಿಗೆ ತಲಾ 25 ಸಾವಿರ ಚುನಾವಣಾ ವೆಚ್ಚ ಬಂದಿರುವ ವರ್ತಮಾನವಿದೆ. ಇಂಥ ಜಿದ್ದಾಜಿದ್ದಿನ ಸ್ಫರ್ಧೆಯಲ್ಲಿ ಈಗಿನ ಜಿ.ಪಂ. ಸದಸ್ಯ, ಬಿ.ಜೆ.ಪಿ. ತಾಲೂಕಾಧ್ಯಕ್ಷ ನಾಗರಾಜ್ ನಾಯ್ಕ ಬೇಡ್ಕಣಿ ಯುವಕರು, ಉತ್ತಮ ಅಭ್ಯರ್ಥಿಗಳ
ನ್ನು ಹಾಕಿರುವುದರಿಂದ ಬಿ.ಜೆ.ಪಿ. ಬೆಂಬಲಿತರೇ 20 ಗ್ರಾಮ ಪಂಚಾಯತ್ ಗಳಲ್ಲಿ ಗೆದ್ದು ಅಧಿಕಾರ ಹಿಡಿಯಲಿದ್ದಾರೆ ಎಂದರೆ,
ಜಿ.ಪಂ. ಮಾಜಿ ಸದಸ್ಯ ವಿ.ಎನ್. ನಾಯ್ಕ ಬಿ.ಜೆ.ಪಿ. ಅಂತ:ಕಲಹ, ಜೆ.ಡಿ.ಎಸ್. ನಿಷ್ಕ್ರೀಯತೆ ನಡುವೆ ಕಾಂಗ್ರೆಸ್ ಬೆಂಬಲಿಗರು ಆಯ್ಕೆಯಾಗಲಿದ್ದು 20 ಕ್ಕಿಂತ ಹೆಚ್ಚು ಗ್ರಾಮ ಪಂಚಾಯತ್ ಗಳಲ್ಲಿ ಕಾಂಗ್ರೆಸ್ ಬೆಂಬಲಿತರೇ ಅಧಿಕಾರ ಹಿಡಿಯಲಿದ್ದಾರೆ ಎನ್ನುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.



ಈ ಮಧ್ಯೆ ಶಿರಸಿ ಕೊಪ್ಪದ ಅರುಣ ನಾಯ್ಕ ಕೊಪ್ಪ, ಬಿದ್ರಕಾನಿನ ರಾಮಚಂಧ್ರ ನಾಯ್ಕ ಸದೇಗುಡ್ಡೆ, ಕೋಲಶಿರ್ಸಿಯ ಬಾಲಕೃಷ್ಣ ನಾಯ್ಕ, ಗೋಪಾಲ ನಾಯ್ಕ, ಬೇಡ್ಕಣಿಯ ಪದ್ಮಪ್ರೀಯಾ ನಾಯ್ಕ, ವೀರಭದ್ರ ನಾಯ್ಕ ಮಳಲವಳ್ಳಿ, ಕೆ.ಟಿ. ನಾಯ್ಕ ಹೆಗ್ಗೇರಿ ಮತ್ತು ಎಸ್.ಆರ್. ನಾಯ್ಕ, ಹೆಗ್ಗರಣಿಯ ಶೇಖರ್ ನಾಯ್ಕ, ಬಿಕ್ಕಳಸೆಯ ಅಣ್ಣಪ್ಪ ನಾಯ್ಕ, ಶಿರಳಗಿಯ ಅಣ್ಣಪ್ಪ ನಾಯ್ಕ, ಬಿಳಗಿಯ ಸುವರ್ಣ ನಾಯ್ಕ, ಇಟಗಿಯ ಮಹಾಬಲೇಶ್ವರ ಭಟ್, ದೊಡ್ಮನೆಯ ಸುಬ್ರಾಯ ಹೆಗಡೆ ಗೋಳಗೋಡಿನ ಗಂಗಾಧರ ನಾಯ್ಕ ಸೇರಿದ ಕೆಲವರು ಆಯ್ಕೆಯಾದರೆ ಉತ್ತಮ ಎನ್ನುವ ಸಾರ್ವಜನಿಕ ಅಭಿಪ್ರಾಯವಿದೆ.
