

ಜಾತಿ ಸೂಚಕ ಹೆಸರುಗಳನ್ನು ವಾಹನಗಳ ಮೇಲೆ ಬರೆಸಿದರೆ ದಂಡ ವಿಧಿಸುವ ನಿಯಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಸೂಚನೆ ನೀಡಲಾಗಿದೆ.

ಲಖನೌ: ಜಾತಿ ಸೂಚಕ ಹೆಸರುಗಳನ್ನು ವಾಹನಗಳ ಮೇಲೆ ಬರೆಸಿದರೆ ದಂಡ ವಿಧಿಸುವ ನಿಯಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಸೂಚನೆ ನೀಡಲಾಗಿದೆ.
ಉತ್ತರ ಪ್ರದೇಶ ಸಾರಿಗೆ ಆಯುಕ್ತರು ಈ ಆದೇಶ ಹೊರಡಿಸಿದ್ದು, ಈ ರೀತಿಯಾದ ಬರಹಗಳು ಯಾವುದೇ ನಂಬರ್ ಪ್ಲೇಟ್ ಗಳು ಹಾಗೂ ವಾಹನಗಳ ಮೇಲೆ ಕಂಡುಬಂದಲ್ಲಿ ಈಗಾಗಲೇ ಇರುವ ನಿಯಮಗಳ ಅಡಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪ್ರಾದೇಶಿಕ ಸಾರಿಗೆ ಕಚೇರಿಗೆ ಆಯುಕ್ತರು ಸೂಚನೆ ನೀಡಿದ್ದಾರೆ.
ಅಧಿಕಾರಿಗಳ ಪ್ರಕಾರ ಸಾಮಾನ್ಯವಾಗಿ ನೀಡಬಹುದಾದ ಚಲನ್ ಗಳನ್ನೇ ಈ ಪ್ರಕರಣಗಳಲ್ಲಿಯೂ ನೀಡಬೇಕಾಗುತ್ತದೆ, ಕಾನೂನಿನಲ್ಲಿ ಇಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.
ವ್ಯಕ್ತಿಯ ಸಾಮಾಜಿಕ ಸ್ತರವನ್ನು ಪ್ರದರ್ಶಿಸುವುದು, ಜಾತಿಗಳ ಹೆಸರನ್ನು ಬರೆಸಿಕೊಳ್ಳುವುದು ರಾಜ್ಯದಲ್ಲಿ ಟ್ರೆಂಡ್ ಆಗುತ್ತಿದೆ. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ನಿಯಮಗಳನ್ನು ಕಠಿಣವಾಗಿ ಜಾರಿಗೆ ತರಲು ಸೂಚಿಸಲಾಗಿದೆ ಎಂದು ಯುಪಿ ಸಾರಿಗೆ ಆಯುಕ್ತ ಧೀರಜ್ ಸಾಹು ತಿಳಿಸಿದ್ದಾರೆ. (kpc)
