ಮಾನವೀಯತೆ ಮೆರೆದ ಲಂಬಾಪುರ ಸೇವಾ ಸಹಕಾರಿ ಸಂಘದ ನೌಕರರು

ಸಿದ್ದಾಪುರತಾಲೂಕಿನ ಹಾರ್ಸಿಕಟ್ಟಾ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸೋಮವಾರ ಸಂಘದ ಕಚೇರಿಯಲ್ಲಿ ನಡೆಯಿತು.
ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ 2019-20ನೇ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿ ಸಂಘದಲ್ಲಿ ಪ್ರಸಕ್ತ ಸಾಲಿನಲ್ಲಿ ಹಾಲಿನ ಶೇಖರಣೆ ಹಾಗೂ ಪಶು ಆಹಾರ ಮಾರಾಟ ಕಡಿಮೆ ಆಗಿದ್ದರಿಂದ ಲಾಭಾಂಶವೂ ಕಡಿಮೆ ಆಗಿದೆ. ಆದರೂ ಪ್ರತಿವರ್ಷದಂತೆ ಸಂಘಕ್ಕೆ ಹೆಚ್ಚು ಹಾಲು ನೀಡಿದ ಹಾಗೂ ಹಾಲು ಹಾಕುವ ಎಲ್ಲ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುತ್ತಿದೆ. ಸಂಘದ ಎಲ್ಲ ಖರ್ಚು ವೆಚ್ಚಗಳನ್ನು ತೆಗೆದು 11ಸಾವಿರದ 957ರೂ ಲಾಭ ಹೊಂದಿದೆ ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಸಂಘದ ಅಧ್ಯಕ್ಷ ಶ್ರೀಧರ ಎಂ.ಭಟ್ಟ ಮಾತನಾಡಿ ಕರೊನಾ ಸಾಂಕ್ರಮಿಕ ರೋಗ ಹರಡುವಿಕೆಯ ಹಿನ್ನೆಲೆಯಲ್ಲಿ ಹಾಲಿನ ಶೇಖರಣೆ ಕಡಿಮೆ ಆಗಿದ್ದು ಈ ಸಂದರ್ಭದಲ್ಲಿ ಸಂಘದ ಸಿಬ್ಬಂದಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಅವರಿಗೆ ಪ್ರೋತ್ಸಾಹ ದನವನ್ನು ನೀಡಲಾಗುವುದು. ಸಂಘದ ಎಲ್ಲ ಸದಸ್ಯರು ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದ ಸದಸ್ಯರಾಗಿ ಅದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.


ಬಹುಮಾನ: ಸಂಘಕ್ಕೆ ಹೆಚ್ಚು ಹಾಲು ಪೂರೈಸಿದ ಗೋಪಾಲಕೃಷ್ಣ ದೇವರು ಹೆಗಡೆ ಊರತೋಟ, ಶ್ರೀಧರ ಭಟ್ಟ ಮಾಣಿಕ್ನಮನೆ(ಪ್ರಥಮ), ಗಣೇಶಮೂರ್ತಿ ಆರ್.ಹೆಗಡೆ ಊರತೋಟ, ಸವಿತಾ ನಾರಾಯಣ ಗೌಡ ಹಾರ್ಸಿಕಟ್ಟಾ(ದ್ವಿತೀಯ), ಎಂ.ಜಿ.ನಾಯ್ಕ ಹುಬ್ಬಗೈ,ಎಂ.ಎಚ್.ನಾಯ್ಕ ಹುಬ್ಬಗೈ(ತೃತೀಯ)ಬಹುಮಾನ ಹಾಗೂ ಎಲ್ಲ ಸದಸ್ಯರಿಗೆ ಮಾಸ್ಕನ್ನು ವಿತರಿಸಲಾಯಿತು.
ಉಪಾಧ್ಯಕ್ಷ ಮಂಜುನಾಥ ಗಣಪ ನಾಯ್ಕ, ಜಿ.ಡಿ.ಹೆಗಡೆ, ಅನಂತ ಹೆಗಡೆ, ಎ.ವಿ.ಹೆಗಡೆ, ಸವಿತಾ ಹೆಗಡೆ, ಮೋಹನ ರಾಮ ನಾಯ್ಕ, ಎಸ್.ಡಿ.ಹೆಗಡೆ ಹೇಗೆ ಸೇರಿದಂತೆ ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಪ್ರಮೋದ ಕೊಡಿಯಾ ಹೊನ್ನೆಹದ್ದ ಸಹಕರಿಸಿದರು.

ಮಾನವೀಯತೆ ಮೆರೆದ ಲಂಬಾಪುರ ಸೇವಾ ಸಹಕಾರಿ ಸಂಘದ ನೌಕರರು
ಸಿದ್ಧಾಪುರದ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಲಂಬಾಪುರದಲ್ಲಿ ಸಾಲ ಪಡೆದ ಸಾಲಗಾರರು ಮರಣ ಹೊಂದಿದ ಕಾರಣ ಅವರ ಸಾಲದ ಬಾಬ್ತನ್ನು ವಿ.ಎಸ್.ಎಸ್. ನೌಕರರು ಭರಿಸಿದ ಅಪರೂಪದ ಘಟನೆ ವರದಿಯಾಗಿದೆ.

ಸಂಘದ ಸದಸ್ಯರು ಪ ಡೆದ ಸಾಲ ಸುಸ್ತಿ ಬಾಕಿ ಆಗಿದ್ದು, ಸಾಲ ವಸೂಲಿಗಾಗಿ ಮನೆಬಾಗಿಲಿಗೆ ಹೋದಾಗ ವಾರಸುದಾರರದಯನೀಯ ಸ್ಥಿತಿ ಕಂಡ ಸಂಘದ ಮುಖ್ಯಕಾರ್ಯನಿರ್ವಾಹಕರಾದ ಬಾಲಚಂದ್ರ ಜಿ ಭಟ್‍ ಸಂಘದ ಸಿಬ್ಬಂಧಿಗಳಿಗೆ ಈ ವಿಚಾರ ಹೇಳಿ ಸಾಲಗಾರರಾದಗಾಯತ್ರಿ ಶ್ರೀಧರ ನಾಯ್ಕ್ ಹುಕ್ಕಳಿ ಮತ್ತು ಬಂಗಾರಿಕನ್ನ ಹಸ್ಲರ್ ಗೊದ್ದಲಮನೆ ಎನ್ನುವವರ ಸಾಲವನ್ನು ಸಂಘದ ಸಿಬ್ಬಂಧಿಗಳ ಪಗಾರಿನಿಂದ ಸಾಲ ಚುಕ್ತ ಮಾಡಿಕೊಡುವ ವಿಚಾರ ಮಾಡಿ ಸಂಘದಎಲ್ಲಾ ಸಿಬ್ಬಂಧಿಗಳಿಂದ ರೂ 93790 ಹಣವನ್ನು ದಿನಾಂಕ 23/12/2020 ರಂದು ನಡೆದ ವಾರ್ಷಿಕ ಸರ್ವಸಾಧಾರಣಾ ಸಭೆಯಲ್ಲಿ ಶೇಕಡ 2% ಬಡ್ಡಿಯಲ್ಲಿ ಸಾಲ ಚುಕ್ತಪಡಿಸಿಕೊಡುವುದಾಗಿ ಘೋಷಣೆ ಮಾಡಿದರು. ನೌಕರರ ಮಾನವೀಯತೆಯಘೋಷಣೆ ಕೇಳಿ ಸಭೆಯಲ್ಲಿ ಹಾಜರಾದಎಲ್ಲಾ ಸದಸ್ಯರು ಚಪ್ಪಾಳೆ ಮೂಲಕ ಒಪ್ಪಿಗೆ ಸೂಚಿಸಿದರು.
ಸಂಘದ 61 ನೇ ವಾರ್ಷಿಕ ಮಹಾಸಭೆಯಲ್ಲಿ ಸಂಘದಅಧ್ಯಕ್ಷ ಎಂ ಐ ನಾಯ್ಕ್ ಕೆಳ್ಗಿನಸಸಿ ಈ ವರ್ಷ ಸಂಘವು 11.48 ಲಕ್ಷ ಲಾಭ ಗಳಿಸಿದೆ ಎಂದುಘೋಷಣೆ ಮಾಡಿದರು.

ಸಭೆಯಲ್ಲಿ ಆಡಳಿತ ಕಮೀಟಿಯಎಲ್ಲಾ ಸದಸ್ಯರು, ಟಿ.ಎಂ.ಎಸ್‍ಅಧ್ಯಕ್ಷರುಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ಧೇಶಕ ಆರ್ ಎಂ ಹೆಗಡೆ ಬಾಳೇಸರ ಹಾಜರಿದ್ದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ,ಸಿದ್ದಾಪುರ(ಉ.ಕ)
ದಿನಾಂಕ : 28-12-2020 ರ ಸಿದ್ದಾಪುರ ಪೇಟೆ ಧಾರಣೆ
ಅ.ನಂ. ಹುಟ್ಟುವಳಿಯ
ಹೆಸರು ಧಾರಣೆಗಳು (ಪ್ರತಿ ಕ್ವಿಂಟಲ್ಲಿಗೆ)
ಕನಿಷ್ಠ ಗರಿಷ್ಠ ಮಾದರಿ
1 ರಾಶಿ 38089 40009 39889
2 ತಟ್ಟಿಬೆಟ್ಟೆ 30089 38699 34899
3 ಕೆಂಪಗೋಟು 22199 26100 25089
4 ಬಿಳಿಗೋಟು 19999 29389 27000
5 ಚಾಲಿ 36689 37339 37139
6 ಹೊಸ ಚಾಲಿ 27309 32139 31799
7 ಕೋಕಾ 15509 27800 24199
8 ಕಾಳುಮೆಣಸು 32469 33139 33139
9 ಹಸಿ ಅಡಿಕೆ 5101 5359 5227
10 ಹಣ್ಣು ಅಡಿಕೆ 5680 6256 5819

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಅಕಾಲಿಕ ಮಳೆ, ಜಾತ್ರೆ, ವಾರ್ಷಿಕೋತ್ಸವಗಳಿಗೆ ಅಡ್ಡಿ… ಶಾಸಕರ ಮಿಂಚಿನ ಸಂಚಾರ!

ಮಲೆನಾಡು ಕರಾವಳಿಯ ಅಕಾಲಿಕ ಮಳೆ ಬೇಸಿಗೆಯ ಉಷ್ಣವನ್ನು ಶಮನ ಮಾಡಿದ್ದರೆ… ಪೂರ್ವನಿಶ್ಚಿತ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *