ಕಾರ್ಕಳ: ರಸ್ತೆ ಮೇಲೆ “ಹೊಸ ವರ್ಷದ ಶುಭಾಶಯ” ಬರೆಯುತ್ತಿದ್ದಾಗಲೇ ಕಾರು ಢಿಕ್ಕಿಯಾದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆ ಕಾರ್ಕಳದಲ್ಲಿ ನಡೆದಿದೆ.

ಕಾರ್ಕಳ: ರಸ್ತೆ ಮೇಲೆ “ಹೊಸ ವರ್ಷದ ಶುಭಾಶಯ” ಬರೆಯುತ್ತಿದ್ದಾಗಲೇ ಕಾರು ಢಿಕ್ಕಿಯಾದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆ ಕಾರ್ಕಳದಲ್ಲಿ ನಡೆದಿದೆ.
ಕಾರ್ಕಳದ ಮಿಯಾರು ಕಾಜರಬೈಲು ಸಮೀಪ ನಿನ್ನೆ ತಡರಾತ್ರಿ ನಡೆದ ಘಟನೆಯಲ್ಲಿ ಶರಣ್ (26) ಹಾಗೂ ಸಿದ್ದು (25) ಎನ್ನುವವರು ಮೃತಪಟ್ಟಿದ್ದಾರೆ.
ಮೃತರು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನವರೆಂದು ತಿಳಿದುಬಂದಿದ್ದು ಘಟನೆಯಲ್ಲಿ ತೌಸೀಫ್ ಹಾಗೂ ಬಸವರಾಜ್ ಎನ್ನುವ ಇನ್ನಿಬ್ಬರಿಗೆ ಗಾಯಗಳಾಗಿದೆ. ಗಾಯಾಳುಗಳಿಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹೊಸ ವರ್ಷದ ಹಿನ್ನೆಲೆ ಈ ನಾಲ್ವರು ರಸ್ತೆ ಮೇಲೆ “ಹೊಸ ವರ್ಷದ ಶುಭಾಶಯ” ಬರೆಯುವುದಕ್ಕಾಗಿ ಸೇರಿದ್ದರು. ಈ ವೇಳೆ ವೇಗವಾಗಿ ಬಂದ ಮಾರುತಿ ಇಕೋ ಕಾರು ಢಿಕ್ಕಿಯಾಗಿ ಈ ಅವಘಡ ಸಂಭವಿಸಿದೆ.
ಘಟನೆ ಸಂಬಂಧ ಕಾರ್ಕಳ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (kpc)