

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಆಸೆ-ಆಮಿಷ, ಬೆದರಿಕೆ ಮೂಲಕ ಬಿಜೆಪಿ ಸೆಳೆಯುತ್ತಿದೆ: ಸಿದ್ದರಾಮಯ್ಯ
ರಾಜ್ಯ ಕಾಂಗ್ರೆಸ್ ಗೆ ಇದು ಸತ್ವ ಪರೀಕ್ಷೆಯ ಕಾಲ. ಮತದಾರರ ವಿಶ್ವಾಸವನ್ನು ಗೆಲ್ಲಲಾಗದ ಬಿಜೆಪಿ ಹಲವಾರು ಕಡೆಗಳಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಆಸೆ-ಆಮಿಷ ಮತ್ತು ಬೆದರಿಕೆ ಮೂಲಕ ಸೆಳೆಯುವ ಪ್ರಯತ್ನ ಮಾಡುತ್ತಿರುವ ಬಗ್ಗೆ ದೂರುಗಳಿವೆ.
ಹಳ್ಳಿಪೈಟ್ ಗ್ರಾಮ ಪಂಚಾಯತ್ ಚುನಾವಣೆ ಮುಕ್ತಾಯವಾಗಿದ್ದು ರಾಜ್ಯದಲ್ಲಿ ಬಿ.ಜೆ.ಪಿ. ಬೆಂಬಲಿತರು ಹೆಚ್ಚು ಕಡೆ ಆಯ್ಕೆಯಾಗಿದ್ದಾರೆ ಎಂದು ಬಿ.ಜೆ.ಪಿ. ಹೇಳಿಕೊಂಡಿದೆ. ಕಾಂಗ್ರೆಸ್ ತಮ್ಮ ಪಕ್ಷದ ಬೆಂಬಲಿತರ ಸಂಖ್ಯೆ ಹೆಚ್ಚು ಎಂದು ಸಾರಿದೆ. ಇದರ ಮಧ್ಯೆ ಜೆ.ಡಿ.ಎಸ್. ಕೂಡಾ ತೃಪ್ತಿಕರ ಸಾಧನೆ ಮಾಡಿದೆ ಎಂದು ಜೆ.ಡಿ.ಎಸ್. ಬೀಗಿದೆ.
ವಾಸ್ತವದಲ್ಲಿ ಇವೆಲ್ಲಾ ಸಂಪೂರ್ಣ ಸತ್ಯವಲ್ಲದಿದ್ದರೂ ಬಿ.ಜೆ.ಪಿ. ಇತರ ಪಕ್ಷಗಳ ಬೆಂಬಲಿಗ ಸದಸ್ಯರನ್ನು ಖರೀದಿಸುವ ತಂತ್ರ ಮಾಡುತ್ತಿದೆ ಎನ್ನುವ ಆರೋಪಗಳಿವೆ.
ಸಿದ್ಧಾಪುರ ಸಮಾಚಾರ- ಸಿದ್ಧಾಪುರ ತಾಲೂಕಿನ ಒಟ್ಟೂ 23 ಗ್ರಾಮ ಪಂಚಾಯತ್ ಗಳಲ್ಲಿ 13 ರಲ್ಲಿ ಕಾಂಗ್ರೆಸ್ ಬೆಂಬಲಿಗರು ಆಯ್ಕೆಯಾಗಿದ್ದು ಇನ್ನೂ 2-3 ಕಡೆ ಸಮಬಲವಿದೆ. ಒಂದಂಕಿ ದಾಟದ ಬಿ.ಜೆ.ಪಿ. ತನ್ನ ಬೆಂಬಲಿಗರೇ ಹೆಚ್ಚು ಕಡೆ ಆಯ್ಕೆಯಾಗಿದ್ದು ತಾಲೂಕಿನ ಹೆಚ್ಚು ಪಂಚಾಯತ್ ಗಳಲ್ಲಿ ಅಧಿಕಾರ ಹಿಡಿಯುವುದಾಗಿ ಹೇಳುತ್ತಿದೆ. ಹೀಗೆ ಹೇಳುತ್ತಾ ಬೇರೆ ಪಕ್ಷಗಳ ಬೆಂಬಲಿತರನ್ನು ಆಮಿಷವೊಡ್ಡಿ ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಬಲವಾಗಿ ಆರೋಪಿಸಿರುವ ಕಾಂಗ್ರೆಸ್ ನಾಯಕರು ಅಣಲೇಬೈಲ್ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಅಣಲೇಬೈಲ್,ತ್ಯಾಗಲಿ, ಬಿದ್ರಕಾನ್ ಗಳಲ್ಲಿ ಕಾಂಗ್ರೆಸ್ ಬೆಂಬಲತರೇ ಬಹುಸಂಖ್ಯಾತರು.
ಹಲಗೇರಿ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಶಿರಳಗಿಯೊಂದನ್ನು ಬಿಟ್ಟು ಉಳಿದ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಕಾಂಗ್ರೆಸ್ ಬೆಂಬಲಿತರೇ ಬಹುಸಂಖ್ಯೆಯಲ್ಲಿದ್ದಾರೆ. ದೊಡ್ಮನೆ ಜಿ.ಪಂ. ಕ್ಷೇತ್ರದಲ್ಲಿ 5 ಕಡೆ ನಮಗೆ ಬಹುಮತವಿದೆ ಎಂದಿದೆ. ಈ ಬಗ್ಗೆ ಸಮಾಜಮುಖಿಗೆ ಪ್ರತಿಕ್ರೀಯಿಸಿರುವ ತಾಲೂಕಾ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ವೈಯಕ್ತಿಕ ಆರೋಗ್ಯ ತೊಂದರೆ ಕೆಲವು ಅಡಚಣೆಗಳ ನಡುವೆ ತಾಲೂಕಿನ ಕೆಲವು ಕಡೆ ಬಿ.ಜೆ.ಪಿ. ಪ್ರಭಾವವಿರುವ ಕಡೆ ಕೂಡಾ ಕಾಂಗ್ರೆಸ್ ಬೆಂಬಲಿಗರನ್ನು ಗೆಲ್ಲಿಸಿದ್ದೇವೆ. ಈ ಸ್ಥಿತಿಯಲ್ಲಿ ಬಿ.ಜೆ.ಪಿ. ತಾಲೂಕಿನಲ್ಲಿ ತಮ್ಮ ಬೆಂಬಲಿಗ ಸದಸ್ಯರು ಆಯ್ಕೆಯಾಗಿದ್ದಾರೆಂದು ಸುಳ್ಳು ಹೇಳುತ್ತಾ ಚುನಾಯಿತ ಸದಸ್ಯರಿಗೆ ಆಮಿಷವೊಡ್ಡಿ ತನ್ನ ಸುಳ್ಳು ಸಮರ್ಥನೆಗೆ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ತಾಲೂಕಿನ 13 ಗ್ರಾ.ಪಂ. ಗಳಲ್ಲಿ ಬಿ.ಜೆ.ಪಿ. ಬೆಂಬಲಿತರು ಹೆಚ್ಚು ಆಯ್ಕೆಯಾಗಿದ್ದು ಅಲ್ಲಿ ಬಿ.ಜೆ.ಪಿ. ಬೆಂಬಲಿತರ ಆಡಳಿತ ಬರಲಿದೆ.ಎರಡು ಕಡೆ ಸ್ವತಂತ್ರರ ಬೆಂಬಲದಿಂದ ಬಿ.ಜೆ.ಪಿ. ಬೆಂಬಲಿತರ ಆಡಳಿತ ತರುವ ಪ್ರಯತ್ನ ಮಾಡುತಿದ್ದೇವೆ. ತಾಲೂಕಿನಲ್ಲಿ ಹೆಚ್ಚು ಕಡೆ ಬಿ.ಜೆ.ಪಿ. ಬೆಂಬಲಿತರೇ ಅಧಿಕಾರ ಗ್ರಹಣ ಮಾಡಲಿದ್ದಾರೆ.
– ನಾಗರಾಜ್ ನಾಯ್ಕ, ಬೇಡ್ಕಣಿ ( ಬಿ.ಜೆ.ಪಿ. ಸಿದ್ಧಾಪುರ ತಾಲೂಕಾ ಘಟಕದ ಅಧ್ಯಕ್ಷ)






ಬೆಂಗಳೂರು: ರಾಜ್ಯ ಕಾಂಗ್ರೆಸ್ ಗೆ ಇದು ಸತ್ವ ಪರೀಕ್ಷೆಯ ಕಾಲ. ಮತದಾರರ ವಿಶ್ವಾಸವನ್ನು ಗೆಲ್ಲಲಾಗದ ಬಿಜೆಪಿ ಹಲವಾರು ಕಡೆಗಳಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಆಸೆ-ಆಮಿಷ ಮತ್ತು ಬೆದರಿಕೆ ಮೂಲಕ ಸೆಳೆಯುವ ಪ್ರಯತ್ನ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಇಂತಹ ಕೃತ್ಯಗಳು ಖಂಡನೀಯ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪಂಚಾಯತ್ ವ್ಯವಸ್ಥೆ ಜಾರಿಗೆ ಬಂದ ದಿನದಿಂದ ಗ್ರಾಮೀಣ ಪ್ರದೇಶದ ಮತದಾರರು ಎಂದೂ ಕಾಂಗ್ರೆಸ್ ಪಕ್ಷವನ್ನು ಕೈಬಿಟ್ಟಿಲ್ಲ. ರೈತಪರ, ಬಡವರ ಪರ ಮತ್ತು ಗ್ರಾಮಭಾರತದ ಪರವಾಗಿರುವ ಕಾಂಗ್ರೆಸ್ ನೀತಿ ಮತ್ತು ಕಾರ್ಯಕ್ರಮಗಳು ಇದಕ್ಕೆ ಕಾರಣ. ಗೆಲುವಿನ ಪರಂಪರೆ ಈ ಬಾರಿಯೂ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ರೈತವಿರೋಧಿ ಮತ್ತು ಬಡವರ ವಿರೋಧಿ ನೀತಿಯಿಂದ ರೋಸಿಹೋದ ಗ್ರಾಮೀಣ ಜನತೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವಿನ ಹಾದಿಯಲ್ಲಿರುವ ವರದಿಗಳು ಬರುತ್ತಿವೆ ಎಂದು ಸಿದ್ದರಾಮಯ್ಯ ಟ್ವೀಟ್ ನಲ್ಲಿ ತಿಳಿಸಿದ್ದಾರೆ. (kpc)
