

ಶಿರಸಿ-ಸಿದ್ಧಾಪುರ, ಉತ್ತರ ಕನ್ನಡ, ಕರಾವಳಿ ಉದ್ದಕ್ಕೂ ವಿಸ್ತರಿಸಿದ ಸಂಘ ಶಕ್ತಿಯ ವಿರುದ್ಧ ಬಹುಜನಶಕ್ತಿ ಅಥವಾ ದಲಿತಶಕ್ತಿ ಶಕ್ತಿಯುತವಾಗುವ ಲಕ್ಷಣ ಈ ಗ್ರಾಮ ಪಂಚಾಯತ್ ಚುನಾವಣೆ ಪ್ರತಿಬಿಂಬಿಸಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಅತಿಹೆಚ್ಚು ಪ್ರಮಾಣದ ಸಾವಿರ ಸಂಖ್ಯೆಯಲ್ಲಿ ಗ್ರಾಮ ಪಂಚಾಯತ್ ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಹೆಚ್ಚು ಶಾಸಕರು, ಸಂಸದರನ್ನು ಹೊಂದಿರುವ ಬಿ.ಜೆ.ಪಿ. ಮೂರಂಕಿ ಸಂಖ್ಯೆಗಳನ್ನು ದಾಟಿಲ್ಲ, ಜೆ.ಡಿ.ಎಸ್. ಮೂರಂಕಿಗೆ ಸಮಾಧಾನ ಪಟ್ಟಿದೆ.
ಬನವಾಸಿಯಲ್ಲಿ 9 ವಾರ್ಡ್ ಗಳಲ್ಲಿ 9 ಕಡೆ ಮುಸ್ಲಿಂ ಸಮೂದಾಯದವರೇ ಆಯ್ಕೆಯಾಗಿ ಆಡಳಿತಾರೂಢ ಬಿ.ಜೆ.ಪಿ.ಗೆ ಮುಟ್ಟಿನೋಡಿಕೊಳ್ಳುವಂಥಹ ಏಟು ನೀಡಿದೆ.
ಸಿದ್ಧಾಪುರದಲ್ಲಿ ಆಡಳಿತ ಬಿ.ಜೆ.ಪಿ 23 ಗ್ರಾಮ ಪಂಚಾಯತ್ಗಳ 46 ಪರಿಶಿಷ್ಟರ ಸ್ಥಾನಗಳಿಗೆ ಮಹಿಳಾ ಮೀಸಲಾತಿ ನಿಗದಿಪಡಿಸಿ ಪುರುಷ ಪರಿಶಿಷ್ಟರು ಸ್ಫರ್ಧಿಸದಂತೆ ಮೀಸಲಾತಿ ನಿಗದಿ ಮಾಡಿತ್ತು.ಈ ಉಳಿಗಮಾನ್ಯ ಬಿ.ಜೆ.ಪಿ. ಮನಸ್ಥಿತಿಗೆ ಸೆಡ್ಡುಹೊಡೆದಿರುವ ಕಾನಗೋಡು ಗ್ರಾ.ಪಂ. ನ ಮಾಜಿ ಅಧ್ಯಕ್ಷ ಶಿವಾನಂದ ಎಚ್.ಕೆ. ಸಾಮಾನ್ಯ ಕ್ಷೇತ್ರದಲ್ಲಿ ಸ್ಫರ್ಧಿಸಿ ಅನಂತಕುಮಾರ ಹೆಗಡೆ ಶಿಷ್ಯ ಮತ್ತು ಆರ್.ಎಸ್.ಎಸ್. ವ್ಯಕ್ತಿಯೆದುರು ಜಯ ಗಳಿಸಿ ದಾಖಲೆ ಮಾಡಿದ್ದಾರೆ.
ತಾನು ಕಸಗುಡಿಸುತ್ತಿದ್ದ ಪಂಚಾಯ್ತಿಗೆ ಈಗ ಅಧ್ಯಕ್ಷೆಯಾದ ಮಹಿಳೆ, ಥ್ಯಾಂಕ್ಸ್ ಟು ಪ್ರಜಾಪ್ರಭುತ್ವ!
ಸುಮಾರು ಒಂದು ದಶಕದ ಹಿಂದೆ ಕೇರಳದ ಪಥನಪುರಂ ಬ್ಲಾಕ್ ಪಂಚಾಯಿತಿಯಲ್ಲಿ ಅರೆಕಾಲಿಕ ಸ್ವೀಪರ್ (ಕಸಗುಡಿಸುವ ಕೆಲಸ) ಆಗಿ ಕೆಲಸ ಮಾಡುತ್ತಿದ್ದ ಆನಂದವಳ್ಳಿ ಅವರು, ತಾನೂ ಒಂದು ದಿನ ಈ ಸ್ಥಳೀಯ ಸಂಸ್ಥೆಯ ಮುಖ್ಯಸ್ಥೆಯಾಗಬಹುದು ಎಂದು ಯಾವತ್ತೂ ಭಾವಿಸಿರಲಿಲ್ಲ.

ಕೊಲ್ಲಂ: ಸುಮಾರು ಒಂದು ದಶಕದ ಹಿಂದೆ ಕೇರಳದ ಪಥನಪುರಂ ಬ್ಲಾಕ್ ಪಂಚಾಯಿತಿಯಲ್ಲಿ ಅರೆಕಾಲಿಕ ಸ್ವೀಪರ್ (ಕಸಗುಡಿಸುವ ಕೆಲಸ) ಆಗಿ ಕೆಲಸ ಮಾಡುತ್ತಿದ್ದ ಆನಂದವಳ್ಳಿ , ತಾನೂ ಒಂದು ದಿನ ಈ ಸ್ಥಳೀಯ ಸಂಸ್ಥೆಯ ಮುಖ್ಯಸ್ಥೆಯಾಗಬಹುದು ಎಂದು ಯಾವತ್ತೂ ಭಾವಿಸಿರಲಿಲ್ಲ. ಆದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಬೇಕಾದರೂ ಪ್ರಭು ಆಗಬಹುದು ಎಂಬುದನ್ನು ಈ ಮಹಿಳೆಯ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.
ದಮನಿತ ವರ್ಗಗಳ ಸಬಲೀಕರಣದ ಸಂಕೇತವಾಗಿ, ಪರಿಶಿಷ್ಟ ಜಾತಿಗೆ ಸೇರಿದ 46 ವರ್ಷದ ಸಿಪಿಎಂ ಸದಸ್ಯೆ ಆನಂದವಳ್ಳಿ ಅವರು ಇತ್ತೀಚಿಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಂತರ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
“ನಾನು ಅಂತಹ ಉನ್ನತ ಹುದ್ದೆಯನ್ನು, ಅದೂ ನಾನು ಅರೆಕಾಲಿಕ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ಅಲಂಕರಿಸುತ್ತೇನೆ ಎಂದು ಎಂದೂ ಯೋಚಿಸಿರಲಿಲ್ಲ” ಎಂದು ಇಬ್ಬರು ಮಕ್ಕಳ ತಾಯಿ ಆನಂದವಳ್ಳಿ ಅವರು ಹೇಳಿದ್ದಾರೆ.
ಇತ್ತೀಚೆಗೆ ನಡೆದ ಪಂಚಾಯಿತಿ ಚುನಾವಣೆಯಲ್ಲಿ ಬಹುಪಾಲು ಸ್ಥಾನಗಳನ್ನು ಗೆದ್ದ ಸಿಪಿಎಂ ನೇತೃತ್ವದ ಎಲ್‌ಡಿಎಫ್, ಪಥನಪುರಂ ಬ್ಲಾಕ್ ಪಂಚಾಯತ್ ಅಧ್ಯಕ್ಷ ಹುದ್ದೆಗೆ ಆನಂದವಳ್ಳಿ ಅವರ ಹೆಸರನ್ನು ಸೂಚಿಸಿತ್ತು. 13 ಸದಸ್ಯ ಬಲದ ಈ ಬ್ಲಾಕ್ ಪಂಚಾಯತ್‌ನಲ್ಲಿ ಎಲ್‌ಡಿಎಫ್ ಏಳು ಸ್ಥಾನಗಳನ್ನು ಗೆದ್ದರೆ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆರು ಸ್ಥಾನಗಳನ್ನು ಗಳಿಸಿತ್ತು. (kpc)






