

ಕಲುಶಿತ ನೀರು,ತ್ಯಾಜ್ಯ ಬಿಡಬಾರದೆಂದು ಬುದ್ದಿಹೇಳಿದ ವ್ಯಕ್ತಿಯನ್ನು ಮಾರಣಾಂತಿಕವಾಗಿ ಹೊಡೆದು ಗಾಯಗೊಳಿಸಿದ ಘಟನೆ ಸಿದ್ಧಾಪುರ ಕಾನಸೂರು ಗಣೇಶ್ ನಗರದಲ್ಲಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿ ಅಣ್ಣಪ್ಪ ನಾಯ್ಕ ಎನ್ನುವವರಾಗಿದ್ದು ಇವರ ಮೇಲೆ ಮಾರಣಾಂತಿಕ ಹಲ್ಲೆಮಾಡಿದವ್ಯಕ್ತಿಗಳಾದಮುನ್ನಿ,ಅಲ್ತಾಫ್, ರಹೀಮ, ಅನ್ವರ ಎಂಬುವವರ ಮೇಲೆ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಘಟನೆ ರವಿವಾರ ರಾತ್ರಿ ನಡೆದಿದ್ದು ಈ ಬಗ್ಗೆ ಇಂದು ದಾಖಲಾದ ದೂರಿನನ್ವಯ ಒಬ್ಬರನ್ನು ಪೊಲೀಸರು ಬಂಧಿಸಿರುವ ಮಾಹಿತಿ ದೊರೆತಿದೆ.

