local to national news- ಹೈಟೆಕ್ ಹನಿಟ್ರ್ಯಾಪ್ ದಂಧೆ,ಲೂಯಿ ಬ್ರೈಲ್ ದಿನಾಚರಣೆ,ಗುರುಪಾದಯ್ಯ ಹಿರೇಮಠರಿಗೆ ಪಿಎಚ್‍ಡಿ ಪ್ರದಾನ

ಯುವಕರ ಜೊತೆಗಿನ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ಮಾಜಿ ಶಿಕ್ಷಕಿ ಅಂದರ್!

ಹೈಟೆಕ್ ಹನಿಟ್ರ್ಯಾಪ್ ದಂಧೆ ನಡೆಸುತ್ತಾ ಮ್ಯಾಟ್ರಿಮೋನಿಯಲ್ಲಿ ಅವಿವಾಹಿತ ಹಾಗೂ ವಿಚ್ಛೇದಿತ ಪುರುಷರನ್ನೇ ಗುರಿಯಾಗಿಸಿಕೊಂಡಿದ್ದ ಮಾಜಿ ಶಿಕ್ಷಕಿಯೊಬ್ಬಳನ್ನು ಇಂದಿರಾ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Casual_Photo1

ಬೆಂಗಳೂರು: ಹೈಟೆಕ್ ಹನಿಟ್ರ್ಯಾಪ್ ದಂಧೆ ನಡೆಸುತ್ತಾ ಮ್ಯಾಟ್ರಿಮೋನಿಯಲ್ಲಿ ಅವಿವಾಹಿತ ಹಾಗೂ ವಿಚ್ಛೇದಿತ ಪುರುಷರನ್ನೇ ಗುರಿಯಾಗಿಸಿಕೊಂಡಿದ್ದ ಮಾಜಿ ಶಿಕ್ಷಕಿಯೊಬ್ಬಳನ್ನು ಇಂದಿರಾ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕವಿತಾ ಬಂಧಿತ ಮಾಜಿ ಶಿಕ್ಷಕಿ. ಈ ಹಿಂದೆ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕವಿತಾ, ಕಾರಣಾಂತರಗಳಿಂದ ಶಿಕ್ಷಕ ವೃತ್ತಿ ಕಳೆದುಕೊಂಡಿದ್ದಳು. ಬಳಿಕ ಹನಿಟ್ರ್ಯಾಪ್ ದಂಧೆ ಆರಂಭಿಸದ್ದಳು.

ಮ್ಯಾಟ್ರಿಮೋನಿಯಲ್ಲಿ ಅವಿವಾಹಿತ ಹಾಗೂ ವಿಚ್ಛೇದಿತ ಪುರುಷರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು. ಅವರೊಂದಿಗಿನ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿಕೊಂಡು ನಂತರ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಳು ಎಂದು ಪೊಲೀಸರ ವಿಚಾರಣೆಯ ವೇಳೆ ತಿಳಿದುಬಂದಿದೆ. ಇದೇ ರೀತಿ ಕವಿತಾ ಡಿ. 22ರಂದು ಯುವಕನೊಬ್ಬನ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಳು.

ಸಂತ್ರಸ್ತ ಯುವಕ ಅತ್ಯಾಚಾರವೆಸಗಿ ವಿಡಿಯೋ ಚಿತ್ರೀಕರಿಸಿದ್ದಾನೆ ಎಂದು ಆರೋಪಿಸಿ ಪೊಲೀಸರನ್ನು ಕರೆಸಿ ಅವರ ಸಮ್ಮುಖದಲ್ಲೇ ಖಾಸಗಿ ವಿಡಿಯೋ ಡಿಲಿಟ್ ಮಾಡಿಸಿದ್ದಳು. ಯುವಕನ ವಿರುದ್ಧ ದೂರು ನೀಡದಿರಲು 2 ಲಕ್ಷ ಹಣಕ್ಕೆ ಆತನ ಬಳಿ ಬೇಡಿಕೆ ಇಟ್ಟಿದ್ದಳು. ಆದ್ರೆ ಸಂತ್ರಸ್ತ ಯುವಕ ಹಣ ನೀಡದಿದ್ದಾಗ ಡಿ.31ರಂದು ಆತನ ವಿರುದ್ಧ ಇಂದಿರಾನಗರ ಠಾಣೆಗೆ ದೂರು ನೀಡಿದ್ದಳು.

ಅಸಲಿಗೆ ವಿಡಿಯೋ ಡಿಲಿಟ್ ಮಾಡಲಾಗಿದೆ. ಆದರೂ ಈ ಪ್ರಕರಣ ಸಂಬಂಧ ಯುವಕನ ಮೇಲೆ ಕವಿತಾ ದೂರು ದಾಖಲಿಸಿದ್ದಳು. ಇತ್ಯರ್ಥ ಎಂದುಕೊಂಡ ಪ್ರಕರಣ ಮತ್ತೆ ಠಾಣಾ ಮೆಟ್ಟಿಲೇರಿದ್ದಾಗ ಪೊಲೀಸರಿಗೆ ಅನುಮಾನ ಬಂದಿದೆ. ಆಗ ಕವಿತಾಳ ಮೊಬೈಲ್ ಪಡೆದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಕೆಯ ಕಳ್ಳಾಟ ಬಯಲಾಗಿದೆ.

ವಿಡಿಯೋ ಪರಿಶೀಲಿಸಿದಾಗ ಪರಸ್ಪರ ಒಪ್ಪಿಯೇ ದೈಹಿಕ ಸಂಪರ್ಕ ಹೊಂದಿರುವುದು ತಿಳಿದು ಬಂದಿದೆ. ಕವಿತಾಳ ಬಣ್ಣ ಬಯಲಾಗುತ್ತಿದ್ದಂತೆ ಇಂದಿರಾನಗರ ಠಾಣಾ ಪೊಲೀಸರು ತೀವ್ರ ವಿಚಾರಣೆ ನಡೆಸಿ ದೂರುದಾರಳಾಗಿದ್ದ ಕವಿತಾಳ ಕೃತ್ಯ ತಿಳಿದುಕೊಂಡಿದ್ದಾರೆ.

ಕವಿತಾ ಇದೇ ಪ್ರಕರಣ ಸಂಬಂಧ ಯುವಕನ ಮೇಲೆ 2 ವಿವಿಧ ಠಾಣೆಗಳಲ್ಲಿ ದೂರು ನೀಡಿದ್ದಳು. ಹಾಗೂ ಮಲ್ಲೇಶ್ವರಂ, ಮಹಾದೇವಪುರ ಠಾಣೆಯಲ್ಲಿ ಈ ಹಿಂದೆ ಇದೇ ರೀತಿ ದೂರು ನೀಡಿದ್ದಳು.

ಲೂಯಿ ಬ್ರೈಲ್ ದಿನಾಚರಣೆ
ಸಿದ್ದಾಪುರ 4. ಆಶಾ ಕಿರಣ ಟ್ರಸ್ಟ್ ಸಿದ್ದಾಪುರ ವತಿಯಿಂದ ನಡೆಯುತ್ತಿರುವ ಜೆ. ಎಂ. ಆರ್. ಅಂಧ ಮಕ್ಕಳ ವಸತಿ ಶಾಲೆ ಹಾಳದಕಟ್ಟಾದಲ್ಲಿ ಲೂಯಿ ಬ್ರೈಲ್ ದಿನಾಚರಣೆಯನ್ನು ಆಚರಿಸಲಾಯಿತು.
ಅಧ್ಯಕ್ಷತೆಯನ್ನು ಆಶಾಕಿರಣ ಟ್ರಸ್ಟ್ ಅಧ್ಯಕ್ಷ ಡಾ|| ರವಿ ಹೆಗಡೆ ಹೂವಿನಮನೆ ವಹಿಸಿದ್ದು, ಲೂಯಿ ಬ್ರೈಲ್ ಕೊಡುಗೆ ಅಂಧರ ಬಾಳಿಗೆ ಬೆಳಕನ್ನು ನೀಡಿದೆ. ಅಂಧರು ತಮ್ಮವ್ಯಕ್ತಿತ್ವ ವಿಕಸನ ಮಾಡಿಕೊಳ್ಳಲು ನೆರವಾಗುತ್ತಿದೆ. ಅಂಧಮಕ್ಕಳ ಶಿಕ್ಷಣಕ್ಕೆ ನೆರವಾಗುವುದು ಒಂದು ಉತ್ತಮ ಕೆಲಸ ಎಂದು ಹೇಳಿದರು.
ವಿಶೇಷ ಶಿಕ್ಷಕ ಜಯಣ್ಣ ಬಿ. ಲೂಯಿ ಬ್ರೈಲ್ ರವರ ಜನ್ಮ ಬದುಕು ಸಾಧನೆಯನ್ನು ಪರಿಚಯಿಸಿ. ಅವರಿಂದಾಗಿ ಜಾಗತೀಕವಾಗಿ ಅಂಧರ ಬದುಕಿಗೆ ಸ್ಪೂರ್ತಿ ದೊರಕಿದೆ ಎಂದರು.
ಟ್ರಸ್ಟ್ ಉಪಾಧ್ಯಕ್ಷ ಸಿ. ಎಸ್. ಗೌಡರ್ ಹೆಗ್ಗೋಡ್ಮನೆ, ಕೋಶಾಧ್ಯಕ್ಷ ನಾಗರಾಜ ದೋಶೆಟ್ಟಿ, ಟ್ರಸ್ಟೀಗಳಾದ ಜಿ. ಜಿ. ಹೆಗಡೆ ಬಾಳಗೋಡ, ಉಮಾ ನಾಯಕ, ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ಯಾಮಲಾ ರವಿ ಹೆಗಡೆ ಹೂವಿನಮನೆ, ವಿದ್ಯಾ ದೋಶೆಟ್ಟಿ ಉಪಸ್ಥಿತರಿದ್ದರು.
ಶಿಕ್ಷಕಿ ಕಮಲಾಕ್ಷಿ ಸ್ವಾಗತಿಸಿದರು, ಮುಖ್ಯ ಶಿಕ್ಷಕಿ ನಾಗರತ್ನ ವಂದಿಸಿದರು. ಶಿಕ್ಷಕಿ ಲತಾ ನಿರೂಪಿಸಿದರು.

ಪತ್ರಿಕೋದ್ಯಮದ ಪಾತ್ರ
ಉ.ಕ ಜಿಲ್ಲೆಯ ಒಂದು ಅಧ್ಯಯನ
ಸಂಶೋಧನಾತ್ಮಕ ಮಹಾ ಪ್ರಬಂಧಕ್ಕೆ
ಗುರುಪಾದಯ್ಯ ಹಿರೇಮಠರಿಗೆ ಪಿಎಚ್‍ಡಿ ಪ್ರದಾನ
ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಗುರುಪಾದಯ್ಯ ನಾಗೇಶ ಹಿರೇಮಠ ಸಲ್ಲಿಸಿದ ಅಧ್ಯಯನಪೂರ್ಣ ಸಂಶೋಧನಾತ್ಮಕ ಮಹಾ ಪ್ರಬಂಧವನ್ನು ಮನ್ನಿಸಿ ಅವರಿಗೆ ಪಿಎಚ್‍ಡಿ ಪದವಿ ಪ್ರದಾನ ಮಾಡಿದೆ.
‘ರಾಜಕೀಯ ಪಾಲ್ಗೊಳ್ಳುವಿಕೆ ಮತ್ತು ಜಾಗೃತಿ ಮೂಡಿಸುವಲ್ಲಿ ಪತ್ರಿಕೋದ್ಯಮದ ಪಾತ್ರ-ಉತ್ತರಕನ್ನಡ ಜಿಲ್ಲೆಯ ಒಂದು ಅಧ್ಯಯನ’ ಎಂಬುದು ಪಿಎಚ್‍ಡಿ ವಿಷಯವಾಗಿದೆ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಎಂ.ಎನ್ ರಮೇಶ ಮಾರ್ಗದರ್ಶಕರಾಗಿದ್ದರು.
ನಾಗೇಶ ಹಿರೇಮಠ ಮತ್ತು ಶ್ರೀಮತಿ ರತ್ನಾವತಿ ಯವರ ಪುತ್ರರಾಗಿರುವ ಗುರುಪಾದಯ್ಯ ಹಿರೇಮಠ ಅವರು ಶಿರಸಿ ಬಣ್ಣದ ಮಠದ ಆಶ್ರಯದಲ್ಲಿದ್ದು ಮಠಾಧ್ಯಕ್ಷರಾದ ಪರಮ ಪೂಜ್ಯ ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಯವರು ಆಶೀರ್ವಾದ ಹಾಗೂ ಬಣ್ಣದ ಮಠದ ವ್ಯವಸ್ಥಾಪಕರಾದ ಎಸ್.ಬಿ.ಹಿರೇಮಠರ ಪ್ರೋತ್ಸಾಹ-ಸಹಕಾರದಲ್ಲಿ ಪ್ರೌಢಶಾಲೆ, ಪಿಯುಸಿ, ಪದವಿ ಶಿಕ್ಷಣವನ್ನು ಶಿರಸಿಯಲ್ಲಿ ಪೂರೈಸಿದರು. ನಂತರ ಅವರು ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಬೆಳಗಾವಿ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪೂರೈಸಿದರು.
ಅವರ ಪಿಎಚ್‍ಡಿ ಮಹಾ ಪ್ರಬಂಧವು ಒಟ್ಟು 327 ಪುಟಗಳನ್ನು ಹೊಂದಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ 1900-2015ರವರೆಗೆ ಪ್ರಕಟಗೊಂಡ ಪತ್ರಿಕೆಗಳ ಸಮಗ್ರ ಅಧ್ಯಯನ ಒಳಗೊಂಡಿದೆ. ಅದರಲ್ಲೂ ಜಿಲ್ಲೆಯ ರಾಜಕೀಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ (1985ರಿಂದ 2015) ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಉ.ಕ. ಜಿಲ್ಲೆಯ ಪ್ರಪ್ರಥಮ ದಿನಪತ್ರಿಕೆ ಎಂಬ ಹೆಗ್ಗಳಿಕೆ ಹೊಂದಿರುವ ಲೋಕಧ್ವನಿ ಅಲ್ಲದೆ ಕರಾವಳಿ ಮುಂಜಾವು ಪತ್ರಿಕೆಗಳ ಕುರಿತು ನಿರ್ದಿಷ್ಟ ಅಧ್ಯಯನವನ್ನು ಮಾಡಲಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *