

ರಾಮಕೃಷ್ಣ ನಾಯ್ಕ ಕಾಂಗ್ರೆಸ್ ಇಂಟೆಕ್ ಘಟಕದ ತಾಲೂಕಾ ಅಧ್ಯಕ್ಷರು, ಕೃಷಿಕರು.




ಸಿದ್ಧಾಪುರಕ್ಯಾದಗಿ ಪಂಚಾಯತ್ ನ ಕೃಷಿಕರಾಗಿದ್ದ ನಾಯ್ಕ ಕಳೆದ ಮೂರು ಅವಧಿಗಳ ಹಿಂದೆ ಕ್ಯಾದಗಿ ಗುಬ್ಬಗೋಡು ವಾರ್ಡನಿಂದ ಗ್ರಾಮ ಪಂಚಾಯತ್ ಪ್ರವೇಶಿಸುತ್ತಾರೆ. ನಂತರ ಇದೇ ಕ್ಷೇತ್ರದಿಂದ ಇವರ ಪತ್ನಿ ಗ್ರಾ.ಪಂ. ಸದಸ್ಯರಾಗುತ್ತಾರೆ.ನಂತರ ಈ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಇದೇ ವಾರ್ಡ್ ನಿಂದ ರಾಮಕೃಷ್ಣ ನಾಯ್ಕ ಶಿರೂರು ಆಯ್ಕೆಯಾಗುತ್ತಾರೆ. ಸಿದ್ಧಾಪುರ ದೊಡ್ಮನೆ ಜಿ.ಪಂ. ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂದೇ ಪ್ರಸಿದ್ಧ ಆದರೆ ಈ ಬಾರಿ ಈ ಕ್ಷೇತ್ರದಲ್ಲಿ ಬಿ.ಜೆ.ಪಿ. ಬೆಂಬಲಿಗರು,ಪಕ್ಷೇತರರು ಆಯ್ಕೆಯಾಗಿ ವಾತಾವರಣ ಬದಲಾಗಿದೆ. ಈ ಕ್ಷೇತ್ರದ ಜಿ.ಪಂ. ಸದಸ್ಯರಾಗಿ ಈಗ ರಾಜ್ಯ ಕಾಂಗ್ರೆಸ್ನ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷರಾಗಿರುವ ವಿ.ಎನ್. ನಾಯ್ಕ ಶಿಷ್ಯರಲ್ಲಿ ಈ ರಾಮಕೃಷ್ಣ ನಾಯ್ಕ ಪ್ರಮುಖರು.
ಕಾಂಗ್ರೆಸ್ ನ ಬಣ ರಾಜಕಾರಣದಲ್ಲಿ ಈ ಬಾರಿ ಹೊಡೆತತಿಂದಿರುವ ಕ್ಷೇತ್ರಗಳಲ್ಲಿ ದೊಡ್ಮನೆ ಜಿ.ಪಂ.ಕ್ಷೇತ್ರ ಪ್ರಮುಖ. ಈ ಕ್ಷೇತ್ರದಲ್ಲಿ ವಿ.ಎನ್.ನಾಯ್ಕ ನೇತೃತ್ವದ ತಾಲೂಕಾ ಕಾಂಗ್ರೆಸ್ ಬಣಕ್ಕೆ ಎದುರಾಗಿ ಬಿ.ಜೆ.ಪಿ. ಹಾಗೂ ಬಿ.ಜೆ.ಪಿ. ಬೆಂಬಲಿತ ಕಾಂಗ್ರೆಸ್ ಬಂಡಾಯ ಬಣದ ಬೆಂಬಲಿಗರು ಕೆಲಸಮಾಡಿ ಕಾಂಗ್ರೆಸ್ ಬೆಂಬಲಿಗರ ಪ್ರಮಾಣ ತಗ್ಗಿಸುವ ಪ್ರಯತ್ನ ನಡೆದಿತ್ತು. ಈ ಪ್ರಯತ್ನದ ಭಾಗವಾಗಿ ವಿ.ಎನ್.ನಾಯ್ಕ ಬೆಂಬಲಿಗರನ್ನು ಸೋಲಿಸುವ ಆಟದ ಹಿನ್ನೆಲೆಯಲ್ಲಿ ದೊಡ್ಮನೆ ಜಿ.ಪಂ. ಕ್ಷೇತ್ರ ಕಳೆದುಕೊಂಡಿದ್ದೇ ಹೆಚ್ಚು. ಈ ವಾತಾವರಣದಲ್ಲಿ ಸರಳತೆ, ಜನಪರತೆಗಳಿಂದ ಆಯ್ಕೆಯಾದ ಕಾಂಗ್ರೆಸ್ ಎ ಬಣದ ಪ್ರಮುಖ ನಾಯಕರಲ್ಲಿ ರಾಮಕೃಷ್ಣ ನಾಯ್ಕ ಒಬ್ಬರು.
ರಾಮಕೃಷ್ಣ ನಾಯ್ಕ ಕಳೆದ ಎರಡು ದಶಕಗಳಿಂದ ನಿಷ್ಠಾವಂತ ಕಾಂಗ್ರೆಸ್ಸಿಗರಾಗಿ ಕೆಲಸಮಾಡುತ್ತಾ, ಜನಪ್ರತಿನಿಧಿತ್ವವನ್ನೂ ನಿಭಾಯಿಸುತ್ತಾ ತಾಲೂಕಾ ಕಾಂಗ್ರೆಸ್ ನ ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತಿದ್ದಾರೆ. ಈ ಭಾಗದ ಮುಖಂಡರು ತಾ.ಪಂ.ಸದಸ್ಯರು ಸೇರಿದ ಪ್ರಮುಖ ನಾಯಕರ ಸಹಾಯ,ಸಹಕಾರದಿಂದ ನಿರಂತರ ಜನಪ್ರತಿನಿಧಿಯಾಗುತ್ತಾ ತಮ್ಮ ಕ್ಷೇತ್ರ ಪಂಚಾಯತ್ ಮಟ್ಟದಲ್ಲಿ ಜನಪ್ರೀಯರಾಗಿದ್ದಾರೆ. ಜನಮಾನಸಕ್ಕೆ ಸ್ಫಂದಿಸುವ ಇವರ ನಾಯಕತ್ವ ಕ್ಯಾದಗಿ ಗ್ರಾಮ ಪಂಚಾಯತ್ ಗೆ ದೊರೆತರೆ ಒಳ್ಳೆದೆನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ.
