

ದಕ್ಷಿಣ ಕನ್ನಡ: ಎದೆ ನಡುಗಿಸುವ ದೃಶ್ಯ; ಮುಳುಗುತ್ತಿದ್ದ ಮಕ್ಕಳನ್ನು ಹಿಡಿದೆತ್ತಿ ತಾನು ಪ್ರಾಣಬಿಟ್ಟ ತಂದೆ, ವಿಡಿಯೋ ವೈರಲ್!
ಈಜುತ್ತಿದ್ದ ವೇಳೆ ನೀರು ಹೆಚ್ಚಾಗಿದ್ದರಿಂದ ಮುಳುಗುತ್ತಿದ್ದ ಮಕ್ಕಳನ್ನು ಹಿಡಿದೆತ್ತಿ ತಂದೆಯೋರ್ವ ಪ್ರಾಣ ಬಿಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಹೃದಯಾಘಾತ:ರಂಗಸ್ಥಳದಲ್ಲಿ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದ ವೇಳೆಯಲ್ಲೇ ಹೃದಯಾಘಾತವಾಗಿ ಕಲಾವಿದನೊಬ್ಬ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆ ಬ್ರಹ್ಮಾವರದ ಶಿರಿಯಾರದಲ್ಲಿರುವ ಕಾಜ್ರಲ್ಲಿ ಸಮೀಪದ ಕಲ್ಕಟ್ಟೆಯಲ್ಲಿ ನಡೆದಿದೆ. ಮಂಗಳವಾರ ಮುಂಜಾನೆ ನಡೆದ ಘಟನೆಯಲ್ಲಿ ಮಂದರ್ತಿ ಮೇಳದ ಪ್ರಧಾನ ವೇಷಧಾರಿ ಸಾಧು ಕೊಠಾರಿ (58) ಅಸುನೀಗಿದ್ದಾರೆ.

ಉಡುಪಿ: ರಂಗಸ್ಥಳದಲ್ಲಿ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದ ವೇಳೆಯಲ್ಲೇ ಹೃದಯಾಘಾತವಾಗಿ ಕಲಾವಿದನೊಬ್ಬ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆ ಬ್ರಹ್ಮಾವರದ ಶಿರಿಯಾರದಲ್ಲಿರುವ ಕಾಜ್ರಲ್ಲಿ ಸಮೀಪದ ಕಲ್ಕಟ್ಟೆಯಲ್ಲಿ ನಡೆದಿದೆ. ಮಂಗಳವಾರ ಮುಂಜಾನೆ ನಡೆದ ಘಟನೆಯಲ್ಲಿ ಮಂದರ್ತಿ ಮೇಳದ ಪ್ರಧಾನ ವೇಷಧಾರಿ ಸಾಧು ಕೊಠಾರಿ (58) ಅಸುನೀಗಿದ್ದಾರೆ.
‘ಮಹಾಕಲಿ ಮಗಧೇಂದ್ರ’ ಪ್ರಸಂಗದಲ್ಲಿ ಮಾಗಧನಾಗಿ ಪ್ರದರ್ಶನ ನೀಡುತ್ತಿದ್ದ ಸಮಯದಲ್ಲೇ ನಸುಕಿನ 3 ಗಂಟೆ ಸುಮಾರಿಗೆ ಅವರು ವೇದಿಕೆಯಲ್ಲಿ ಎದೆನೋವಿನಿಂದ ಬಳಲಿದ್ದರು. ಕೂಡಲೇ ಅವರ ವೇಷದ ನಿಲುವಂಗಿಯನ್ನು ತೆಗೆದು ಮೇಳದ ಮುಖ್ಯ ಭಾಗವತ, ಯಕ್ಷಗಾನ ತಂಡ ವ್ಯವಸ್ಥಾಪಕ ಸದಾಶಿವ ಅಮೀನ್ ವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.

https://imasdk.googleapis.com/js/core/bridge3.432.0_debug_en.html#goog_12983764
ಕೊಠಾರಿ ಕುಟುಂಬದೊಂದಿಗೆ ಬಾರ್ಕೂರ್ನಲ್ಲಿ ನೆಲೆಸಿದ್ದರು, ಬಟಗು ತಿಟ್ಟುಯಕ್ಷಗಾನ ಕಲೆಯ ಅತ್ಯುತ್ತಮ ಕಲಾವಿದರಲ್ಲಿ ಒಬ್ಬರಾಗಿ ಕೊಠಾರಿಯವರನ್ನು ಹೆಸರಿಸಲಾಗುತ್ತದೆ. ಕಳೆದ ನಾಲ್ಕು ದಶಕಗಳಿಂದ ಅವರು ಕಕ್ಷಗಾನ ಪ್ರದರ್ಶನ ನೀಡುತ್ತಾ ಬಂದಿದ್ದರು.

ದಕ್ಷಿಣ ಕನ್ನಡ: ಈಜುತ್ತಿದ್ದ ವೇಳೆ ನೀರು ಹೆಚ್ಚಾಗಿದ್ದರಿಂದ ಮುಳುಗುತ್ತಿದ್ದ ಮಕ್ಕಳನ್ನು ಹಿಡಿದೆತ್ತಿ ತಂದೆಯೋರ್ವ ಪ್ರಾಣ ಬಿಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಡಿಸೆಂಬರ್ 31ರಂದು ಸಂಜೆ ಇಯರ್ ಎಂಡ್ ದಿನ. ಮೂವರು ಮಕ್ಕಳು ಮತ್ತು ತಂದೆ-ತಾಯಿ ಇರುವ ಐದು ಜನರ ಒಂದು ಕುಟುಂಬ ನೀರಿನಲ್ಲಿ ಮುಳುಗುತ್ತಿತ್ತು. ಈ ವೇಳೆ ಇದನ್ನು ಕಂಡ ದೋಣಿಯಲ್ಲಿದ್ದ ಯುವಕರು ಕೂಡಲೇ ಅಲ್ಲಿಗೆ ಧಾವಿಸಿ ಮೂವರು ಮಕ್ಕಳು ಮತ್ತು ಗೃಹಿಣಿಯನ್ನು ರಕ್ಷಿಸಿದ್ದಾರೆ.
ಆದರೆ ವಿಧಿವಶಾತ್ ಮಕ್ಕಳನ್ನು ನೀರಿನ ಮೇಲೆ ಹಿಡಿದುಕೊಂಡಿದ್ದ ಕಡಬ ಮೂಲದ ಜಯರಾಮಗೌಡ ಎಂಬುವರು ದುರ್ಮರಣ ಹೊಂದಿದ್ದಾರೆ. ಮೂವರು ಮಕ್ಕಳು ಮತ್ತು ಗೃಹಿಣಿಯನ್ನು ರಕ್ಷಿಸಿದ್ದ ಯುವಕರು ಕಷ್ಟಪಟ್ಟು ಜಯರಾಮಗೌಡರನ್ನು ದಡಕ್ಕೆ ಎಳೆದು ತಂದರು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.
ಮಂಗಳೂರು ಹೊರವಲಯದ ಸಸಿಹಿತ್ಲು ಬಳಿ ಇರುವ ಕೆರಿಬಿಯನ್ ಸೀ ಹೋಮ್ ರೆಸಾರ್ಟ್ ಬಳಿ ಘಟನೆ ನಡೆದಿದೆ. ನದಿಗಳು ಸಮುದ್ರವನ್ನು ಸೇರುವ ಜಾಗದಲ್ಲಿ ಜಯರಾಮಗೌಡ ಕುಟುಂಬ ನೀರಿಗಿಳಿದಿತ್ತು. ಸರ್ಫರ್ ಕ್ಲಬ್ ನ ಶ್ಯಾಮ್ ಎಂಬಾತ ನಾಲ್ವರನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ. (kpc)
