

ಗಳಿಕೆ ರಜೆ ನಗದೀಕರಣ (ಇಎಲ್) ಸೌಲಭ್ಯ ರದ್ದು!
ಕೋವಿಡ್-19 ಹಿನ್ನೆಲೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಕಾರಣ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ರದ್ದುಗೊಳಿಸುವ ಮೂಲಕ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ.
ಕನ್ನಡ ಪ್ರಭ ವಾರ್ತೆ ಸಿದ್ದಾಪುರ: ಬ್ರಹ್ಮರ್ಷಿ ನಾರಾಯಣ ಗುರು ಸಂಘಟನೆ ಸಿದ್ದಾಪುರ ಘಟಕ ಈಡಿಗ ಬಿಲ್ಲವ ನಾಮಧಾರಿ ಸಮಾಜದ 26 ಪಂಗಡಗಳನ್ನೋಳಗೊಂಡ ಬೇಡಿಕೆಗಳ ಮನವಿಯನ್ನು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ.
ನಮ್ಮ ಸಮುದಾಯವು ಸರಿಸುಮಾರು ಒಂದು ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿದ್ದು ರಾಜ್ಯದ ನಾಲ್ಕನೇ ಅತಿ ದೊಡ್ಡ ಸಮುದಾಯವಾಗಿದೆ ನಮ್ಮ ಸಮಾಜದ ಕುಲವೃತ್ತಿಯಾದ ಸೆಂದಿ (ಸರಾಯಿ)ಗಾರಿಕೆಯನ್ನು ಸರ್ಕಾರದ ನೀತಿ ನಿಯಮಗಳಿಂದ ಕಳೆದುಕೊಂಡಿದ್ದು ಪರ್ಯಾಯವಾಗಿ ಸರ್ಕಾರದಿಂದ ಯಾವುದೇ ರೀತಿಯ ಆರ್ಥಿಕ ಸಹಾಯವಿಲ್ಲದೆ ಶೇಕಡ 75 ಕ್ಕಿಂತಲೂ ಅಧಿಕ ಕುಟುಂಬಗಳು ಸ್ವಂತ ಜಮೀನು ಇಲ್ಲದೆ ವ್ಯವಸಾಯದಲ್ಲಿ ಪ್ರಗತಿ ಕಾಣದೆ ದೊಡ್ಡ ಪ್ರಮಾಣದ ಇಕ್ಕಟ್ಟಿಗೆ ಸಿಲುಕಿದ ಪರಿಣಾಮವಾಗಿ ನಮ್ಮ ಸಮಾಜದ ಶೇಕಡ 75 ಅಧಿಕ ಕುಟುಂಬಗಳು ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಬಹಳಷ್ಟು ಹಿಂದುಳಿದ ಸಮುದಾಯವಾಗಿದೆ ನಮ್ಮ ಸಮಾಜದ ಸಮಗ್ರ ಅಭಿವೃದ್ಧಿಗೆ ಸರಕಾರ ನಮ್ಮ ಬೇಡಿಕೆಗಳನ್ನು ತಕ್ಷಣ ಇಳಡೇರಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ
ಬೇಡಿಕೆಗಳು
ಆರ್ಯ ಈಡಿಗ ಸಮಾಜದ 26 ಉಪ ಪಂಗಡಗಳನ್ನು ಒಳಗೊಂಡ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ರಚಿಸಿ ಐದು ಸಾವಿರ ಕೋಟಿಯಷ್ಟು ಹಣ ಮೀಸಲಿಡಬೇಕು. ಭೂ ರಹಿತರಿಗೆ ಸರ್ಕಾರಿ ಜಮೀನು ಮಂಜೂರು ಮಾಡಿ ಹಕ್ಕುಪತ್ರ ನೀಡಬೇಕು .
ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಅತಿಕ್ರಮಣದಾರರಿಗೆ ಶೀಘ್ರವಾಗಿ ಇದೇ ವರ್ಷ ಹಕ್ಕುಪತ್ರ ನೀಡಬೇಕು .
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ಕಾರಣೀಕ ಕೋಟಿ-ಚೆನ್ನಯ್ಯ ರವರ ಹೆಸರಿಡಬೇಕು ಎಂಬ ಬೇಡಿಕೆಗಳನ್ನು ಮನವಿಯಲ್ಲಿ ತಿಳಿಸಿದ್ದಾರೆ.
ಬಿಎಸ್ಎಂಡಿಪಿ ತಾಲೂಕ ಅಧ್ಯಕ್ಷ ವಿನಾಯಕ ಆರ್ ನಾಯ್ಕ, ಉಪಾಧ್ಯಕ್ಷ ಅಣ್ಣಪ್ಪ ಜಿ ನಾಯ್ಕ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಎಸ್ ನಾಯ್ಕ,ಸಂಘಟನಾ ಕಾರ್ಯದರ್ಶಿ ಯಶವಂತ್ ಬಿ ನಾಯ್ಕ ,ಅಣ್ಣಪ್ಪ ನಾಯ್ಕ, ಶಿರಳಗಿ ,ದಿವಾಕರ ನಾಯ್ಕ ಹೆಮ್ಮನಬೈಲ್ , ಎನ್ ಟಿ ನಾಯ್ಕ ದೇವಾಸ ಸೇರಿದಂತೆ ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು

ಬೆಂಗಳೂರು: ಕೋವಿಡ್-19 ಹಿನ್ನೆಲೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಕಾರಣ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ರದ್ದುಗೊಳಿಸುವ ಮೂಲಕ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ.
ಸದರಿ ಆದೇಶದ ಪ್ರಕಾರ 2021ನೇ ಸಾಲಿನ ಕ್ಯಾಲೆಂಡರ್ ವರ್ಷ ದಿನಾಂಕ 01-01-2021 ರಿಂದ 31-12-2021 ರವರೆಗಿನ ಅವಧಿಯಲ್ಲಿ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ರದ್ದುಗೊಳಿಸಲಾಗಿದೆ. ಆದರೆ, 2021 ರ ಜನವರಿ ತಿಂಗಳಿಂದ ಡಿಸೆಂಬರ್ ಅಂತ್ಯದ ಅವಧಿಯಲ್ಲಿ ನಿವೃತ್ತಿ ಹೊಂದುವ ಎಲ್ಲಾ ಅರ್ಹ ನೌಕರರು / ಅಧಿಕಾರಿಗಳು, ಅವರು ನಿವೃತ್ತಿ ಹೊಂದುವ ತಿಂಗಳಲ್ಲಿ ಗಳಿಕೆ ರಜೆ ನಗದೀಕರಣ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸರ್ಕಾರದ ಈ ಆದೇಶವು ಸರ್ಕಾರದಿಂದ ಸಹಾಯಾನುದಾನ / ಅನುದಾನ ಪಡೆಯುವ ಅಥವಾ ಪಡೆಯದಿರುವ ಎಲ್ಲಾ ಕರ್ನಾಟಕ ಸರ್ಕಾರದ ಎಲ್ಲಾ ಉದ್ಯಮಗಳ ಸಂಸ್ಥೆಗಳ ನೌಕರರಿಗೂ ಅನ್ವಯಿಸುತ್ತದೆ ಎಂದು ಆದೇಶದಲ್ಲಿ ಸೂಚಿಸಲಾಗಿದೆ. (kpc)

