

ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮಲಳವಳ್ಳಿಯವರ ತಂದೆ ಲಕ್ಷ್ಮಣ ನಾಯ್ಕ ಇಂದು ನಿಧನರಾಗಿದ್ದಾರೆ. ಉತ್ತಮ ಕೃಷಿಕರು, ಯಕ್ಷಗಾನ ಕಲಾವಿದರು ಆಗಿದ್ದ ಅವರು ಸೊಸೆ ಜಿ. ಪಂ. ಸದಸ್ಯೆ ಸುಮಂಗಲಾ ನಾಯ್ಕ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕೆಲವು ದಿವಸಗಳಿಂದ ಶಿವಮೊಗ್ಗ ದಲ್ಲಿ ಕೋವಿಡ್ ಚಿಕಿತ್ಸೆ ಪಡೆದು ಕೋವಿಡ್ ಮುಕ್ತರಾಗಿದ್ದ ಅವರು ದಿಢೀರ್ ಸಾವು ದಿಗ್ಬ್ರಮೆ ಗೆ ಕಾರಣವಾಗಿದೆ.

