

ಚಿತ್ತಾರ ಮಲೆನಾಡಿನ ದೀವರ ವಿಶಿಷ್ಟ ಬುಡಕಟ್ಟು ಕಲೆ, ಈ ಕಲೆ ದೀವರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದೆ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ದೀವರ ಈ ಹಸೆಚಿತ್ತಾರ ಅಥವಾ ಚಿತ್ತಾರ ಕಲೆ ಇಲ್ಲಿಯ ಗ್ರಾಮೀಣ ಜನರ ಅಭ್ಯಾಸ, ಹವ್ಯಾಸ ಕೂಡಾ. ಈ ಕಲೆಗೆ ಪ್ರೋತ್ಸಾಹ, ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಅನೇಕ ಪ್ರಯತ್ನಗಳಾಗಿವೆ. ರವಿವಾರ ಶಿವಮೊಗ್ಗದಲ್ಲಿ ನಡೆದ ಚಿತ್ತಾರಗಿತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಇದಕ್ಕೊಂದು ನಿದರ್ಶನ. ಚಿತ್ತಾರ ಕಲೆಯ ಹಿನ್ನೆಲೆ-ಪ್ರಾಮುಖ್ಯತೆ ಹಿನ್ನೆಲೆಯಲ್ಲಿ ಇಲ್ಲಿ ನೀಡಲಾದ ಚಿತ್ರಗಳು, ವಿಡಿಯೋಗಳು ಮಾಹಿತಿಪೂರ್ಣ. ಕೃಷಿ ಬದುಕಿನ ದೀವರ ಚಿತ್ತಾರದ ಆಳ-ಅಗಲ ಅದರ ಸಾಂಪ್ರದಾಯಿಕ,ಸಾಂಸ್ಕೃತಿಕ ಮಹತ್ವ ತಿಳಿಯಲು ಈ ಚಿತ್ರ-ವಿಡಿಯೋಗಳ ವೀಕ್ಷಣೆ ಪೂರಕ.




