

ಸುದೀರ್ಘ ಕಾಯುವಿಕೆ ಬಳಿಕ ಕೊನೆಗೂ ನಿನ್ನೆ ಮಕರ ಸಂಕ್ರಾಂತಿ ಮುನ್ನಾದಿನ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದೆ.

ಬೆಂಗಳೂರು/ಬೆಳಗಾವಿ: ಸುದೀರ್ಘ ಕಾಯುವಿಕೆ ಬಳಿಕ ಕೊನೆಗೂ ನಿನ್ನೆ ಮಕರ ಸಂಕ್ರಾಂತಿ ಮುನ್ನಾದಿನ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದೆ.
ಈ ಸಮಯದಲ್ಲಿ ಅಸಮಾಧಾನಗೊಂಡ ಸಚಿವಾಕಾಂಕ್ಷಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಲವರು, ಅಂತವರು ಸಾರ್ವಜನಿಕವಾಗಿಯೇ ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಟೀಕೆ ಮಾಡಿದ್ದು ಕಂಡುಬಂತು.
ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಎಂ ಪಿ ರೇಣುಕಾಚಾರ್ಯ ತಮ್ಮ ಅಸಮಾಧಾನಗಳನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುವಲ್ಲಿ ಜನಪ್ರಿಯರು. ಸಾರ್ವಜನಿಕವಾಗಿ ಟೀಕೆ ಟಿಪ್ಪಣಿ ಮಾಡುವಲ್ಲಿ ಇಷ್ಟು ದಿನ ಸುಮ್ಮನಿದ್ದ ಸುನಿಲ್ ಕುಮಾರ್, ಎಸ್ ಎ ರಾಮದಾಸ್ ರಂಥವರೂ ಕೂಡ ನಿನ್ನೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಮಾಜಿ ಕೇಂದ್ರ ಮಂತ್ರಿ ಬಸನಗೌಡ ಪಾಟೀಲ್ ಯತ್ನಾಳ್, ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ , ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ರಾಮದಾಸ್, ಸುನಿಲ್ ಕುಮಾರ್, ಎಂ ಪಿ ರೇಣುಕಾಚಾರ್ಯ ಅವರು ಈ ಬಾರಿ ಸಚಿವರನ್ನಾಗಿ ಆಯ್ಕೆ ಮಾಡಿದ ರೀತಿ ಅನ್ಯಾಯವಾಗಿದ್ದು ಪಕ್ಷಕ್ಕೆ ನಿಷ್ಠರಾದವರನ್ನು ಕಡೆಗಣಿಸಲಾಗಿದೆ ಎಂದು ಹೇಳಿದ್ದಾರೆ.
ಕಳೆದ ವಾರ ಬಿ ಎಸ್ ಯಡಿಯೂರಪ್ಪನವರು ದೆಹಲಿಗೆ 9 ಶಾಸಕರು, ವಿಧಾನ ಪರಿಷತ್ ಸದಸ್ಯರ ಹೆಸರನ್ನು ತೆಗೆದುಕೊಂಡು ಹೈಕಮಾಂಡ್ ಬಳಿಗೆ ಹೋಗಿದ್ದರು. ಪಕ್ಷ 4 ಹೆಸರುಗಳನ್ನು ಸೂಚಿಸಿತ್ತು. ಅದು, ಎಸ್ ಅಂಗಾರ, ಸುನಿಲ್ ಕುಮಾರ್, ಹಾಲಪ್ಪ ಆಚಾರ್ ಮತ್ತು ಅಪ್ಪಚ್ಚು ರಂಜನ್, ಯಡಿಯೂರಪ್ಪನವರು ಸಂಪುಟಕ್ಕೆ ಸೇರಿಸುವುದಾಗಿ ನಾಲ್ವರಿಗೆ ಆಶ್ವಾಸನೆ ನೀಡಿ ಕೊಟ್ಟಿದ್ದು ಮಾತ್ರ ಒಬ್ಬರಿಗೆ. ಇದು ನಿಷ್ಠಾವಂತ ಕಾರ್ಯಕರ್ತರಿಗೆ ಮಾಡಿದ ಅವಮಾನ ಎಂದು ಹಿರಿಯ ಕಾರ್ಯಕಾರಿಯೊಬ್ಬರು ಹೇಳುತ್ತಾರೆ. ಅವರು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ತಂಡದಲ್ಲಿದ್ದಾರೆ.
ಯತ್ನಾಲ್ ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ಮಂತ್ರಿಗಳನ್ನು ಅನ್ಯಾಯದ ಮೂಲಕ ಸಂಪುಟಕ್ಕೆ ಸೇರಿಸಿಕೊಂಡು ಬ್ಲಾಕ್ ಮೇಲ್ ಮಾಡಲಾಗಿದೆ ಎಂದು ಕರೆದರೆ, ಧಾರವಾಡ ಶಾಸಕ ಅರವಿಂದ್ ಬೆಲ್ಲದ ಅವರು ಏಳು ಮಂತ್ರಿಗಳನ್ನು ಸೇರ್ಪಡೆಗೊಳಿಸುವುದು ಸ್ವೀಕಾರಾರ್ಹ ಕ್ರಮವಲ್ಲ ಎಂದು ಹೇಳಿದರು.
“ಪಕ್ಷಕ್ಕೆ ನಿಷ್ಠೆ, ಅಭಿವೃದ್ಧಿ ಮತ್ತು ಹಿಂದುತ್ವ ನನ್ನ ಕಾರ್ಯಸೂಚಿಗಳು. ನನಗೆ ಬೇರೆ ದಾರಿ ಗೊತ್ತಿಲ್ಲ. ಜಾತಿ ರಾಜಕಾರಣದ ವೈಭವೀಕರಣವನ್ನು ನಾನು ಕಲಿತಿಲ್ಲ. ನಾನು ಪೋಸ್ಟ್‌ಗಳಿಗಾಗಿ ಬ್ಲ್ಯಾಕ್‌ಮೇಲ್ ಮಾಡಿಲ್ಲ ಮತ್ತು ಎಂದಿಗೂ ಮಾಡುವುದಿಲ್ಲ. ಎಂದು ಸುನಿಲ್ ಕುಮಾರ್ ಟ್ವೀಟ್ ಮಾಡಿದ್ದಾರೆ. (kpc)
