

ಕೃಷಿ ಕಾನೂನು: ಸರ್ಕಾರ ರೈತರನ್ನು ನಾಶ ಮಾಡಲು ಪಿತೂರಿ ರೂಪಿಸುತ್ತಿದೆ- ರಾಹುಲ್ ಗಾಂಧಿ
ಸಂಕ್ರಾಂತಿ ಹಬ್ಬದಂದು ತಮಿಳುನಾಡಿಗೆ ಭೇಟಿ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ, ಕೃಷಿ ಕಾನೂನುಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಉತ್ತಮ ಕೆಲಸ-
ಸಿದ್ದಾಪುರ
ಅಡಕೆ ಮರದಿಂದ ಬಿದ್ದು ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಕಿಲವಳ್ಳಿಯ ಉಮೇಶ ನಾರಾಯಣ ಗೌಡ ಅವರಿಗೆ ತಾಲೂಕು ಗ್ರಾಮ ಒಕ್ಕಲಿಗರ ಯುವ ಬಳಗದವರು ದಾನಿಗಳಿಂದ ಸಂಗ್ರಹಿಸಿದ 40ಸಾವಿರ ರೂಗಳ ಚೆಕ್‍ನ್ನು ಮಂಗಳವಾರ ಬಳಗದ ಅಧ್ಯಕ್ಷ ವಿ.ಆರ್.ಗೌಡ ಹೇರೂರು ವಿತರಿಸಿದರು.
ಹಣ ಸಂಗ್ರಹಿಸಲು ಸಿದ್ದಾಪುರ ಎಂಜಿಸಿ ಕಾಲೇಜಿನ ವಿದ್ಯಾರ್ಥಿ ನಾಗರಾಜ ಗೌಡ ಹಲಸಿನಮನೆ,ನಯನಾ ಗೌಡ ಹಲಸಿನಮನೆ ಇವರು ಹೆಚ್ಚು ಮುತುವರ್ಜಿವಹಿಸಿದ್ದರು. ಮುಂದಿನ ದಿನದಲ್ಲಿ ಮತ್ತಷ್ಟು ಹಣ ಸಂಗ್ರಹಿಸಿ ಉಮೇಶ ಗೌಡ ಅವರ ಚಿಕಿತ್ಸೆಗೆ ಸಹಕರಿಸಲಾಗವುದು ಎಂದು ವಿ.ಆರ್.ಗೌಡ ಹೇಳಿದರು.ಬಳಗದ ಪದಾಧಿಕಾರಿಗಳಾದ ಜಗನ್ನಾಥ ಗೌಡ, ಪ್ರಸನ್ನ ಗೌಡ, ಸುರೇಶ ಗೌಡ, ಮಂಜುನಾಥ ಗೌಡ,ನಯನಾ ಗೌಡ,ನಾಗರಾಜ ಗೌಡ ಇತರರಿದ್ದರು.
ವಿವೇಕಾನಂದ ಜಯಂತಿ ಆಚರಣೆ-
ದಿ.12.01.21 ರ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರ 158 ನೇ ಜನ್ಮ ದಿನದ ಪ್ರಯುಕ್ತ ಪುಷ್ಪನಮನವನ್ನು ಸಲ್ಲಿಸುವುದರ ಮೂಲಕ ರಾಷ್ತ್ರೀಯ ಯುವ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜೆ.ಎಸ್.ಹೆಗಡೆರವರು ಸ್ವಾಮಿ ವಿವೇಕಾನಂದರಿಂದ ಪ್ರೇರಣೆ ಪಡೆದು ದೇಶದ ಉನ್ನತಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು. ಭಾರತವು ಯುವ ಶಕ್ತಿಯ ದೇಶವಾಗಿದ್ದು ಯುವಕರು ಪ್ರಯತ್ನಪಟ್ಟಲ್ಲಿ ದೇಶದ ದಿಕ್ಕನ್ನೆ ಬದಲಾಯಿಸಬಹುದೆಂದು ಅಭಿಪ್ರಾಯಪಟ್ಟರು
ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ಸಿಬ್ಬಂದಿ ಹಾಜರಿದ್ದರು.

ಮಧುರೈ: ಸಂಕ್ರಾಂತಿ ಹಬ್ಬದಂದು ತಮಿಳುನಾಡಿಗೆ ಭೇಟಿ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ, ಕೃಷಿ ಕಾನೂನುಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರ ರೈತರನ್ನು ನಾಶ ಮಾಡುವುದಕ್ಕಾಗಿ ಹೊಸ ಕೃಷಿ ಕಾನೂನುಗಳ ಮೂಲಕ ಪಿತೂರಿ ನಡೆಸಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಪಕ್ಷ ರೈತರ ಜೊತೆ ನಿಲ್ಲಲಿದೆ ಎಂದು ಹೇಳಿದ್ದಾರೆ.

https://imasdk.googleapis.com/js/core/bridge3.433.1_debug_en.html#goog_1037571697
ಪತ್ರಕರ್ತರೊಂದಿಗೆ ಮಾತನಾಡಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಕೃಷಿ ಕಾನೂನುಗಳ ಮೂಲಕ ತನ್ನ ಇಬ್ಬರು ಅಥವಾ ಮೂವರು ಸ್ನೇಹಿತರಿಗೆ ಲಾಭ ಮಾಡಿಕೊಡಲು ಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ರೈತರನ್ನು ಕೇವಲ ನಿರ್ಲಕ್ಷಿಸುತ್ತಿಲ್ಲ, ಆದರೆ ನಾಶ ಮಾಡಲು ಯತ್ನಿಸುತ್ತಿದೆ, ನಿರ್ಲಕ್ಷ್ಯ ಮಾಡುವುದಕ್ಕೂ ನಾಶ ಮಾಡುವುದಕ್ಕೂ ವ್ಯತ್ಯಾಸವಿದೆ, ಕೇಂದ್ರ ಸರ್ಕಾರ ರೈತರದ್ದೆಲ್ಲವನ್ನೂ ಅವರ ಮೂವರು ಸ್ನೇಹಿತರಿಗೆ ನೀಡಲು ಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ಪತ್ರಕರ್ತರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ. (kpc)


