ಪೊಂಗಲ್ ಸ್ಪೆಷಲ್: ಜಲ್ಲಿಕಟ್ಟು ಸ್ಪರ್ಧೆಗೆ ತಮಿಳುನಾಡಿನಲ್ಲಿ ಅದ್ದೂರಿ ಚಾಲನೆ
ಸಂಕ್ರಾಂತಿ ನಿಮಿತ್ತ ತಮಿಳುನಾಡಿನಲ್ಲಿ ನಡೆಸುವ ಸಾಂಪ್ರದಾಯಿಕ ಜಲ್ಲಿಕಟ್ಟು ಸ್ಪರ್ಧೆಗೆ ಅದ್ದೂರಿ ಚಾಲನೆ ನೀಡಲಾಗಿದೆ.
ಸಿದ್ಧಾಪುರ,ಜ.14- ಇಲ್ಲಿಯ ಬೇಡ್ಕಣಿ ಕೋಟೆ ಆಂಜನೇಯ ದೇವ ಸ್ಥಾನ ಆವರಣದಲ್ಲಿ ಇಂದು ಸಂಜೆ ಏಳು ಗಂಟೆಗೆ ಶ್ರೀನಾಗಚೌಡೇಶ್ವರಿ ಮಹಾತ್ಮೆ ಎನ್ನುವ ಯಕ್ಷಗಾನ ಪ್ರಸಂಗದ ಪುಸ್ತಕ ಬಿಡುಗಡೆ ಮತ್ತು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಖ್ಯಾತ ಯಕ್ಷಗಾನ ಭಾಗವತರೂ, ಅರ್ಥಧಾರಿಗಳೂ ಆಗಿರುವ ಹೆಮ್ಮನಬೈಲ್ ರಾಮಚಂದ್ರಭಾಗವತ್ ಈ ಯಕ್ಷಗಾನ ಪ್ರಸಂಗ ರಚಿಸಿದ್ದು ಮಾರುತಿ ಪ್ರಸಾದಿತ ಯಕ್ಷಗಾನ ಕಲಾ ಸಂಘ ಈ ಪ್ರಸಂಗವನ್ನು ಇಂದು ಪ್ರದರ್ಶಿಸಲಿದೆ. ಇದೇ ಸಭಾ ಕಾರ್ಯಕ್ರಮದಲ್ಲಿ ಮಕ್ಕಳ ಯಕ್ಷಗಾನ ಹೆಜ್ಜೆ ತರಬೇತಿ ಶಿಬಿರಕ್ಕೂ ಚಾಲನೆ ನಡೆಯಲಿದೆ. ಈ ಸಭಾ ಕಾರ್ಯಕ್ರಮವನ್ನು ಉದ್ಯಮಿ ಭೀಮಣ್ಣ ನಾಯ್ಕ ಉದ್ಘಾಟಿಸಲಿದ್ದಾರೆ. ಸಾಮಾಜಿಕ ಕಾರ್ಯಕರ್ತ ಉಪೇಂದ್ರ ಪೈ ಯಕ್ಷಗಾನ ಪ್ರಸಂಗ ಪುಸ್ತಕ ಬಿಡುಗಡೆ ಮಾಡಲಿದ್ದು ಕೋಟೆ ಆಂಜನೇಯ ದೇವಸ್ಥಾನದ ಅದ್ಯಕ್ಷ ವಿ.ಎನ್.ನಾಯ್ಕ ಅಧ್ಯಕ್ಷತೆಯ ಈ ಸಭಾ ಕಾರ್ಯಕ್ರಮದಲ್ಲಿ ಎಂ.ಕೆ.ಭಟ್, ನಿರ್ಮಲಾ ಹೆಗಡೆ, ಪತ್ರಕರ್ತ ಕನ್ನೆಶ್ ಕೋಲಶಿರ್ಸಿ,ವಿ.ಆರ್.ಗೌಡ ಅಜ್ಜೀಬಳ, ಬಸೀರ್ ಸಾಬ್ ಬೇಡ್ಕಣಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದ ಸಂಘಟಕರಾದ ರಾಮಚಂದ್ರ ನಾಯ್ಕ ಮತ್ತು ಲಕ್ಷ್ಮಣ ನಾಯ್ಕ ಸರ್ವರನ್ನೂ ಆಮಂತ್ರಿಸಿದ್ದಾರೆ.
ಕಬ್ಬಡ್ಡಿ-ಸನ್ಮಾನ-
ಸಿದ್ದಾಪುರ : ಭಾರತ ದೇಶದ ದೇಶಿಯ ಕ್ರೀಡೆಯಾದ ಕಬಡ್ಡಿಯನ್ನು ಇತ್ತೀಚಿನ ದಿನದಲ್ಲಿ ಯುವಕರು ಅತೀ ಹೆಚ್ಚಿನದಾಗಿ ಆಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಕಬ್ಬಡ್ಡಿ ದೈಹಿಕವಾಗಿ ಮಾನಸಿಕವಾಗಿ ಆರೋಗ್ಯವನ್ನು ಪಡೆಯುವ ಕ್ರೀಡೆಯಾಗಿದೆ ಮ್ಯಾಟ್ ಕಬಡ್ಡಿ ಆಡುವ ಮೂಲಕ ಗ್ರಾಮೀಣ ಭಾಗದಲ್ಲಿ ಕಬಡ್ಡಿಯನ್ನು ಉಳಿಸುವಂತಹ ಬೆಳೆಸುವಂತಹ ಕೆಲಸವನ್ನು ಸಂಘಟನೆಗಳು ಮಾಡುತ್ತಿವೆ ಇಂತಹ ಕೆಲಸವನ್ನು ನಾವು ಪ್ರೋತ್ಸಾಹಿಸಬೇಕಾಗಿದೆ ಎಂದು ಈ ಆರ್ ನಾಯ್ಕ್ ಬನವಾಸಿ ಭಾನುವಾರ ಸಿದ್ದಾಪುರ ತಾಲೂಕಿನ ಸಂಪಖಂಡ ದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡುತ್ತಾ ಹೇಳಿದರು
ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮ ಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾಕ್ಟರ್ ನಾಗೇಶ್ ನಾಯಕ್ ಕಾಗಲ್ ಅವರು ಮಾತನಾಡಿ ಭಾರತವು ಅತ್ಯಂತ ಹೆಚ್ಚು ಯುವ ಸಮೂಹವನ್ನು ಹೊಂದಿದೆ ಯುವಕರು ಸಂಘಟನೆಯನ್ನು ಮಾಡಿ ಬೆಳೆಯುತ್ತಿರುವುದು ನಿಜಕ್ಕೂ ಕೂಡ ಶ್ಲಾಘನೀಯ ಸಂಘಟನೆಗಳು ಬಲವಾದರೆ ಹೋರಾಟ ಹಾಗೂ ನಮ್ಮ ಅಗತ್ಯ ಬೇಡಿಕೆ ಪಡೆದುಕೊಳ್ಳುವಲ್ಲಿ ಸಾಧ್ಯವಾಗುತ್ತದೆ ಭಾರತ ದ ಯುವ ಸಮೂಹ ವಿಶ್ವಕ್ಕೆ ಮಾದರಿಯಾಗಿರುತ್ತದೆ ಯುವಕರು ಸಂಘಟನೆಗಳಲ್ಲಿ ಪಾಲ್ಗೊಂಡು ನಾಯಕತ್ವ ಸದೃಢವಾಗಿ ಬೆಳೆಯಬೇಕಾಗಿದೆ ಎಂದು ಅವರು ಹೇಳಿದರು
ವಿವಿಧ ಕ್ಷೇತ್ರದಲ್ಲಿ ಸಾಧನೆ ಯನ್ನು ಮಾಡಿದಂತಹ ಸಾಧಕರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತುನಂದನ್ ನಾಯ್ಕ್ ಹಾರ್ಸಿಕಟ್ಟಾ ಇವರ ಯಕ್ಷಗಾನ ಕ್ಷೇತ್ರದ ಸೇವೆಯನ್ನು ಸ್ಮರಿಸಿ ಸನ್ಮಾನಿಸಿ ಗೌರವಿಸಲಾಯಿತು ಮತ್ತು ಕನ್ನಡ ಮಾಧ್ಯಮದಲ್ಲಿ ಓದಿಕಳೆದ ವರ್ಷದ ಪಿಯುಸಿ ಯಲ್ಲಿ 90%ಅಂಕ ಪಡೆದ ಅಶ್ವಿನಿ ಎಸ್ ನಾಯ್ಕ್ ಸಂಪಖಂಡ ರಿಗೆ ಸನ್ಮಾನಿಸಿ ಗೌರವಿಸಿದರು
ನಾಗಚೌ ಡೇಶ್ವರಿ ಯುವ ಗೆಳೆಯರ ಬಳಗದ ದ್ವಿತೀಯ ವರ್ಷದ ಕಬಡ್ಡಿ ಪಂದ್ಯಾವಳಿಯಲ್ಲಿ ಶ್ರೀ ನಾಮದಾರಿ ಬ್ಲೂ ಬಾಯ್ಸ್ ಶಿರಸಿ ಪ್ರಥಮ ಸ್ಥಾನವನ್ನು ಪಡೆದರು, ಕಾತ್ಯಾಯಿನಿ ಕಬಡ್ಡಿ.ಅವರ್ಸಾ ಅಂಕೋಲಾ ದ್ವಿತೀಯ ಸ್ಥಾನ ಪಡೆದರು.
ಮಧುರೈ: ಸಂಕ್ರಾಂತಿ ನಿಮಿತ್ತ ತಮಿಳುನಾಡಿನಲ್ಲಿ ನಡೆಸುವ ಸಾಂಪ್ರದಾಯಿಕ ಜಲ್ಲಿಕಟ್ಟು ಸ್ಪರ್ಧೆಗೆ ಅದ್ದೂರಿ ಚಾಲನೆ ನೀಡಲಾಗಿದೆ.
ತಮಿಳುನಾಡಿನ ಮದುರೈ ಜಿಲ್ಲೆಯ ಅವನಿಯಪುರಂನಲ್ಲಿ ಸಾಂಪ್ರದಾಯಿಕ ಜಲ್ಲಿಕಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಸುಮಾರು 200 ಹೋರಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿವೆ.
https://imasdk.googleapis.com/js/core/bridge3.433.1_en.html#goog_913046601
ಕೋವಿಡ್ ಸಾಂಕ್ರಾಮಿಕ ಹಿನ್ನಲೆಯಲ್ಲಿ ಶೇ.50ರಷ್ಚು ಮಾತ್ರ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದ್ದು, ಸ್ಪರ್ಧೆ ವೀಕ್ಷಣೆಗೆ ಕೋವಿಡ್ ನೆಗೆಟಿವ್ ವರದಿ ಪ್ರಮಾಣ ಪತ್ರವನ್ನು ಕಡ್ಡಾಯ ಮಾಡಲಾಗಿದೆ.
ಅಂತೆಯೇ ಸ್ಪರ್ಧೆಯಲ್ಲಿ 150ಸ್ಪರ್ಧಿಗಳು ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದ್ದು, ಅವರಿಗೂ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯ ಮಾಡಲಾಗಿದೆ. (kpc)