Crime today – ಒಂದೇ ದಿನ ನಿಧನರಾದ ದಂಪತಿಗಳು & ಪ್ರಜ್ಞೆ ಬಂದಾಗ ಮೃತದೇಹಗಳು, ಛಿದ್ರಗೊಂಡ ಅವಶೇಷಗಳ ನಡುವೆ ಇದ್ದೆ!

ಪತಿ ಪತ್ನಿ ಇಬ್ಬರ ನಿಧನ
ಸಿದ್ದಾಪುರ ತಾಲೂಕಿನ ಭುವನಗಿರಿ ಸಮೀಪದ ಹೊಸಳ್ಳಿಯ ರಾಮ ಕನ್ನಾ ನಾಯ್ಕ ದಂಪತಿಗಳು ನಿನ್ನೆ ನಿಧನರಾದರು. ರಾಮ ನಾಯ್ಕ (70) ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ನಿನ್ನೆ ಗುರುವಾರ ಬೆಳಿಗ್ಗೆ ಅವರು ನಿಧನರಾದರು. ಕೆಲವು ಸಮಯದ ನಂತರ ಅವರ ಪಕ್ಕದಲ್ಲೇ ಸುಶ್ರೂಶೆ ಮಾಡುತ್ತಿದ್ದ ಅವರ ಪತ್ನಿ ಸಾವಿತ್ರಿ (67) ಹಠಾತ್ತಾಗಿ ಹೃದಯಾಘಾತದಿಂದ ನಿಧನರಾದರು. ಈ ದಂಪತಿಗಳು ಇಬ್ಬರು ಗಂಡು ಮಕ್ಕಳು, ಒಬ್ಬಳು ಮಗಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಪ್ರಜ್ಞೆ ಬಂದಾಗ ಮೃತದೇಹಗಳು, ಛಿದ್ರಗೊಂಡ ಅವಶೇಷಗಳ ನಡುವೆ ಇದ್ದೆ: ಧಾರವಾಡ ಅಪಘಾತದಲ್ಲಿ ಬದುಕುಳಿದ ಮಹಿಳೆ!

ಧಾರವಾಡ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದು, ಬದುಕಿ ಉಳಿದ ವ್ಯಕ್ತಿಯೋರ್ವರು ಈ ಅಪಘಾತದ ಭೀಕರತೆಯನ್ನು ವಿವರಿಸಿದ್ದಾರೆ. 

Dharwad mishap

ಹುಬ್ಬಳ್ಳಿ: ಧಾರವಾಡ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದು, ಬದುಕಿ ಉಳಿದ ವ್ಯಕ್ತಿಯೋರ್ವರು ಈ ಅಪಘಾತದ ಭೀಕರತೆಯನ್ನು ವಿವರಿಸಿದ್ದಾರೆ. 

ಅಪಘಾತಕ್ಕೀಡಾದ ವಾಹನದಲ್ಲಿದ್ದ ಆಶಾ ಜಗದೀಶ್ ಬೆಟೂರ್ (40) ಕೈ ಮುರಿದುಕೊಂಡು ಪ್ರಾಣ ಅಪಾಯದಿಂದ ಪಾರಾಗಿದ್ದಾರೆ. “ಪ್ರಜ್ಞೆ ಬಂದಾಗ ಮೃತದೇಹಗಳು, ಛಿದ್ರಗೊಂಡ ದೇಹಗಳ ನಡುವೆ ಇದ್ದೆ, ಪೊಲೀಸರು ಹಾಗೂ ಹೆದ್ದಾರಿ ಗಸ್ತು ಪಡೆ ಸಹಾಯಕ್ಕೆ ಬರುವವರೆಗೂ ಸಹಾಯಕ್ಕೆ ಬರುವವರೆಗೂ ಯಾರೂ ಬರಲಿಲ್ಲ ಎಂದು ಹೇಳಿದ್ದಾರೆ.

ಇಂದು ಬೆಳಗ್ಗೆ ಟೆಂಪೋ ಟ್ರಾವೆಲರ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಟೆಂಪೋದಲ್ಲಿ 11 ಮಂದಿ ಮೃತಪಟ್ಟಿರುವ ಘಟನೆ ಧಾರವಾಡ ಹೊರವಲಯದ ಇಟ್ಟಿಗಟ್ಟಿ ಬಳಿ ನಡೆದಿದೆ.

ಮೃತರೆಲ್ಲರೂ ದಾವಣಗೆರೆ ಮೂಲದವರಾಗಿದ್ದು, ಬಹುತೇಕರು ವೈದ್ಯಕೀಯ ವೃತ್ತಿಯಲ್ಲಿದ್ದರು ಮತ್ತು ಇವರೆಲ್ಲರೂ ಶಾಲಾ ಸ್ನೇಹಿತರಾಗಿದ್ದು, ದಾವಣಗೆರೆಯಿಂದ ಗೋವಾಕ್ಕೆ ಪ್ರವಾಸ ಹೊರಟ್ಟಿದ್ದರು.

ಮೃತ 10 ಮಹಿಳೆಯರ ಪೈಕಿ ನಾಲ್ವರು ವೈದ್ಯರಾಗಿದ್ದರೆ, ಇತರರು ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರು. ಮೃತರು ಶಾಲಾ ಸ್ನೇಹಿತರಾಗಿದ್ದು, ಗೋವಾಕ್ಕೆ ಒಂದು ದಿನದ ಟ್ರಿಪ್ ಹೊರಟ್ಟಿದ್ದರು.

ನಾನು ಎಚ್ಚರಗೊಂಡಾಗ, ಧಾರವಾಡದಲ್ಲಿ ನಮಗಾಗಿ ಕಾಯುತ್ತಿದ್ದ ಸಂಬಂಧಿಕರಿಗೆ ಮೊಬೈಲ್ ನಿಂದ ಕರೆ ಮಾಡಿದೆ. ಘಟನೆ ಬಗ್ಗೆ ತಿಳಿದು ಅವರ ಸ್ನೇಹಿತರು ಸಹಾಯಕ್ಕಾಗಿ ಧಾವಿಸಿದರು. ಬಳಿಕ ಬದುಕಿ ಉಳಿದವರನ್ನು ಧಾರವಾಡದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು ಎಂದು ಆಶಾ ವಿವರಿಸಿದ್ದಾರೆ.

ಟಿಟಿಯಲ್ಲಿದ್ದವರು ಶಾಲಾದಿನಗಳಿಂದಲೂ ಪರಸ್ಪರ ಪರಿಚಯವಿದ್ದೆವು, ಸಾಮಾಜಿಕ ಜಾಲತಾಣಗಳ ಮೂಲಕ ಮತ್ತೆ ಸಂಪರ್ಕದಲ್ಲಿದ್ದೆವು. ಒಂದು ದಿನದ ಪ್ರವಾಸ, ದಾವಣಗೆರೆಯಲ್ಲಿ ಊಟಕ್ಕಾಗಿ ಸೇರುತ್ತಿದ್ದೆವು. ಈ ಬಾರಿ ಗೋವಾದಲ್ಲಿ ರೆಸಾರ್ಟ್ ಬುಕ್ ಮಾಡಿದ್ದೆವು, ಧಾರವಾಡದಲ್ಲಿ ಉಪಹಾರಕ್ಕಾಗಿ ವಾಹನ ನಿಲ್ಲಿಸಬೇಕಿತ್ತು, ಅಷ್ಟರಲ್ಲಿ ವಾಹನ ಅಪಘಾತಕ್ಕೀಡಾಯಿತು ಎಂದು ಅವರು ಹೇಳಿದ್ದಾರೆ. ಅಪಘಾತದಲ್ಲಿ ಬದುಕಿ ಉಳಿದ ಆಶಾ ಅಪಾಯದಿಂದ ಪಾರಾಗಿದ್ದಾರೆ. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *