ವ್ಯಕ್ತಿ ಪರಿಚಯ- ಬಿ.ವಿ.ನಾಯಕ…..01-

(ಪ್ರಖಾಂಡ ಪಾಂಡಿತ್ಯದ ಪ್ರಖರ ಜ್ಞಾನಿಯ “ಜಯವಾಗಲಿ” ವಾಣಿಯ ಸುತ್ತ.‌)

ಅದೊಂದೆ ಒಂದು ಅಭ್ಯಾಸ ತಮ್ಮಿಂದ ದೂರ ಇದ್ದಿದ್ದರೆ, ನನ್ನ ಜಿಲ್ಲೆ ಭಾರತದ ನಕಾಶೆಯಲ್ಲಿ ಧ್ರುವ ನಕ್ಷತ್ರದಂತೆ ಮಿನುಗುವ ಅವಕಾಶದಿಂದ ವಂಚಿತವಾಗುತ್ತಿರಲಿಲ್ಲ…ಅದನ್ನು ಸಾಧಿಸುವ ವಿದ್ಯೆ ಜ್ಞಾನ, ಆಶಯ, ತುಡಿತಗಳು ಮೇಳೈಸಿದ ಏಕೈಕ ವ್ಯಕ್ತಿ ನೀವಾಗಿದ್ದಿರಿ..ನನ್ನ ಜಿಲ್ಲೆಯ ಕನಸಿಗೆ ಬಣ್ಣ ಹಚ್ಚಲು ಜನ ತಮ್ಮನ್ನು ಆಯ್ಕೆ ಮಾಡಿದ್ದರು..ನೀವೇನು ಮಾಡಿಬಿಟ್ಟಿರಿ? ಕೇಳೋಣವೆಂದರೆ ಇಂದು ನೀವಿಲ್ಲ ..ನಮ್ಮ ಆತ್ಮದ ಕೂಗಾದರು ನಿಮಗೆ ಕೇಳಿಸದೆ.

ಬಿ.ವಿ.ಹೌದು ಇದು. ಭಾರತದ ರಾಜಕಾರಣದಲ್ಲಿ ಅತಿ ಬುದ್ಧಿವಂತನೆಂದು ಸ್ವತಃ ಇಂದಿರಾಗಾಂಧಿಯೆ ಕೈ ಬೀಸಿ.ಹತ್ತಿರಕ್ಕೆ ಕರೆದಾಗ, ಚಟಕ್ಕೆ ಬದುಕನ್ನೆ ಅರ್ಪಿಸಿಬಿಟ್ಟ ಪರಮಜ್ಞಾನಿಯ ಕಥೆ.. ಅವರು ಬಿ.ವಿ.ನಾಯಕ.ನನ್ನ ಜಿಲ್ಲೆಯ ರಾಜಕಾರಣ, ರಾಮಕೃಷ್ಣ ಹೆಗಡೆ, ಬಂಗಾರಪ್ಪ, ದಿನಕರದೇಸಾಯಿಯಂತಹ ಪ್ರಖರ ವಾಗ್ಮಿಗಳ ಕೈಯಲ್ಲಿ ಅರಳಲೇ ಇಲ್ಲ.. ಅರಳಿಸುವ ಶಕ್ತಿ ಇದಿದ್ದು ಬಿ.ವಿ.ನಾಯಕರಿಗೆ ಮಾತ್ರ..ಆದರೆ ವಿಧಿಯಾಟ ನೋಡಿ.ಕರ್ನಾಟಕದ ಪ್ರಪ್ರಥಮ ಡಿ.ಸಿ ಘಾಟಿ ವೆಂಕಣ್ಣ ನಾಯಕರ ಮಗ ಬಿ.ವಿ ನಾಯಕ ಆ ಕಾಲದಲ್ಲಿಯೆ ಲಂಡನನಲ್ಲಿ ಸಹಕಾರಕ್ಷೇತ್ರದ( ಕೋ-ಆಪರೆಟಿವ್ ಸೆಕ್ಟರ) ಬಗ್ಗೆ ಓದಿ ಭಾರತಕ್ಕೆ ಬಂದಿದ್ದರು..ಒಂದಿಷ್ಟು ವರ್ಷ ರಾಯಚೂರಿನಲ್ಲಿ ಕೆಲಸ ಮಾಡಿದ್ದರಂತೆ.. 1971ರಿಂದ1976ರವರೆಗೆ ಉತ್ತರಕನ್ನಡ ಜಿಲ್ಲೆಯ ಎಂ.ಪಿ ಯಾಗಿದ್ದರು..ಅವರ ಭೌದ್ಧಿಕತೆಯನ್ನು ಗುರುತಿಸಿದ ಇಂದಿರಾ ಗಾಂಧಿರವರು ಹತ್ತಿರಕ್ಕೆ ಕರೆದು ನಾಳೆ ಭಾರತದ ಸಹಕಾರಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಕ್ಕೆ ಬನ್ನಿರೆಂದಾಗ..ಖುಷಿಯಿಂದಲೆ ಹೊರಟರು..ಮಧ್ಯ ದಾರಿಯಲ್ಲಿ ವಿ.ಸಿ ಶುಕ್ಲನೆಂಬ ಪೆಡಂಭೂತ ಸಿಗದೆ ಹೋಗಿದ್ದರೆ, ಮುಂದೆ ಬಿ.ವಿ.ನಾಯಕ ಮಾತಾಡುತ್ತಿದ್ದರು..

.ಶುಕ್ಲನ ದುರಾಸೆ ಬಿ.ವಿ ನಾಯಕನೆಂಬ ಜ್ಞಾನಿಯ ರಾಜಕಾರಣದ ಬದುಕನ್ನೆ ಸರ್ವನಾಶ ಮಾಡಿಬಿಟ್ಟಿತ್ತು.. ಅಂದು ಅವರು ಗುಂಡು ಪಾರ್ಟಿ ಮಾಡಿದ್ದರಂತೆ ಅದು ಏನು ಹಾಕಿ ಕೊಟ್ಟರೊ ಬಿ.ವಿ.ನಾಯಕ ಕುಡಿದು ಮಲಗಿದವರು ಎಳಲೇ ಇಲ್ಲ… ಅತ್ತ ನಿರೀಕ್ಷೆ ಹುಸಿಯಾಗಿ ಇಂದಿರಾ ಆ ಖಾತೆಯನ್ನು ಬೇರೆಯವರಿಗೆ ಕೊಟ್ಟು ಬಿಟ್ಟರಂತೆ…ಶುಕ್ಲ ಮಾಡಿದ ದ್ರೋಹಕ್ಕೆ ಮಲಗಿದ್ದು ಬಿ.ವೀ ನಾಯಕ ಅಲ್ಲ..ಬದಲಾಗಿ ಉತ್ತರಕನ್ನಡ ಜಿಲ್ಲೆಯ ಚೈತನ್ಯದ ಭವಿಷ್ಯವೆ ಮಲಗಿಬಿಟ್ಟಿತ್ತು…ಮತ್ತೆ ಮೇಲೇಳಲೆ ಇಲ್ಲ.. ಈ ಜಿಲ್ಲೆ..

ಆಮೇಲೆ ನಿಷ್ಪ್ರಯೋಜಕ ರಾಜಕಾರಣಿಗಳ ತವರಾಯಿತು ಬೊಗಳೆ ಬಿಡುವವರೆ ರಾಜಕಾರಣದಲ್ಲಿ ರಾರಾಜಿಸಿದರು… ಮೈಛಳಿ ಬಿಟ್ಟು ಬಿ.ವಿ ಕೂಡ ಫೀಲ್ಡಿಗೆ ಬರಲೇ ಇಲ್ಲ…ಪರಿಶುದ್ಧ ಪ್ರಾಮಾಣಿಕತೆ, ಅತಿ ಒಳ್ಳೆಯತನಗಳು ವ್ಯಕ್ತಿಯನ್ನು ಯಾವ ಪರಿ ಹಿಂಸಿಸಿ ಬಿಡುತ್ತದೆ ಎಂಬುದಕ್ಕೆ ಅವರು ಉದಾಹರಣೆಯಾಗಿ ನಿಲ್ಲುತ್ತಾರೆ..ಅವರೊಬ್ಬ ರಾಜಕಾರಣದ ಗ್ರಾಮರ್ ಆಗಿದ್ದರು ಪ್ರಾಮಾಣಿಕ ರಾಜಕಾರಣದ ರೂವಾರಿ,.ಕೈ ಮುಷ್ಠಿ ಬಿಗಿದು ಭಾಷಣಕ್ಕೆ ನಿಂತರೆ ಕರಲೊ ದುನಿಯಾ ಮುಷ್ಠಿ ಮೆ ಎಂಬಂತೆ, ಇಡಿ ವಿಶ್ವದ ಭೌಗೋಳಿಕ , ಸಾಮಾಜಿಕ, ಆರ್ಥಿಕ, ರಾಜಕಿಯ ವ್ಯವಸ್ಥೆಯ ಬಗ್ಗೆ ಮಾತಾಡುವ ಜ್ನಾನ ಅವರಿಗಿತ್ತು..

ಉತ್ತರ ಕನ್ನಡ ಗುಡ್ಡಗಾಡು ಜಿಲ್ಲೆ, ತೋಟಗಾರಿಕಾ ಜಿಲ್ಲೆಯಾಗಬೇಕೆಂದು ಅವರು ಕನಸಿ ದ್ದರು.. ಅವರೊಬ್ಬ ಪತ್ರಕರ್ತರಾಗಿ ಜಯವಾಗಲಿ ಎಂದು ಸಂಭೋದಿಸುತ್ತಾ ಪರಿಶುದ್ಧ ಜೀವನ ನಡೆಸಿದ್ದರು..ಸಾಹಿತ್ಯ, ಕಲೆ, ವಿಜ್ಞಾನ, ಇತಿಹಾಸ ಯಕ್ಷಗಾನ, ವೈಚಾರಿಕತೆ, ಲೈಂಗಿಕ ಶಿಕ್ಷಣ ಹೀಗೆ ಆ ಮನುಷ್ಯ ಮಾತಾಡದ ವಸ್ತು ವಿಷಯಗಳೇ ಇಲ್ಲ..ಆಡು ಮುಟ್ಟದ ಸೊಪ್ಪಿಲ್ಲ..ಬಿ.ವಿ.ನಾಯಕ ತಿಳಿಯದ ವಿಚಾರಗಳಿಲ್ಲ..ಅಷ್ಟೊಂದು. ಭೌಧಿಕ ಶಿಖರದ ಕಿರೀಟದಂತಿದ್ದರು ಬಿ.ವಿ…

ಬಿ ವಿ.ನಾಯಕ ಮಾತಾಡುತ್ತಾರೆ ಎಂದರೆ, ಬರೆಯುತ್ತಾರೆ ಎಂದರೆ ಆ ಪತ್ರಿಕೆಗಳು ದಾವಣಗೇರಿಯ ಬೆಣ್ಣೆ ದೋಸೆಯಂತೆ ಖರ್ಚಾಗಿ ಬಿಡುತ್ತಿದ್ದವು…ಬಿ.ವಿ ನಾಯಕರ ಕನಸಿನ ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ಮುಂದೆ ಎಂದಾದರೂ ಬರೆಯುವೆ…ಭಾರತದ ಐದು ಸಾವಿರ ವರ್ಷಗಳ ಇತಿಹಾಸವನ್ನು ನಿಖರ ದಾಖಲೆ ದಿನಾಂಕಗಳೊಂದಿಗೆ ಹೇಳುತ್ತಿದ್ದರು..ಅವರೊಬ್ಬ ಐನ್ ಸ್ಟೈನರಂತ ಪಂಡಿತರಾಗಿದ್ದರು ಆ ಮೆದುಳು ನೆನಪುಗಳ ಕಣಜವಾಗಿತ್ತು… ಬಿ.ವಿ ನಾಯಕರಂತ ರಾಜಕಾರಣಿಯನ್ನು ಭಾರತದ.ರಾಜಕಾರಣದಲ್ಲಿಯೆ ನಾನು ಯಾರನ್ನು ನೋಡಿಲ್ಲ…ಅವರ ಬಗ್ಗೆ ಬರೆಯಲು ತುಂಬಾ ವಿಷಯವಿದೆ.. ಬರೆಯಲು ನನಗೆ ವಿಷಾಧವಿದೆ..

..ರಾಜು ನಾಯಕ..ಬಿಸಲಕೊಪ್ಪ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *