

ಸಚಿವ ಸಂಪುಟ ವಿಸ್ತರಣೆ, ಕೆಲವರ ಖಾತೆ ಬದಲಾವಣೆಯಿಂದ ಬಿಜೆಪಿ ಪಾಳಯದಲ್ಲಿ ಒಂದಿಷ್ಟು ಬದಲಾವಣೆಗಳು ಆಗುತ್ತಿದ್ದರೆ, ಇತ್ತ ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕುತೂಹಲ ಕೆರಳಿಸಿದ್ದಾರೆ.
nk crime ಗೋಕರ್ಣ ಕಳ್ಳನ ಬಂಧನ- ದಿನಾಂಕ 10-12-2020 ರಂದು ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಹನೇಹಳ್ಳಿ ಗ್ರಾಮದ ಶ್ರೀ ಸಂಕದ ಮಹಾಸತಿ ದೇವಸ್ಥಾನದಲ್ಲಿ ಸುಮಾರು 22 ಗ್ರಾಂ ತೂಕದ ಬಂಗಾರದ ಕರಿಮಣಿ ಸರ(ಮಂಗಳಸೂತ್ರ) ಹಾಗೂ ಸುಮಾರು 5000/- ರೂ ಕಾಣಿಕೆ ಹಣ ಕಳ್ಳತನವಾದ ಬಗ್ಗೆ ಗೋಕರ್ಣ ಪೊಲೀಸ್ ಠಾಣಾ ಗುನ್ನಾ ನಂ 91/2020 ಕಲಂ 454,457,380 ಐ.ಪಿ.ಸಿ ರಂತೆ ಪ್ರಕರಣ ದಾಖಲಾಗಿತ್ತು. ದಿನಾಂಕ 20-01-2021 ರಂದು ಶ್ರೀ ಮಹಾಸತಿ ದೆವಸ್ಥಾನ ಕಳ್ಳತನ ಮಾಡಿದ ಆರೋಪಿತನಾದ ವಿವೇಕಾನಂದ ತಂದೆ ದುರ್ಗಯ್ಯ ಖಾರ್ವಿ, ಪ್ರಾಯ 23 ವರ್ಷ, ವೃತ್ತಿ; ಬೋಟಿಕೆಲಸ, ಸಾ|| ಬೆಳೆಂಬಾರ, ಅಂಕೋಲಾ. ಹಾಲಿ; ಹೊರಭಾಗ, ಕುಮಟಾ ತಾಲೂಕ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆಗೊಳಪಡಿಸಿ ಆರೋಪಿತನಿಂದ 22 ಗ್ರಾಂ ತೂಕದ ಸುಮಾರು 62,000/- ರೂ ಮೌಲ್ಯದ ಬಂಗಾರದ ಮಂಗಳ ಸೂತ್ರ(ಕರಿಮಣಿ ಸರ) ವನ್ನು ವಶಪಡಿಸಿಕೊಂಡು ಆರೋಪಿತನನ್ನು ಈ 21-01-2021 ರಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಕುಮಟಾ, ಪ್ರಭಾರ ಜೆ.ಎಮ್.ಎಫ್.ಸಿ ನ್ಯಾಯಾಲಯ ಹೊನ್ನಾವರ ರವರ ಮುಂದೆ ಹಾಜರುಪಡಿಸಿದ್ದು ಆರೋಪಿತನಿಗೆ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಈ ಪ್ರಕರಣದ ಆರೋಪಿತನಿಗೆ ಕಳೆದ ಕೆಲವು ದಿನಗಳ ಹಿಂದೆ ಕುಮಟಾ ಪೊಲಿಸ್ ಠಾಣಾ ವ್ಯಾಪ್ತಿಯ ಕೊಡ್ಕಣಿಯಲ್ಲಿ ದೇವಸ್ಥಾನ ಕಳ್ಳತನ ಪ್ರಕರಣ, ಅಂಕೋಲಾದ ಕೊಗ್ರೆ, ಹೊನ್ನಿಬೈಲ್, ಹಾಗೂ ಹೊನ್ನರಾಕಾ ದೇವಸ್ಥಾನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದವನಾಗಿರುತ್ತಾನೆ. ಈ ಪ್ರಕರಣದ ಕಾರ್ಯಾಚರಣೆಯಲ್ಲಿ ಗೋಕರ್ಣ ಪೊಲೀಸ್ ಠಾಣೆಯ ಪಿ.ಎಸ್.ಐ ನವೀನ್ ನಾಯ್ಕ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ, ಕೆಲವರ ಖಾತೆ ಬದಲಾವಣೆಯಿಂದ ಬಿಜೆಪಿ ಪಾಳಯದಲ್ಲಿ ಒಂದಿಷ್ಟು ಬದಲಾವಣೆಗಳು ಆಗುತ್ತಿದ್ದರೆ, ಇತ್ತ ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕುತೂಹಲ ಕೆರಳಿಸಿದ್ದಾರೆ. ಆದರೂ ಇಬ್ಬರೂ ರಾಜಕೀಯ ವಿಚಾರಗಳನ್ನು ಚರ್ಚಿಸಲಾಗಿದೆ ಎಂಬುದನ್ನು ಮಾತ್ರ ತಳ್ಳಿಹಾಕಿದ್ದಾರೆ.

ಖಾತೆ ಪುನರ್ ಹಂಚಿಕೆಯಲ್ಲಿ ಗೃಹ ಸಚಿವರಾಗಿರುವ ಬಸವರಾಜ ಬೊಮ್ಮಾಯಿಗೆ ಈ ಹಿಂದೆ ಇದ್ದ ಗುಪ್ತಚರ ಇಲಾಖೆ ಕೈಬಿಟ್ಟು ಹೋಗಿದೆ. ಇದೇ ಸಂದರ್ಭದಲ್ಲಿ ಆರ್.ಟಿ.ನಗರದ ಬೊಮ್ಮಾಯಿ ನಿವಾಸಕ್ಕೆ ಆಗಮಿಸಿದ ಹೆಚ್.ಡಿ.ಕುಮಾರಸ್ವಾಮಿ, ಬೊಮ್ಮಾಯಿ ಜೊತೆ ಸುಮಾರು ಅರ್ಧಗಂಟೆಗೂ ಹೆಚ್ಚಿನ ಕಾಲ ಚರ್ಚೆ ನಡೆಸಿದರು.
ಬಸವರಾಜ್ ಬೊಮ್ಮಾಯಿ ಭೇಟಿ ಬಳಿಕ ಕುಮಾರಸ್ವಾಮಿ ಮಾತನಾಡಿ, ರಾಜಕೀಯ ಬೆಳವಣಿಗೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ರಾಜಕೀಯ ವಿಚಾರದ ಚರ್ಚೆಯಾಗಿದೆ ಎಂಬ ಸುದ್ದಿಯನ್ನು ಅಲ್ಲಗಳೆದರು. ನಮ್ಮದು ಹಳೆಯ ಸ್ನೇಹವಾಗಿದ್ದು, ಪಕ್ಷ ಬೇರೆಯಾದರೂ ಈವರೆಗೂ ಬೊಮ್ಮಾಯಿ ನಾವು ಒಂದೇ ಕುಟುಂಬದರಂತೆ ಇದ್ದೇವೆ. ತಂದೆ ದೇವೇಗೌಡರು ಹಾಗೂ ಎಸ್.ಆರ್.ಬೊಮ್ಮಾಯಿ ಸ್ನೇಹಿತರಾಗಿದ್ದವರು. ಹೀಗಾಗಿ ಬಸವರಾಜ ಬೊಮ್ಮಾಯಿ ತಂದೆಯವರ ಕಾಲದಿಂದಲೂ ಅವರ ಕುಟುಂಬದ ಜೊತೆ ಸ್ನೇಹವಿದೆ ಎಂದರು.
ಪಕ್ಷಗಳ ರಾಜಕೀಯ ಚರ್ಚೆ ಆಗಿಲ್ಲ ಎಂಬುದನ್ನು ಒತ್ತಿ ಹೇಳಿದ ಕುಮಾರಸ್ವಾಮಿ ಬೊಮ್ಮಾಯಿಯನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೆ ಮನವೊಲಿಸಲೂ ಬಂದಿಲ್ಲ. ಮತಕ್ಷೇತ್ರದ ಕೆಲ ನೇಮಕಾತಿ ವಿಚಾರದ ಬಗ್ಗೆ ಚರ್ಚಿಸಿದ್ದೇವೆ ಅಷ್ಟೇ. ಅದನ್ನು ಬಿಟ್ಟು ಬೇರೆಯಾವುದೇ ಚರ್ಚೆ ಆಗಿಲ್ಲ ಎಂದರು.
ಬಸವರಾಜ ಬೊಮ್ಮಾಯಿ ಮಾತನಾಡಿ, ಯಾವುದೇ ರಾಜಕೀಯ ವಿಚಾರ ಚರ್ಚೆ ಆಗಿಲ್ಲ. ಕುಮಾರಸ್ವಾಮಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಕುಮಾರಸ್ವಾಮಿ ನಾನು ತುಂಬಾ ಹಳೇ ಸ್ನೇಹಿತರುನನ್ನ ತಂದೆ ಕಾಲದಿಂದಲೇ ದೇವೇಗೌಡರ ಕುಟುಂಬದ ಜೊತೆ ಉತ್ತಮ ಬಾಂಧವ್ಯ ಇದೆ. ನಿನ್ನೆಯೇ ಅವರು ಭೇಟಿ ಮಾಡಬೇಕೆಂದಿದ್ದರು. ಕ್ಷೇತ್ರದ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆಯಾಗಿದೆಯೇ ಹೊರತು ಯಾವುದೇ ರಾಜಕೀಯ ಚರ್ಚಿಸಿಲ್ಲ ಎಂದರು. (kpc)
