

ಶಿವಮೊಗ್ಗದ ಸ್ಫೋಟದ ದಿನ ಅಂದರೆ……
ಗುರುವಾರ ರಾತ್ರಿ ಸರಿಸುಮಾರು 10ರಿಂದ 10.30 ರ ಅವಧಿಯಲ್ಲಿ ಭೂಕಂಪನವಾದ ಅನುಭವದ ಬಗ್ಗೆ ಅನೇಕರು ಮಾತನಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡಾ ಭೂಕಂಪನವಾದ ಅನುಭವದ ಬಗ್ಗೆ ಅನೇಕ ಕಡೆ ಚರ್ಚೆ ಯಾಗಿದೆ. ಅಂದು ಕೊಂಡ್ಲಿ ಹಾಳದಕಟ್ಟಾ ಭಾಗದಲ್ಲಿ ಮನೆಯೊಂದರ ಬಾಗಿಲು ಸಿಥಿಲವಾದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸುದ್ದಿಯಾಗಿದೆ. ಆದರೆ ಶಿವಮೊಗ್ಗದಿಂದ ನೂರಾರು ಕಿ.ಮಿ. ದೂರದ ಸಿದ್ಧಾಪುರ ಬೇಡ್ಕಣಿ ಗ್ರಾಮ ಪಂಚಾಯತ್ ದೊಂಬೆಕೈ ಹೊಸಳ್ಳಿಯಲ್ಲಿ ವಿಷ್ಣು ನಾಯ್ಕರ ಮನೆ ಗೋಡೆಗಳು ಸೀಳುಬಿಟ್ಟಿರುವ ಬಗ್ಗೆ ಅಂದೇ ಆದ ಘಟನೆ ಈಗ ಬಹುಚರ್ಚಿತ ವಿಷಯವಾಗಿದೆ.
ಹೊಸಳ್ಳಿಯ ವಿಷ್ಣು ನಾಯ್ಕ ಗುರುವಾರ ಸಿದ್ಧಾಪುರದಿಂದ ಮೈಸೂರಿಗೆ ಹೊರಟಿದ್ದ ಅವರ ಕುಟುಂಬವನ್ನು ಕಳುಹಿಸಿಕೊಟ್ಟವರು ಆಯಾಸದಿಂದ ಮನೆಗೆ ಬಂದು ಮಲಗುತ್ತಾರೆ. ಅವರು ಬಂದು ಮಲಗಿದ ಕೆಲವು ಸಮಯದ ನಂತರ ಅಂದರೆ ಹತ್ತು ಗಂಟೆಯ ನಂತರ ಶಬ್ಧವಾದರೂ ಪರೀಕ್ಷಿಸದೆ ನಿದ್ರೆ ಹೋಗುತ್ತಾರೆ. ಮುಂಜಾನೆ ಎಂದಿನಂತೆ ಎದ್ದವರಿಗೆ ಆಶ್ಚರ್ಯ ಅವರ ಮನೆಯ 4 ಗೋಡೆಗಳು ಬಿರುಕುಬಿಟ್ಟಿವೆ. ಇದನ್ನು ಸ್ಥಳೀಯ ಗ್ರಾಮ ಲೆಕ್ಕಿಗರಿಗೆ ಅಲ್ಲಿಯ ಜನಪ್ರತಿನಿಧಿಗಳು ತಿಳಿಸುತ್ತಾರೆ. ತಾಲೂಕಾ ಆಡಳಿತ ಗಮನಿಸದ ಈ ಘಟನೆಯ ಬಗ್ಗೆ ಸ್ಥಳಿಯರು, ಬಾಧಿತರು ವಾಸ್ತವವನ್ನು ವಿವರಿಸುತ್ತಾರೆ.
ಮನೆಯ ಗೋಡೆಗಳು ಬಿರುಕುಬಿಟ್ಟು ಶಿಥಿಲವಾಗಿರುವುದು ಸತ್ಯ ಅದಾಗಿದ್ದು ಶಿವಮೊಗ್ಗ ಸ್ಫೋಟದ ದಿನ ಎನ್ನುವುದು ಕಾಕತಾಳೀಯವಾದರೂ ವಾಸ್ತವ. ಈ ಬಗ್ಗೆ ವಿಚಾರಣೆ ತನಿಖೆಯಾಗಿ ಸತ್ಯ ಶೋಧನೆ ಯಾಗಬೇಕಿದೆ. ಶಿವಮೊಗ್ಗದ ಜಿಲಿಟನ್ ಸ್ಫೋಟ 170 ಕಿ.ಮೀ ವರೆಗೆ ಲಘು ಪರಿಣಾಮ ಮಾಡಿರುವ ಬಗ್ಗೆ ಮಾಧ್ಯಮಗಳು ತಜ್ಞರ ಅಭಿಪ್ರಾಯ ಪ್ರಕಟಿಸಿವೆ. ಈ ತಜ್ಞರ ಅಭಿಪ್ರಾಯ ನಂಬುವುದಾದರೆ….. ಸಿದ್ದಾಪುರ ತಾಲೂಕಿನ ಜನ ಶಬ್ಧವಾಯಿತು, ಮನೆ ಶಿಥಿಲವಾಯಿತು ಎನ್ನುವುದು ಸತ್ಯ. ಜಿಲ್ಲಾಡಳಿತ ಶಿರಸಿ-ಸಿದ್ದಾಪುರ ಪ್ರದೇಶಗಳಲ್ಲಿ ಪಾತ್ರೆಗಳು ನೆಲಕ್ಕುರುಳಿದ, ಗೋಡೆಗಳು ಶಿಥಿಲವಾದ, ಗುಂಡುಹೊಡೆದಂಥ ಶಬ್ಧ ಕೇಳಿದ ಜನರ ಅಭಿಪ್ರಾಯಗಳನ್ನು, ಅನುಭವಗಳನ್ನು ನಿರ್ಲಕ್ಷಿಸಬಾರದಲ್ಲವೆ?
ಹೊಸಳ್ಳಿಯಲ್ಲಿ ನೂತನವಾಗಿ ಗ್ರಾ.ಪಂ. ಸದಸ್ಯರಾಗಿರುವ ಗೋವಿಂದ ನಾಯ್ಕ ವಿಷ್ಣುನಾಯ್ಕರ ಮನೆಯ ಶಿಥಿಲವಾದ ಗೋಡೆಗಳ ಬಗ್ಗೆ ತಾಲೂಕಾ ಆಡಳಿತದ ಗಮನ ಸೆಳೆದಿದ್ದಾರೆ. ಬಾಧಿತ ವಿಷ್ಣುನಾಯ್ಕ ಈ ಬಗ್ಗೆ ಅರ್ಜಿ ನೀಡುವ ಯೋಚನೆಯಲ್ಲಿದ್ದಾರೆ. ನೆರೆಯ ತಾಳಗುಪ್ಪ, ಅವರಗುಪ್ಪಾ ಸೇರಿದಂತೆ ಮಲೆನಾಡಿನಾದ್ಯಂತ ಕೇಳಿಬಂದ ಸ್ಫೋಟದ ಶಬ್ಧ ಈಗಿನ ಆಡಳಿತ ಪಕ್ಷದ ಮಲೆನಾಡಿನ ಪ್ರಮುಖರ ಹಣದ ಮೂಲದ ದುರಂತ ಎನ್ನುವ ಚರ್ಚೆ ಕೂಡಾ ನಡೆಯುತ್ತಿದೆ. ದೇಶ ರಕ್ಷಿಸುವ ಸೋಗಿನಲ್ಲಿ ಮತಾಂಧರು ದೇಶ ನಾಶ ಮಾಡುತಿದ್ದಾರೆ ಎನ್ನುವ ಆರೋಪಕ್ಕೆ ಕೂಡಾ ಈ ವಿದ್ಯಮಾನ ಸಾಕ್ಷಿಯಾಗಿದೆ.


