

ಮಾತನಾಡುವ ಕೌಶಲ್ಯ ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿ – ಶ್ಯಾಮಲಾ ಹೂವಿನಮನೆ
ಸಿದ್ದಾಪುರ- : ಮಾತನಾಡುವ ಕೌಶಲ್ಯದ ಮೂಲಕ ವಿಷಯ ಜ್ಞಾನ ಹಾಗೂ ಮಾತನಾಡುವ ಕಲೆ ಬೆಳೆಯುತ್ತದೆ. ವಿದ್ಯಾರ್ಥಿಗಳು ತಮ್ಮ ಪಠ್ಯದ ಜೊತೆ ಪಠ್ಯೇತರ ವಿಷಯವನ್ನು ಸಂಗ್ರಹ ಮಾಡಿಕೊಂಡು, ಒಳ್ಳೆಯ ಭಾಷಣಕಾರರಾಗುವುದರ ಮೂಲಕ ವ್ಯಕ್ತಿತ್ವ ಬೆಳವಣಿಗೆ ಮಾಡಿಕೊಳ್ಳಲು ಸಹಕಾರಿ ಎಂದು ಸ್ಥಳೀಯ ಲಯನ್ಸ ಕ್ಲಬ್ ಅಧ್ಯಕ್ಷೆ ಶ್ಯಾಮಲಾ ರವಿ ಹೆಗಡೆ ಹೂವಿನಮನೆ ಹೇಳಿದರು.
ಅವರು ಸಿದ್ದಾಪುರ ಲಯನ್ಸ ಕ್ಲಬ್ ವತಿಯಿಂದ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಕರೋನಾ ಕಲಿಸಿದ ಪಾಠಗಳು ಎಂಬ ವಿಷಯವಾಗಿ ತಾಲೂಕಾ ಮಟ್ಟದ ಸ್ಪರ್ಧೆಯನ್ನು ಬಾಲಭವನದಲ್ಲಿ ಏರ್ಪಡಿಸಿದ್ದು, ಅದರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ನಿರ್ಣಾಯಕರಾಗಿ ಜಿ.ಜಿ. ಹೆಗಡೆ ಬಾಳಗೋಡ, ನಿವೃತ್ತ ಮುಖ್ಯ ಶಿಕ್ಷಕಿ ತ್ರಿವೇಣಿ ಹೆಗಡೆ ಮತ್ತು ವೀಣಾ ಶೇಟ ಭಾಗವಹಿಸಿದ್ದರು.
ವೇದಿಕೆಯಲ್ಲಿ ಲಯನ್ಸ್ ಜಿಲ್ಲಾ ಚೇರ್ಮನ್ ಸಿ.ಎಸ್. ಗೌಡರ್ ಹೆಗ್ಗೋಡ್ಮನೆ, ಕೋಶಾಧ್ಯಕ್ಷ ಪ್ರಶಾಂತ ಶೇಟ, ಕಾರ್ಯದರ್ಶಿ ರಾಘವೇಂದ್ರ ಭಟ್ಟ ಸ್ವಸ್ತಿಕ ಉಪಸ್ಥಿತರಿದ್ದರು.
ಜಿ.ಜಿ. ಹೆಗಡೆ ಬಾಳಗೋಡ ಸ್ವಾಗತಿಸಿ ವಂದಿಸಿದರು.
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಮೇಖಲಾ ಹೆಗಡೆ, ಚೈತನ್ಯ ಪಿ.ಯು. ಕಾಲೇಜ ಸಿದ್ದಾಪುರ, ದ್ವಿತೀಯ ಸ್ಥಾನ ಭಾವನಾ ಹೆಗಡೆ, ಚೈತನ್ಯ ಪಿ.ಯು. ಕಾಲೇಜ ಸಿದ್ದಾಪುರ, ತೃತೀಯ ಸ್ಥಾನ, ಸುನೀತಾ ಗೌಡ್ ಎಂ.ಜಿ.ಸಿ. ಪಿ.ಯು. ಕಾಲೇಜ ಸಿದ್ದಾಪುರ ಪಡೆದರು.
ತಾಳಗುಪ್ಪ ಹುಬ್ಬಳ್ಳಿ ರೈಲಿಗಾಗಿ ಮನವಿ-
ದಿನಾಂಕ : 22-01-2021 ರಂದು ಶ್ರೀ ಅಜಯಕುಮಾರ ಸಿಂಗ್, ಮ್ಯಾನೇಜರ್, ಸೌತ್ ವೆಸ್ಟರ್ನ್ ರೈಲ್ವೆ ಹುಬ್ಬಳ್ಳಿ ಇವರಿಗೆ ತಾಳಗುಪ್ಪಾದಿಂದ ಸಿರ್ಸಿ ಮೂಲಕ ಹುಬ್ಬಳ್ಳಿಗೆ ರೈಲು ಪ್ರಾರಂಭಿಸಲು ಸಿದ್ದಾಪುರ ತಾಲೂಕಿನ ಕೆಳಗೆ ಕಾಣಿಸಿದ ವಿವಿಧ ಸಂಘಟನೆ ಮೂಲಕ ಮನವಿ ಅರ್ಪಿಸಲಾಯಿತು.
ಶ್ರೀ ಸಿ.ಎಸ್. ಗೌಡರ್, ಲಯನ್ಸ್ ಕ್ಲಬ್, ಐ.ಕೆ. ನಾಯ್ಕ, ಎಂ.ಎನ್. ನಾಯ್ಕ ನಿವೃತ್ತ ಸಂಘದಿಂದ, ಜಾಗೃತ ನಾಗರಿಕರ ವೇದಿಕೆಯಿಂದ ಗುರುನಾಥ ವೆರ್ಣೇಕರ, ವಾಸುದೇವ ಬಿಳಗಿ, ಬಿ.ಎ. ಸಾಬ, ಕುಮಾರ ಜಪಾಟಿ, ರೈಲ್ವೇ ಸಂಚಾರ ಸಮಿತಿ ಪರವಾಗಿ ನಂದನ ಬೋರ್ಕರ್, ಅಣ್ಣಪ್ಪ ನಾಯ್ಕ, ಹಾಗೂ ಪ್ರಮುಖರಾದ ವಿನು ಮಹಾಲೆ, ವಿದ್ಯಾಧರ ಭಟ್ಟ, ಜ್ಞಾನೇಶ್ವರ ಚೌಧರಿ, ಪೌದಾರ, ರೂಜಾರಿ, ರವಿ ಮೆರವಣಿಗೆ, ಶಂಭು ಮುಟಗುಪ್ಪೆ, ಎಸ್.ಎಂ. ಪಾಟೀಲ, ಶಿವಕುಮಾರ ಸೋದೆಮಠ ಹಾಗೂ ಇತರೆ 25 ಜನ ನಾಗರಿಕರು ಮನವಿ ಸಲ್ಲಿಸಿದರು. ಮನವಿ ಪಡೆದ ಅಧಿಕಾರಿಗಳು, ಈಗಾಗಲೇ ಸರ್ವೆ ಕಾರ್ಯ ಪ್ರಾರಂಭವಾಗಿದೆ. ಆದಷ್ಟು ಶೀಘ್ರವಾಗಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.


ಸಿದ್ದಾಪುರ: ಶಕ್ತಿ ಯಿಂದ ಚಾಕಚಕ್ಯತೆ ಯಿಂದ ಆಡುವ ಆಟ ಕಬ್ಬಡ್ಡಿ, ನಮ್ಮ ಹೆಮ್ಮೆಯ, ಮಣ್ಣಿನ ಕ್ರೀಡೆ. ಕ್ರೀಡೆ ಗೆ ಹೆಚ್ಚಿನ ಪ್ರೋತ್ಸಾಹ ಕೊಡಬೇಕು ಎಂದು ಉದ್ಯಮಿ ಉಪೇಂದ್ರ ಪೈ ಅಭಿಪ್ರಾಯ ಪಟ್ಟರು.
ಅವರು ತಾಲೂಕಿನ ಕೋಲಸಶಿರ್ಸಿಯಲ್ಲಿ ಶ್ರೀ ಸಾಯಿಗಂಗಾ ಡಿಸ್ಟ್ರಿಬ್ಯೂಟರ್ ಮತ್ತು ಮಾರಿಕಾಂಬಾ ಗೆಳೆಯರ ಬಳಗ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಮ್ಯಾಟ್ ಮಾದರಿಯ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಮಾನಸಿಕ ಒತ್ತಡದಿಂದ ಹೊರ ಬರಲು ಕ್ರೀಡೆ ಯಲ್ಲಿ ತೊಡಗಿಕೊಳ್ಳಬೇಕು. ಇಂತಹ ಕ್ರೀಡಾ ಕೂಟಗಳನ್ನು ಏರ್ಪಡಿಸುವ ಸಂಘಟಕರ ಶ್ರಮಕ್ಕೆ ಪ್ರೋತ್ಸಾಹ ಬೆಂಬಲ ನೀಡಬೇಕು, ನಾವೆಲ್ಲರೂ ಪ್ರೀತಿ ವಿಶ್ವಾಸದಿಂದ ಬಾಳಬೇಕು ಎಂದರು.
ಕಬ್ಬಡ್ಡಿ ಪೇಡ್ರೇಷನ ಸುಭಾಷ್ ನಾಯ್ಕ ಕಾನ್ಸೂರ ಮಾತನಾಡಿ ಕ್ರೀಡಾಪಟುಗಳು ಶಿಸ್ತು ಕಾಪಾಡಬೇಕು, ಆದಷ್ಟೂ ಬೇಗ ಪಂದ್ಯಾವಳಿ ಪ್ರಾರಂಭಗೊಳ್ಳಲು ಆಯೋಜಕರು, ಆಟಗಾರರು ಸಹಕಾರ ನೀಡಬೇಕು, ಕ್ರೀಡೆಗೆ ತರಭೇತಿ ನೀಡಲು ಆಸಕ್ತಿ ವಹಿಸಬೇಕು ಎಂದರು.
ತಾಲೂಕು ಪಂಚಾಯತ್ ಸದಸ್ಯ ವಿವೇಕ ಭಟ್, ಪತ್ರಕರ್ತ ರಾದ ಕನ್ನೇಶ ನಾಯ್ಕ ಕೋಲಸಶಿರ್ಸಿ, ನಾಗರಾಜ ಮಾಳ್ಕೋಡ, ಕಬ್ಬಡ್ಡಿ ಪೇಡ್ರೇಷನ ತಾಲೂಕಾಧ್ಯಕ್ಷ ಎಸ್ ಕೆ ನಾಯ್ಕ ಕಡಕೇರಿ,ಅಧ್ಯಕ್ಷತೆ ವಹಿಸಿದ್ದ ರಾಮಕೃಷ್ಣ ರಾಮ ನಾಯ್ಕ ಮಣೆಗಾರ ಮಾತನಾಡಿದರು.
ಗ್ರಾಮ ಪಂಚಾಯತ್ ಮಾಜಿ ಸದಸ್ಯ ಬಾಲಕ್ರಷ್ಣ ನಾಯ್ಕ ಕತ್ತಿ, ಮಾರಿಕಾಂಬಾ ಕಮೀಟಿ ಉಪಾಧ್ಯಕ್ಷ ರಾಮಚಂದ್ರ ನಾಯ್ಕ ಕೊಠಾರಿ, ಪಾಂಡುರಂಗ ವಿ ನಾಯ್ಕ ಚನಮಾಂವ, ಬಂಕೇಶ್ವರ ಪ್ರೌಢಶಾಲೆ ಮುಖ್ಯೋಧ್ಯಾಪಕ ಲೋಕೇಶ ಕೆ. ನಾಯ್ಕ, ಉಪನ್ಯಾಸಕ ಗಣೇಶ ನಾಯ್ಕ, ಗ್ರಾಮ ಪಂಚಾಯತ್ ಸದಸ್ಯರಾದ ಉಮಾ ಪಾಂಡುರಂಗ ನಾಯ್ಕ, ಎ. ಆರ್. ತಿಲಕಕುಮಾರ, ಪತ್ರಕರ್ತ ರಾದ ಶಿವಶಂಕರ ಕೋಲಸಶಿರ್ಸಿ, ಜಿಲ್ಲಾ ಕಬ್ಬಡ್ಡಿ ಪೇಡ್ರೇಷನ ಕಾರ್ಯದರ್ಶಿ ರಮಾನಂದ ನಾಯ್ಕ, ನಿರ್ಣಾಯಕ ರಾದ ಮಂಜುನಾಥ ಅಳವಳ್ಳಿ, ಅಂಕಣ ಉದ್ಘಾಟಿಸಿದ ಊರಿನ ಹಿರಿಯರಾದ ಪಾಂಡು ಕರಿಯಾ ನಾಯ್ಕ ಶೆರಕ್ಕಿ, ಸೋಮನಾಥ ಗೌಡರ, ನಾರಾಯಣ ರಾಮ ಕಟ್ರನ್,ಗಣಪತಿ ಹುಚ್ಚ ನಾಯ್ಕ ಕತ್ತಿ, ಮಾರ್ಯ ಈರಾ ಕತ್ತಿ, ಹನುಮಂತ ಮೈಲಾ ನಾಯ್ಕ ಮುರ್ತೂರ, ಎಂ. ಐ ನಾಯ್ಕ ಕೊಠಾರಿ, ತಿಮ್ಮಾ ತಿಮ್ಮಾ ನಾಯ್ಕ ಶುಂಠಿ ಉಪಸ್ಥಿತರಿದ್ದರು.
ನಾರಾಯಣ ಶೇರುಗಾರ್ ನಿರೂಪಣೆ ಮಾಡಿದರು. ಬಳಗದ ಕಾರ್ಯದರ್ಶಿ ದಿನೇಶ ಕತ್ತಿ ಸ್ವಾಗತಿಸಿದರು. ಅಧ್ಯಕ್ಷ ರವಿಕುಮಾರ್ ಕೊಠಾರಿ ವಂದಿಸಿದರು.
ಯಲ್ಲಾಪುರ ಬಿಳಕಿ ಪ್ರಥಮ, ಸೊರಬದ ಚೌಡಿಕೊಪ್ಪ ದ್ವೀತಿಯ, ತೆಲಗುಂದ್ಲಿ ತ್ರತೀಯ,ಅಂಕೋಲಾ ಶ್ರೀ ರಾಮ ಕ್ಲಬ್ ಚತುರ್ಥ ಬಹುಮಾನ ಪಡೆದುಕೊಂಡವು




