local & crime news-ಅವಿರೋಧ ಆಯ್ಕೆ, ಹೋಗಿದ್ದೀಯೆ, ಮತ್ತೆ ಬರಬೇಡ ಮಗಳೇ’!

ಸಿದ್ದಾಪುರ,
ತಾಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ ಐದು ವರ್ಷದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆ ಭಾನುವಾರ ನಡೆಯಿತು.
ಅನಂತ ವಿಘ್ನೇಶ್ವರ ಹೆಗಡೆ ಗೊಂಟನಾಳ,ಅನಂತ ಸುಬ್ರಾಯ ಹೆಗಡೆ ಹೊಸಗದ್ದೆ, ಅಶೋಕ ಗಣಪತಿ ಹೆಗಡೆ ಹಿರೇಕೈ, ಅಶೋಕ ರಾಮಚಂದ್ರ ಹೆಗಡೆ ಹೀನಗಾರ, ನಾಗರಾಜ ಶೇಷಗಿರಿ ಹೆಗಡೆ ಹುಲಿಮನೆ, ಮಹಾಬಲೇಶ್ವರ ದೇವರು ಭಟ್ಟ ಅಗ್ಗೆರೆ, ಮಂಜುನಾಥ ಕೃಷ್ಣ ನಾಯ್ಕ ತೆಂಗಿನಮನೆ, ವಿಘ್ನೇಶ್ವರ ಹನುಮಂತ ಗೌಡ ಮಾದ್ಲಮನೆ,ಇಂದಿರಾ ಗಜಾನನ ಹೆಗಡೆ ಹಾರ್ಸಿಕಟ್ಟಾ, ಸುಮಾ ಮಂಜುನಾಥ ಹೆಗಡೆ ಹೊನ್ನೆಹದ್ದ, ನಾಗರಾಜ ಬಂಗಾರೇಶ್ವರ ಹೆಗಡೆ ಹೊಲಗದ್ದೆ, ಸುಧಾಕರ ಗಣಪ ಹರಿಜನ ಹೊನ್ನೆಹದ್ದ ಇವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಚುನಾವಣಾಧಿಕಾರಿ ಆಗಿ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಕುಮಾರ ಸಿ.ಜಿ. ಕಾರ್ಯನಿರ್ವಹಿಸಿದ್ದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.

ಸಿದ್ದಾಪುರ
ಕಲೆ ಹಾಗೂ ಕಲಾವಿದರು ಉಳಿಯಬೇಕಾದರೆ ಕಲಾ ಸಂಘಟಕರು ಮುಖ್ಯ. ಅದರಂತೆ ಕಲೆಯನ್ನು ಪ್ರೋತ್ಸಾಹಿಸುವವರು ಬೇಕು ಎಂದು ಹವ್ಯಾಸಿ ಯಕ್ಷಗಾನ ಕಲಾವಿದ ಜೈಕುಮಾರ್ ನಾಯ್ಕ ಮೆಣಸಿ ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾ ಗಣೇಶ ಮಂಟಪದಲ್ಲಿ ಯಕ್ಷತರಂಗಿಣಿ ಕಲಾ ಸಂಘ ಮಕ್ಕಳಿಂದ ಆಯೋಜಿಸಿದ್ದ ಸೂರ್ಯರತ್ನ ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ತಾವು ನಿರ್ವಹಿಸುವ ಪಾತ್ರದ ಕುರಿತು ಚಿಂತನೆ ನಡೆಸಬೇಕು. ನೃತ್ಯ ಮಾಡುವಾಗ ಪ್ರೇಕ್ಷರಿಂದ ಬರುವ ಚಪ್ಪಾಳೆ ಹಾಗೂ ಶಿಳ್ಳೆಗೆ ಮರುಳಾಗಬಾರದು. ಯಕ್ಷಗಾನದಲ್ಲಿ ತಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದಕ್ಕೆ ಮುಂದಾಗಬೇಕೆಂದರು.
ಅಧ್ಯಕ್ಷತೆವಹಿಸಿದ್ದ ತಾಪಂ ಅಧ್ಯಕ್ಷ ಸುಧೀರ್ ಬಿ.ಗೌಡರ್ ಮಾತನಾಡಿ ಮಕ್ಕಳಿಗೆ ಯಕ್ಷಗಾನದಿಂದ ಉತ್ತಮ ಸಂಸ್ಕಾರ ದೊರಕುತ್ತದೆ.ಯಕ್ಷಗಾನ ಕಲೆಗೆ ಎಲ್ಲರೂ ಪ್ರೋತ್ಸಾಹ ನೀಡಬೇಕೆಂದರು.
ಅನಂತ ಶಾನಭಾಗ್ ಹಾರ್ಸಿಕಟ್ಟಾ, ಎಸ್.ಆರ್.ಹೆಗಡೆ ಕುಂಬಾರಕುಳಿ,ಅನಂತ ಹೆಗಡೆ ಹೊಸಗದ್ದೆ,ಆರ್.ಬಿ.ಗೌಡ ಹೊಸ್ಕೊಪ್ಪ, ರವೀಂದ್ರ ಹೆಗಡೆ ಹಿರೇಕೈ,ಆರ್.ಕೆ.ನಾಯ್ಕ ಹಾರ್ಸಿಕಟ್ಟಾ, ವೀಣಾ ಪಿ.ನಾಯ್ಕ,ಎ.ಆರ್.ಹೆಗಡೆ ಹೀನಗಾರ, ಎ.ಜಿ.ಹೆಗಡೆ ಹಿರೇಕೈ, ಸಿದ್ದಾರ್ಥ ಗೌಡರ್, ರಮೇಶ ಹಾರ್ಸಿಮನೆ, ಶಾಂತಕುಮಾರ ಪಾಟೀಲ್ ಮತ್ತಿತರರಿದ್ದರು.
ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ರಾಮಚಂದ್ರ ನಾಯ್ಕ ಹೆಮ್ಮನಬೈಲ್ ಅವರನ್ನು ಯಕ್ಷತರಂಗಿಣಿ ಸಂಸ್ಥಾಪಕ ನಂದನ ನಾಯ್ಕ ಸನ್ಮಾನಿಸಿದರು. ನಂತರ ಪ್ರದರ್ಶನಗೊಂಡ ಸೂರ್ಯರತ್ನ ಯಕ್ಷಗಾನದ ಜನಮನ ರಂಜಿಸಿತು. ಹಿಮ್ಮೇಳದಲ್ಲಿ ಕೃಷ್ಣ ಮರಾಠೆ, ವಿಠ್ಠಲ ಪೂಜಾರಿ ಹಾಗೂ ನಾರಾಯಣ ಕುಮಾರ ಸಹಕರಿಸಿದರು. ಅರ್ಚನಾ ನಾಯ್ಕ ತೆಂಗಿನಮನೆ ಕಾರ್ಯಕ್ರಮ ನಿರ್ವಹಿಸಿದರು.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ವಿಶೇಷ ಕಾರ್ಯಕ್ರಮ

1 ರಿಂದ 5ನೇ ತರಗತಿ

1) ಶ್ರಾವ್ಯಾ ಗೌಡ – ಸ.ಹಿ.ಪ್ರಾ. ಶಾಲೆ ಮುಠ್ಠಳ್ಳಿ- ಪ್ರಥಮ
1) ಶರಧಿ ಹೆಗಡೆ -ಸ.ಹಿ.ಪ್ರಾ. ಶಾಲೆ ಕೋಡ್ಸರ(ಮುಠ್ಠಳ್ಳಿ) – ತೃತೀಯ

6 ಮತ್ತು 7ನೇ ತರಗತಿ
1) ಶ್ರೀರಕ್ಷಾ ವಿ. ಹೆಗಡೆ – ಸ.ಹಿ.ಪ್ರಾ. ಶಾಲೆ ಹಾರ್ಸಿಕಟ್ಟಾ – ಪ್ರಥಮ
2) ದಿವ್ಯಶ್ರೀ ಜಿ. ನಾಯ್ಕ – ಸ.ಹಿ.ಪ್ರಾ. ಶಾಲೆ ಹಾರ್ಸಿಕಟ್ಟಾ – ದ್ವಿತೀಯ
3) ಅನನ್ಯ ಎಮ್. ಭಟ್ಟ – ಸ.ಹಿ.ಪ್ರಾ. ಶಾಲೆ ಹಾರ್ಸಿಕಟ್ಟಾ – ತೃತೀಯ

8 ರಿಂದ 10ನೇ ತರಗತಿ – ಅಶೋಕ ಪ್ರೌಢ ಶಾಲೆ ಹಾರ್ಸಿಕಟ್ಟಾ
1) ನಯನಾ ಕೆ. ಶೇಟ್ – ಪ್ರಥಮ
2) ಪೂರ್ಣಿಮಾ ಮರಾಠೆ – ದ್ವಿತೀಯ
3) ಐಶ್ವರ್ಯ ಹೆಗಡೆ – ತೃತೀಯ

ಉಪಸ್ಥಿತರಿದ್ದ ಸದಸ್ಯರು:-
1) ಶ್ರೀಮತಿ ಹನುಮಕ್ಕ ರಂಗಪ್ಪ ಭೋವಿ ಗ್ರಾ.ಪಂ. ಸದಸ್ಯರು ಹಾರ್ಸಿಕಟ್ಟಾ
2) ಶ್ರೀಮತಿ ವಿಶಾಲಾಕ್ಷಿ ಮಂಜುನಾಥ ಹಸ್ಲರ ಗ್ರಾ.ಪಂ. ಸದಸ್ಯರು ಹಾರ್ಸಿಕಟ್ಟಾ
3) ಶ್ರೀ ಶಾಂತಕುಮಾರ ಶಿವಾಜಿ ಪಾಟೀಲ್ ಗ್ರಾ.ಪಂ. ಸದಸ್ಯರು ಹಾರ್ಸಿಕಟ್ಟಾ
4) ಶ್ರೀಮತಿ ಅಕ್ಷತಾ ಮಹೇಂದ್ರ ಮಡಿವಾಳ ಗ್ರಾ.ಪಂ. ಸದಸ್ಯರು ಹಾರ್ಸಿಕಟ್ಟಾ
5) ಶ್ರೀಮತಿ ಸರೋಜಾ ರಾಜು ನಾಯ್ಕ ಗ್ರಾ.ಪಂ. ಸದಸ್ಯರು ಹಾರ್ಸಿಕಟ್ಟಾ
6) ಶ್ರೀಮತಿ ವಿದ್ಯಾ ಪ್ರಕಾಶ ನಾಯ್ಕ ಗ್ರಾ.ಪಂ. ಸದಸ್ಯರು ಹಾರ್ಸಿಕಟ್ಟಾ
7) ಶ್ರೀಮತಿ ಪ್ರೇಮಾ ಪರಮೇಶ್ವರ ನಾಯ್ಕ ಗ್ರಾ.ಪಂ. ಸದಸ್ಯರು ಹಾರ್ಸಿಕಟ್ಟಾ
8) ಶ್ರೀ ಗೋಪಾಲಕೃಷ್ಣ ಮಂಜುನಾಥ ದೇವಾಡಿಗ ಗ್ರಾ.ಪಂ. ಸದಸ್ಯರು ಹಾರ್ಸಿಕಟ್ಟಾ
ಹಾಗೂ ಎಲ್ಲಾ ಶಾಲಾ ಶಿಕ್ಷಕರು, ಗ್ರಾ.ಪಂ. ಪಿಡಿಒ ರಾಜೇಶ ನಾಯ್ಕ,ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯದರ್ಶಿ ಎಸ್.ಎಸ್.ಸಾಗರೇಕರ್ ನಿರ್ವಹಿಸಿದರು.

ಸಿದ್ದಾಪುರ: ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಕಡಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನದಕುರಿತುಜಾಗೃತಿ ಮೂಡಿಸುವಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆಗ್ರಾಮ ಪಂಚಾಯತ ಸದಸ್ಯಕೃಷ್ಣಮೂರ್ತಿ ಮಡಿವಾಳ ಚಾಲನೆ ನೀಡಿದರು.ಎಸ್.ಡಿ.ಎಮ್.ಸಿ ಅಧ್ಯಕ್ಷ ಸುರೇಶ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು.ಮುಖ್ಯೋಧ್ಯಾಪಕಿ ಮಾಯಾ ಭಟ್, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಉಪಾಧ್ಯಕ್ಷೆ ಮಂಜುಳಾ ಪಟಗಾರ, ಸಹ ಶಿಕ್ಷಕರಾದ ಶಾಂತಲಾಗಾಂವಕರ್, ಕೇಶವ ನಾಯ್ಕಇದ್ದರು.

ಹೋಗಿದ್ದೀಯೆ, ಮತ್ತೆ ಬರಬೇಡ ಮಗಳೇ’! ನಟಿ ಜಯಶ್ರೀ ಸಾವಿಗೆ ನೊಂದ ಹಿತೈಶಿಯ ಸಂತಾಪ

ರೂಪದರ್ಶಿ, ನಟಿ ಜಯಶ್ರೀ ಬಾರದೂರಿಗೆ ತೆರಳಿದ್ದಾರೆ. ಆದರೆ ಸಹಜವಾಗಲ್ಲ, ಆತ್ಮಹತ್ಯೆಯ ಮೂಲಕ. ಇಂತಹ ಕೆಟ್ಟ ನಿರ್ಧಾರಕ್ಕೆ ಚಿಕ್ಕ ವಯಸ್ಸಿನಲ್ಲಿ ನಡೆದ ಘಟನೆಯೇ ಕಾರಣವಾಯಿತೇ ಎಂಬ ಪ್ರಶ್ನೆ ಮೂಡುತ್ತದೆ.

jayashree

ಬೆಂಗಳೂರು: ರೂಪದರ್ಶಿ, ನಟಿ ಜಯಶ್ರೀ ಬಾರದೂರಿಗೆ ತೆರಳಿದ್ದಾರೆ. ಆದರೆ ಸಹಜವಾಗಲ್ಲ, ಆತ್ಮಹತ್ಯೆಯ ಮೂಲಕ. ಇಂತಹ ಕೆಟ್ಟ ನಿರ್ಧಾರಕ್ಕೆ ಚಿಕ್ಕ ವಯಸ್ಸಿನಲ್ಲಿ ನಡೆದ ಘಟನೆಯೇ ಕಾರಣವಾಯಿತೇ ಎಂಬ ಪ್ರಶ್ನೆ ಮೂಡುತ್ತದೆ. 

ಅದೆಷ್ಟೇ ಪ್ರತಿಭೆಯಿದ್ದರೂ, ಮನಸ್ಸು ಗಟ್ಟಿಯಿರದಿದ್ದರೆ, ದಿಟ್ಟ ಗುರಿಯಿರದಿದ್ದರೆ ಆತ್ಮಹತ್ಯೆಯಂತಹ ಘಟನೆಗಳು ಜರುಗಿಬಿಡುತ್ತವೆ. ಜಯಶ್ರೀ ಜೀವನದಲ್ಲಿಯೂ ಇದೇ ಆಗಿದೆ.

100%

ತನಗೆ ಚಿಕ್ಕ ವಯಸ್ಸಿನಲ್ಲಿಯೇ ಆಗಬಾರದ್ದು ಆಗಿದೆ. ಮತ್ತೆ ಮತ್ತೆ ನೆನಪಾಗುವ ಘಟನೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಈ ಮೊದಲು ಆಕೆ ಹೇಳಿಕೊಂಡಿದ್ದರು. ಅದಲ್ಲದೆ ಆಸ್ತಿಗೆ ಸಂಬಂಧಿಸಿದ ಕುಟುಂಬ ಕಲಹಗಳು, ಮತ್ತೊಂದೆಡೆ ಅವಕಾಶಗಳ ಕೊರತೆ ಇವೆಲ್ಲವೂ ಜಯಶ್ರೀಯನ್ನು ಕಂಗೆಡಿಸಿತ್ತು.

100%

ನಿರ್ದೇಶಕಿ ರೇಖಾರಾಣಿಯವರ ಬಳಿ ತನ್ನ ಅಳಲನ್ನು ಜಯಶ್ರೀ ತೋಡಿಕೊಂಡಿದ್ದು, ರೇಖಾರಾಣಿ ಕೂಡ ಸಾಂತ್ವನ ಹೇಳಿದ್ದರು. ಇದೀಗ ಆತ್ಮಹತ್ಯೆ ವಿಚಾರ ತಿಳಿದುಬಂದ ನಂತರ “ಜಯಶ್ರೀಯ ಮನಸ್ಸು ಹಾಗೂ ದೇಹದ ಮೇಲೆ ಅತ್ಯಾಚಾರವಾಗಿದೆ. ಇದನ್ನು ನೋಡಿದಾಗ ಮನುಷ್ಯನೆಂಬ ಪ್ರಾಣಿಯ ಮೇಲೆ ಅಸಹ್ಯ ಹುಟ್ಟುತ್ತದೆ” ಎಂದು ರೇಖಾರಾಣಿ ಬರೆದುಕೊಂಡಿದ್ದಾರೆ.

“ಹೋಗಿದ್ದೀಯ. ಮತ್ತೆಂದೂ ಬರಬೇಡ ಮಗಳೆ. ಜಯಶ್ರೀ ರಾಮಯ್ಯ. ಸಣ್ಣ ವಯಸ್ಸಿನಲ್ಲಿ ನೊಂದು ಬೆಂದು, ಎಲ್ಲರಿಗೂ ಮಸಾಲೆಯಾಗಿ ಹುರಿದುರಿದು, ಉರಿದುರಿದು ಸತ್ತ ಸಣ್ಣ ತರುಣಿಯೆಂಬ ಮಗು. ನನ್ನ ಕರೆಗೆ ಓಗೊಟ್ಟು ಮನೆಗೆ ಬರಲಾರಂಭಿಸಿದ ಈ ಹುಡುಗಿಯ ದೇಹ ಮತ್ತು ಮನಸ್ಸುಗಳ ಮೇಲಾಗಿರುವ ಅತ್ಯಾಚಾರಗಳ ಬಗ್ಗೆ ತಿಳಿದಾಗ ಈ ಮನುಷ್ಯನೆಂಬ ಪ್ರಾಣಿಯ ಬಗ್ಗೆ ಅಸಹ್ಯ ಹುಟ್ಟುತ್ತದೆ’ ಎಂದು ಹೇಳಿದ್ದಾರೆ. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *