

ಕೃಷಿ ಮತ್ತು ರೈತನ ಸಮಸ್ಯೆ ಈ ಕಾಲದ್ದಲ್ಲ. ನೀಷೆ, ಬ್ರೆಕ್ಟ್ ಕುವೆಂಪು, ಬೇಂದ್ರೆ ಎಲ್ಲಾ ಕಾಲಗಳಲ್ಲೂ ಬಹಳಷ್ಟು ಜನರು ವ್ಯವಸಾಯ, ಕೃಷಿಕನ ಬದುಕಿನ ಬವಣೆಯನ್ನೇ ಚಿತ್ರಿಸಿದ್ದಾರೆ..
ಬ್ರೆಕ್ಟ್ ನ ಕಕೇಶಿಯನ್ ಚಾಕ್ ಸರ್ಕಲ್ ಆ ಕಾಲದ ಬಹುಪ್ರಸಿದ್ಧ ಸಂವಾದ ಕೂಟ. ಆ ಕೂಟದಲ್ಲಿ ಬದುಕಿನ ಬವಣೆ, ರೈತನ ಸಂಕಷ್ಟ, ರಾಷ್ಟ್ರದ ರಾಜಕೀಯ, ಸಾಮಾಜಿಕ, ಧಾರ್ಮಿಕ ವಿದ್ಯಮಾನಗಳೇ ಚರ್ಚೆಗೊಳಪಟ್ಟಿವೆ. ಇಂಥ ಕತೆಯೊಂದನ್ನು ಕನ್ನಡಕ್ಕೆ ಭಾಷಾಂತರಿಸಿ ರಾಜ್ಯದಲ್ಲಿ ಅನೇಕ ಪ್ರಯೋಗಗಳಾಗಿವೆ. ಈಗ ರಂಗಕರ್ಮಿ ಶ್ರೀಪಾದ ಭಟ್ ಮಾರ್ಗದರ್ಶನದಲ್ಲಿ ಇದೇ ರಿಂಗಿನಾಟ ರಂಗಸೌಂಗಧದ ವಾರ್ಷಿಕ ತಿರುಗಾಟದ ರಂಗಪ್ರಸ್ತುತಿಯಾಗಿ ತಯಾರಾಗಿದೆ.
ರಂಗಸೌಗಂಧದ ಗಣಪತಿ ಹೆಗಡೆ ಹುಲಿಮನೆ ನಿರ್ದೇಶಿರುವ ಬ್ರೆಕ್ಟ್ ನ ನಾಟಕದ ಈ ರಂಗಪ್ರಸ್ತುತಿ ಕಳೆದ ವಾರ ಸಿದ್ಧಾಪುರದ ಶಂಕರಮಠ ಸಭಾಂಗಣದಲ್ಲಿ ಮೊದಲ ಪ್ರಯೋಗವಾಗಿ ಗಮನ ಸೆಳೆಯಿತು. ರೈತರು ತಮ್ಮ ಸಮಸ್ಯೆಗೆ ಪರಿಹಾರ ಸೂಚಿಸುವ ಕತೆಯನ್ನು ಚರ್ಚಿಸುತ್ತಾ ನಾಟಕ ರಾಜಪುತ್ರನ ವಿಷಯಕ್ಕೆ ಧುಮುಕುತ್ತದೆ. ಅಲ್ಲಿ ರಾಜಪುತ್ರನನ್ನು ರಕ್ಷಿಸುವ ಮಹಿಳೆಯೊಬ್ಬಳು ಆ ಮಗುವಿನ ವಾರಸುಧಾರಳಾಗುವ ನ್ಯಾಯಾಧೀಶನ ತೀರ್ಪೆ ಊಳುವವನನ್ನೇ ಒಡೆಯನನ್ನಾಗಿಸುತ್ತದೆ. ಈ ಕತೆಯ ರಂಗಕಥೆ, ನಿರೂಪಣೆ ಎಲ್ಲವೂ ಒಂದೇ ತಾಸಿನ ಅವಧಿಯಲ್ಲಿ ಮುಗಿದರೂ ಕತೆ ಪ್ರೇಕ್ಷಕನನ್ನು ಹಿಡಿದಿಡುವುದು, ಅಲ್ಲಿಯ ಸಂಭಾಷಣೆ, ನಾಟಕದ ಪೂರಕ ಅಂಶಗಳ ಅಚ್ಚುಕಟ್ಟಾದ ಜೋಡಣೆ ಎಲ್ಲವೂ ನಾಟಕೀಯ ಎನಿಸದೆ ರಂಗಪ್ರಯೋಗವಾಗಿ ಯಶಸ್ವಿಯಾಗುವುದು ಶ್ರೀಪಾದ ಭಟ್, ಗಣಪತಿಹುಲಿಮನೆ ಇವರೊಂದಿಗಿನ ನಟರ ಸಹಕಾರದಿಂದ. ನಾಗಪತಿ ಹೆಗಡೆ, ಪ್ರವೀಣಾ ಮತ್ತು ಗಣಪತಿ ಗುಂಜಗೋಡು ಸೇರಿದ ಎಲ್ಲಾ ನಟರ ಅಭಿನಯ ನಾಟಕದ ಪರಿಣಾಮ ಹೆಚ್ಚಿಸಿದೆ.
https://www.youtube.com/channel/UCTvZUkLGbidUHKd8BHTMJbg/videos
ಪೂರ್ಣಚಂದ್ರ ಹೆಗಡೆ, ರಾಮ ಅಂಕೋಲೇಕರ್, ಜಯರಾಮಭಟ್ ಹೆಗ್ಗಾರಳ್ಳಿ ಎಲ್ಲರೂ ಅಭಿನಯದಿಂದ ಗಮನಸೆಳೆಯುವವರೇ ಈ ತಿರುಗಾಟದ ರಂಗಪ್ರಸಂಗ ವಿಭಿನ್ನ ಭಾಷೆ, ಪ್ರಾದೇಶಿಕ ವೈಶಿಷ್ಟ್ಯಗಳಿಂದ ಹೆಚ್ಚು ಆಪ್ತವೆನಿಸುವಂತಿದೆ.








