

ಕೊರೋನಾ ಮಹಾಸಂಕಷ್ಟದ ನಂತರ ರಾಜ್ಯದಲ್ಲಿ ಮುಚ್ಚಲಾಗಿದ್ದ ಶಾಲಾ, ಕಾಲೇಜ್ ಗಳನ್ನು ನಿಧಾನವಾಗಿ ಪುನರಾರಂಭಿಸಲಾಗುತ್ತಿದ್ದು, ಫೆಬ್ರವರಿ 1ರಿಂದ 9ನೇ ತರಗತಿ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ…

ಸಿದ್ದಾಪುರ,
ತಾಲೂಕು ಪತ್ರಕರ್ತರ ಸಂಘ ಕಂದಾಯ ಇಲಾಖೆಯ ಸಹಕಾರದೊಂದಿಗೆ ಗಣರಾಜ್ಯೋತ್ಸವದ ಪ್ರಯುಕ್ತ ಕಡಕೇರಿ ಶಾಲಾ ಮೈದಾನದಲ್ಲಿ ಮಂಗಳವಾರ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ನಡೆಯಿತು.
ತಹಸೀಲ್ದಾರ ಮಂಜುಳಾ ಎಸ್.ಭಜಂತ್ರಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ ಕ್ರೀಡೆಯಿಂದ ಮಾನಸಿಕ ನೆಮ್ಮದಿ ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ವರ್ಷದಲ್ಲಿ ಒಂದು ದಿನ ಈ ರೀತಿಯಾಗಿ ಎಲ್ಲರೂ ಒಂದಾಗಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವುದರಿಂದ ಹೆಚ್ಚು ಸಂತಸ ಪಡಬಹುದಾಗಿದೆ ಎಂದು ಹೇಳಿದರು.
ಎಸಿಎಫ್ ಅಜೀಜ್ ಶೇಖ್ ಮಾತನಾಡಿ ಇದೊಂದು ಮನರಂಜನೆ ಆಗಿದ್ದರೂ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬಹುದಾಗಿದೆ ಎಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ ಭಟ್ಟ ಅಧ್ಯಕ್ಷತೆವಹಿಸಿದ್ದರು. ಸಿಪಿಐ ಎನ್.ಮಹೇಶ್,ಬಿಇಒ ಸದಾನಂದ ಸ್ವಾಮಿ, ಬೇಡ್ಕಣಿ ಗ್ರಾಪಂ ಸದಸ್ಯ ಕೃಷ್ಣಮೂರ್ತಿ ಕಡಕೇರಿ,ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಆರ್.ಹೆಗಡೆ, ತಾಲೂಕು ಪತ್ರಕರ್ತರ ಸಂಘದ ಸದಸ್ಯರು ಉಪಸ್ಥಿತದ್ದರು.
ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಪೊಲೀಸ್ ತಂಡಕ್ಕೆ ಹಾಗೂ ದ್ವಿತೀಯ ಸ್ಥಾನ ಪಡೆದ ಶಿಕ್ಷಕರ ತಂಡಕ್ಕೆ ತಹಸೀಲ್ದಾರ ಮಂಜುಳಾ ಎಸ್.ಭಜಂತ್ರಿ ಬಹುಮಾನ ವಿತರಿಸಿ ಮಾತನಾಡಿದರು.
ಪಂದ್ಯಾವಳಿಯಲ್ಲಿ ಅರಣ್ಯ, ಕಂದಾಯ, ಪೊಲೀಸ್, ರಾಜ್ಯ ಸರ್ಕಾರಿ ನೌಕರರ,ಶಿಕ್ಷಕರ ಹಾಗೂ ಪತ್ರಕರ್ತರ ತಂಡಗಳು ಭಾಗವಹಿಸಿದ್ದವು. ನಿರ್ಣಾಯಕರಾಗಿ ಟಿ.ಬಿ.ಗೌಡ, ಶ್ರೀಪತಿ ಕಡಕೇರಿ ಕಾರ್ಯನಿರ್ವಹಿಸಿದ್ದರು.
ಪತ್ರಕರ್ತ ಸುರೇಶ ಕಡಕೇರಿ ಹಾಗೂ ರಮೇಶ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು.
ರಾಮಚಂದ್ರ ಹೆಗಡೆ- ನಿಧನ-
ಸಿದ್ದಾಪುರ: ತಾಲೂಕಿನ ನಾಣಿಕಟ್ಟಾ ಸಮೀಪದ ಕೆಳಗಿನಗೊರನಮನೆಯ ರಾಮಚಂದ್ರ ವೆಂಕಟ್ರಮಣ ಹೆಗಡೆ(74) ಇತ್ತೀಚೆಗೆ ನಿಧನಹೊಂದಿದರು.
ಅವರಿಗೆ ಪತ್ನಿ, ಪುತ್ರಿ ಹಾಗೂ ಅಪಾರ ಬಂಧು-ಬಳಗವಿದೆ. ಇವರು ಪ್ರಥಮ ಮಂಡಲ ಪಂಚಾಯಿತಿ ಸದಸ್ಯರಾಗಿ, ಕಲಗದ್ದೆ ಸಹಿಪ್ರಾ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
“ಶ್ರೀರಾಮ ಸಂಕೀರ್ತನ ರಥಯಾತ್ರೆ”
ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ತಾಲೂಕಾ ಸಮಿತಿ ಸಿದ್ದಾಪುರ ವತಿಯಿಂದ ದಿನಾಂಕ 29/01/2021 ರಂದು ಶುಕ್ರವಾರ ಸಂಜೆ 6 ಗಂಟೆಗೆ ಸರಿಯಾಗಿ ಶ್ರೀರಾಮ ರಥಯಾತ್ರೆಯನ್ನು ಶ್ರೀರಾಮ ನಾಮ ಸಂಕೀರ್ತನೆಯೊಂದಿಗೆ ಮೆರವಣಿಗೆ ನಡೆಸಲು ನಿಶ್ಚಯಿಸಲಾಗಿದೆ.
ಈ ರಥಯಾತ್ರೆಯ ಮೆರವಣಿಗೆಯು ಪಟ್ಟಣದ ಶ್ರೀ ಗಂಗಾಮಾತಾ ದೇವಾಲಯದಿಂದ ಹೊರಟು ತಿಮ್ಮಪ್ಪ ನಾಯಕ್ ವೃತ್ತದ ಮೂಲಕ ಬಸ್ ನಿಲ್ದಾಣ -ರಾಜಮಾರ್ಗ – ರಥಬೀದಿ ಮೂಲಕ ಸಾಗಿ ಬಸವೇಶ್ವರ ದೇವಸ್ಥಾನ, ಪಟ್ಟಣ ಪಂಚಾಯತ್ ವೃತ್ತದ ಮೂಲಕ ಭಗತ್ ಸಿಂಗ್ ಸರ್ಕಲ್ , ಅಂಬೇಡ್ಕರ ವೃತ್ತ, ರಾಮಕೃಷ್ಣ ಹೆಗಡೆ ವೃತ್ತದ ಮೂಲಕ ಶ್ರೀ ಗಂಗಾಮಾತಾ ದೇವಾಲಯಕ್ಕೆ ಬಂದು ಯಾತ್ರೆ ಸಂಪನ್ನಗೊಳ್ಳಲಿದೆ. ರಾಮಭಕ್ತರು ಈ ಕಾರ್ಯಕ್ರಮಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಪ.ಪಂ .ಸದಸ್ಯ ಗುರುರಾಜ್ ಶಾನಭಾಗ ಕೋರಿದ್ದಾರೆ.
ಕಂದಾಯ ಅದಾಲತ್-
ಸಿದ್ಧಾಪುರ, ತಹಸೀಲ್ದಾರ ಮಂಜುಳಾ ಭಜಂತ್ರಿ ತಾಲೂಕಿನ ಶಿರಗುಣಿಯಲ್ಲಿ ಕಂದಾಯ ಅದಾಲತ್ ನಡೆಸಿ ನಂತರ ಉಂಬಳಮನೆ ಹೋಬಳಿಯ ಕುಗ್ರಾಮಕ್ಕೆ(ನಿಲ್ಕುಂದ ಪಂಚಾಯತ ಹುತ್ಗಾರ ಗ್ರಾಮದ ಮರಾಠಿಕೊಪ್ಪ)ಭೇಟಿ ನೀಡಿ ಕುಂದು ಕೊರತೆಗಳನ್ನು ಆಲಸಿದರು. ಹಾಗೂ ಉಂಚಳ್ಳಿ ಗ್ರಾಮದ ಮಾಸ್ತಿಬೈಲ್ ಮಜರೆಯ ಪರಿಶಿಷ್ಟ ಜಾತಿ ಕಾಲೊನಿಗೆ ಭೇಟಿ ನೀಡಿ ಪಿಂಚಣಿಗೆ ಅರ್ಹ ಫಲಾನುಭವಿಗಳಿಗೆ ಅರ್ಜಿ ನೀಡಲು ಸೂಚಿಸಿ ಸ್ಥಳದಲ್ಲಿ ಹಾಜರಿದ್ದ ಉಪತಹಸೀಲ್ದಾರರವರಿಗೆಪಿಂಚಣಿ ಮಂಜೂರಿಸಲು ಸೂಚಿಸಿದರು.

ಬೆಂಗಳೂರು: ಕೊರೋನಾ ಮಹಾಸಂಕಷ್ಟದ ನಂತರ ರಾಜ್ಯದಲ್ಲಿ ಮುಚ್ಚಲಾಗಿದ್ದ ಶಾಲಾ, ಕಾಲೇಜ್ ಗಳನ್ನು ನಿಧಾನವಾಗಿ ಪುನರಾರಂಭಿಸಲಾಗುತ್ತಿದ್ದು, ಫೆಬ್ರವರಿ 1ರಿಂದ 9ನೇ ತರಗತಿ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ಆರಂಭಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗುರುವಾರ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಫೆಬ್ರವರಿ 1ರಿಂದ 9ನೇ ತರಗತಿ, ಪ್ರಥಮ ಪಿಯುಸಿ ತರಗತಿಗಳನ್ನು ಆರಂಭ ಮಾಡಲು ತೀರ್ಮಾನಿಸಿದ್ದು, 9, 10, 11 ಮತ್ತು 12ನೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಪುನರಾರಂಭವಾಗಲಿವೆ ಎಂದರು.

https://imasdk.googleapis.com/js/core/bridge3.436.0_debug_en.html#goog_1014427043
6 ರಿಂದ 8ನೇ ತರಗತಿಗಳನ್ನು ಆರಂಭಿಸುವ ಬಗ್ಗೆ ಸ್ವಲ್ಪ ದಿನ ಕಾದು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
1 ರಿಂದ 5ನೇ ತರಗತಿಗಳನ್ನು ಆರಂಭಿಸುವ ಬಗ್ಗೆ ಸದ್ಯಕ್ಕೆ ಯಾವುದೇ ತೀರ್ಮಾನವಿಲ್ಲ. ಉಳಿದ ತರಗತಿಗಳನ್ನು ಆರಂಭಿಸುವ ಬಗ್ಗೆ ಮುಂದೆ ನಿರ್ಧರಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. (kpc)



