

2020-21ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಪರೀಕ್ಷಾ ಮಂಡಳಿ ಗುರುವಾರ ಪ್ರಕಟಿಸಿದೆ.

ಬೆಂಗಳೂರು: 2020-21ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಪರೀಕ್ಷಾ ಮಂಡಳಿ ಗುರುವಾರ ಪ್ರಕಟಿಸಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಜೂನ್ 14ರಿಂದ ಜೂನ್ 25ರ ವರೆಗೆ ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.
ಜೂನ್ 14ರಂದು ಪ್ರಥಮ ಭಾಷೆ, ಜೂನ್ 16 ಗಣಿತ ಪರೀಕ್ಷೆ, ಜೂನ್ 18ರಂದು ಇಂಗ್ಲೀಷ್ ಹಾಗೂ ಕನ್ನಡ, ಜೂನ್ 21ರಂದು ವಿಜ್ಞಾನ, ಜೂನ್ 23ರಂದು ಹಿಂದಿ ಹಾಗೂ ಜೂನ್ 25ರಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಇದು ತಾತ್ಕಾಲಿಕ ವೇಳಾಪಟ್ಟಿ ಯಾಗಿದ್ದು ಆಕ್ಷೇಪ ಇದ್ದಲ್ಲಿ ಮನವಿ ಸಲ್ಲಿಕೆ ಮಾಡಬಹುದು ಎಂದು ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ. (kpc)
