

ಸಿದ್ಧಾಪುರ ತಾಲೂಕಿನ ಜೋಗ ಶಿರಸಿ ರಸ್ತೆಯ ಮೆಣಸಿ ಬಳಿ ಗುರುವಾರ ನಡೆದ ದ್ವಿಚಕ್ರವಾಹನ, ಕಾರ್ ಮುಖಾಮುಖಿ ಢಿಕ್ಕಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬಾ ತಾಲೂಕಿನ ಇಬ್ಬರು ತೀವೃವಾಗಿ ಗಾಯಗೊಂಡಿದ್ದು ಇವರಿಗೆ ಅಪಘಾತ ಮಾಡಿದ ಕಾರ್ ಜೊತೆ ಆರೋಪಿಗಳು ಪರಾರಿಯಾಗಿರುವುದಾಗಿ ಸುದ್ದಿಯಾಗಿದೆ.

ಇಂದು ಬಂದ ಸುದ್ದಿ- ನಿನ್ನೆ ಗುರುವಾರ ರಾತ್ರಿ 8 ರಿಂದ 9 ಗಂಟೆ ಅವಧಿಯಲ್ಲಿ ಮೆಣಸಿಯಲ್ಲಿ ನಡೆದ ಕಾರ್ ಬೈಕ್ ಅಪಘಾತದಲ್ಲಿ ಕೋಡಂಬಿಯ ಯುವಕರು ತೀವೃವಾಗಿ ಗಾಯಗೊಂಡರು. ಅವರನ್ನು ಉಪಚರಿಸದೆ ಕಾಲುಕಿತ್ತ ವಾಹನ ಮತ್ತು ವ್ಯಕ್ತಿಗಳು ಶಿರಸಿ ರಾಗಿಹೊಸಾಳಿ ಕಡೆಯವರೆಂದು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಬಗ್ಗೆ ಗುರುವಾರ ಸಿದ್ಧಾಪುರ ಠಾಣೆಯಲ್ಲಿ ಪೊಲೀಸ್ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಮನವಿ- ಮೃತ್ಯುಂಜಯ ನಾಯ್ಕ್ ಮತ್ತು ಮಹೇಶ್ ನಾಯ್ಕ್ , ಇವರುಗಳು ಕೋಡಂಬಿ(ಗ್ರಾಮ),ಸೊರಬ( ತಾ),ಶಿವಮೊಗ್ಗ(ಜಿ),ಊರಿನ ಕೂಲಿ ಕಾರ್ಮಿಕರಾಗಿದ್ದು,ದಿನಾಂಕ:28/01/2021 ರಂದು ಜೋಗ ರೋಡ್ ಮೆಣಸಿ ಕ್ರಾಸನಲ್ಲಿ ಇವರ ಸಂಬಂಧಿಗಳ ಮನೆಗೆ ಹೋಗುವಾಗ ಇವರ ಬೈಕ್ ಗೆ ರಾತ್ರಿ ಸಮಯದಲ್ಲಿ ಓಮಿನಿ ವಾಹನವು ಡಿಕ್ಕಿ ಹೊಡೆದು ಪರಾರಿಯಾಗಿದ್ದು ತೀವ್ರವಾಗಿ ಗಾಯಗೊಂಡ ಇವರನ್ನು ಸ್ಥಳೀಯರು ಹಾಗೂ ದಾರಿ ಹೋಕರು ಸೇರಿ ಸಿದ್ಧಾಪುರ ಆಸ್ಪತ್ರೆಗೆ ದಾಖಲಿಸಿರುತ್ತಾರೆ.
ಅಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಿಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ.ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಆಸ್ಪತ್ರೆಯ ಖರ್ಚಿಗೆ ದಯಮಾಡಿ ತಮ್ಮ ಕೈಲಾದ ಸಹಾಯ ಮಾಡಬೇಕಾಗಿ ಸಹೃದಯಿಗಳಲ್ಲಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.ಈ ಕೆಳಗೆ ನಮೂದಿಸಿರುವ Bank ಖಾತೆಯ ವಿವರ ಗಾಯಾಳು ಮೃತ್ಯುಂಜಯನ, ತಂದೆಯವರದಾಗಿದ್ದು.ಮತ್ತು ಇನ್ನೊಬ್ಬ ಗಾಯಾಳು ಮಹೇಶ್ ಇವರು(ಮಹಾಬಲೇಶ್ ರವರ ತಮ್ಮನಾಗಿರುತ್ತಾರೆ)ಈ ಖಾತೆಯ ವಿವರ ಈ ಕೆಳಗಿನಂತಿದೆ.Name: MAHABALESHWAR BEERAPPA KODAMBIAcc No-64193929783IFSC No- SBIN0040544Google pay ಮತ್ತು Phone Pay Number: 8762654530ಗಾಯಾಳುಗಳ ಸಂಬಂಧಿಯಾದ ಮತ್ತು ಆಸ್ಪತ್ರೆಯಲ್ಲಿ ಅವರ ಆರೈಕೆ ಮಾಡುತ್ತಿರುವ ಕೊಡಂಬಿ ಗ್ರಾಮದ ಪ್ರಭಾಕರ್.ಸಿ.ನಾಯ್ಕ್ ರವರ Google pay ಮತ್ತು Phone Pay Number: 8762654530ಗಾಯಾಳುವಿನ ತಂದೆಯವರ ಸಂಪರ್ಕ ಸಂಖ್ಯೆ:Mobile No:9480293571ಜಮಾ ಮಾಡಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ. (ಹೇಮಂತ್ ಹೇಮು-ಸೊರಬಾ ರ ವಾಲ್ ನಿಂದ)


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
