
ಕಾಳಿ ನದಿಯಲ್ಲಿ ನಡೆಸುವ ವಾಟರ್ ಸ್ಪೋರ್ಟ್ಸ್ ಗಳಲ್ಲಿ ಆಯೋಜಕರು ಮತ್ತು ಪ್ರವಾಸಿಗರು ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ

ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿಯಲ್ಲಿ ನಡೆಸುವ ವಾಟರ್ ಸ್ಪೋರ್ಟ್ಸ್ ಗಳಲ್ಲಿ ಆಯೋಜಕರು ಮತ್ತು ಪ್ರವಾಸಿಗರು ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ದಾಂಡೇಲಿಯ ಪ್ರವಾಸಿ ಸ್ಥಳದಲ್ಲಿ ಆಯೋಜಕರು ರಿವರ್ ರಾಪ್ಟಿಂಗ್ ನಡೆಸುವ ವೇಳೆ ಪ್ರವಾಸಿಗರಿಗೆ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿಲ್ಲ, ವಾರಾಂತ್ಯದಲ್ಲಿ ಸುಮಾರು 10 ಸಾವಿರ ಪ್ರವಾಸಿಗರು ಬರುತ್ತಾರೆ.
ಆದರೆ ಇಲ್ಲಿ ಆಯೋಜಕರು ಪ್ರವಾಸಿಗರಿಗೆ ಅಗತ್ಯವಾದ ಲೈಫ್ ಜಾಕೆಟ್ ಕೊಡುತ್ತಿಲ್ಲ, ಕಳೆದ ಭಾನುವಾರ, ಜನಸಂದಣಿಯ ತೆಪ್ಪದ ಚಿತ್ರದಲ್ಲಿ ಹಲವರು ಲೈಫ್ ಜಾಕೆಟ್ ಧರಿಸದಿರುವ ಫೋಟೋ ವೈರಲ್ ಆಗಿದೆ.
ಕಾಳಿ ನದಿ ಜಲಾನಯನ ಪ್ರದೇಶದ ಹೆಚ್ಚಿನ ಭಾಗವು ಕರ್ನಾಟಕ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುತ್ತದೆ, ಅನೇಕ ನಿರ್ವಾಹಕರು ಯಾವುದೇ ಪರಿಣಿತ ತರಬೇತುದಾರರಿಲ್ಲದೇ ಮತ್ತು ಅಪಘಾತದ ಸಂದರ್ಭದಲ್ಲಿ ಯಾವುದೇ ಬ್ಯಾಕ್-ಅಪ್ ಯೋಜನೆಯಿಲ್ಲದೆ ರಾಫ್ಟಿಂಗ್ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ.
ನಾಲ್ಕು ವರ್ಷದ ಹಿಂದೆ ರಿವರ್ ರ್ಯಾಪ್ಟಿಂಗ್ ನಲ್ಲಿ ಕೂರ್ಗ್ ನಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ. ಆಗಿನಿಂದ ಅಲ್ಲಿ ರಿವರ್ ರ್ಯಾಪ್ಟಿಂಗ್ ನಿಷೇಧಿಸಲಾಗಿದೆ ಎಂದು ಸ್ಪೋರ್ಟ್‌ಗಳಿಗಾಗಿ ಸರ್ಕಾರಿ ಟೆಂಡರ್ ತೆಗೆದುಕೊಂಡ ಟೂರ್ ಆಪರೇಟರ್ ಒಬ್ಬರು ತಿಳಿಸಿದ್ದಾರೆ.
ಅನೇಕ ಹೊಸ ನಿರ್ವಾಹಕರು ಸ್ಥಳೀಯ ಆಡಳಿತದಿಂದ ವಾಟರ್ ಸ್ಪೋರ್ಟ್ ಹೆಸರಿನಲ್ಲಿ ರಾಫ್ಟಿಂಗ್‌ಗೆ ಅನುಮತಿ ಪಡೆಯುತ್ತಿದ್ದಾರೆ. “ಆದರೆ ರಿವರ್ ರಾಫ್ಟಿಂಗ್ ಹೆಚ್ಚಿನ ಅಪಾಯದ ಜಲಾನಯನ ಪ್ರದೇಶವಾಗಿದೆ ಮತ್ತು ಪರಿಣತಿ ಮತ್ತು ತರಬೇತಿ ಪಡೆದ ಮಾನವಶಕ್ತಿಯ ಅಗತ್ಯವಿರುತ್ತದೆ, ಲೈಫ್ ಜಾಕೆಟ್ ಇಲ್ಲದೇ ಪ್ರವಾಸಿಗರನ್ನು ಕಳುಹಿಸುತ್ತಿರುವುದು ಅತಿ ಹೆಚ್ಚಿನ ಅಪಾಯವಾಗಿದೆ ಎಂದು ಮತ್ತೊಬ್ಬ ನಿರ್ವಾಹಕ ಹೇಳಿದ್ದಾರೆ.
ಅಧಿಕೃತ ಟೆಂಡರ್‌ಗಳೊಂದಿಗೆ ವಾಟರ್ ಸ್ಪೋರ್ಟ್ಸ್ ಗಳನ್ನು ನಡೆಸುವವರು ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಹಣವನ್ನು ಪಾವತಿಸುತ್ತಾರೆ. ಆದರೆ ಈಗ ನಡೆಸುತ್ತಿರುವ ಇಬ್ಬರು ಹೊಸ ಆಪರೇಟರ್ಸ್ ಸರ್ಕಾರಕ್ಕೆ ಹಣ ನೀಡುತ್ತಿಲ್ಲ, ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಲಾಗುತ್ತದೆ, ಆದರೆ ಸರ್ಕಾರವು ಅಂತಹ ಆಪರೇಟರ್ ಗಳಿಂದ ಏನನ್ನೂ ಪಡೆಯುವುದಿಲ್ಲ.
ಕಾಳಿ ನದಿಯಲ್ಲಿನ ಎಲ್ಲಾ ಜಲಾನಯನ ಪ್ರದೇಶಗಳ ಕ್ರೀಡೆಗಳನ್ನು ಸರ್ಕಾರ ಕಾನೂನುಬದ್ಧಗೊಳಿಸಬೇಕು ಮತ್ತು ಮನರಂಜನಾ ಪ್ರವಾಸಗಳು ದುರಂತಗಳಾಗಿ ಬದಲಾಗದಂತೆ ನೋಡಿಕೊಳ್ಳಲು ನಿಯಮಗಳನ್ನು ರೂಪಿಸಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ ಎಂದು ಗಣೇಶಗುಡಿ ಪ್ರವಾಸಿ ಸ್ಥಳದ ಮಾಲೀಕರೊಬ್ಬರು ಒತ್ತಾಯಿಸಿದ್ದಾರೆ. (kpc)
