

ಇಂದು ಮಧ್ಯಾನ್ಹ 12:05 ಗಂಟೆ ಸುಮಾರಿಗೆ ಶಿರಸಿ ಕಸ್ತೂರಬಾ ನಗರದ ಸಾಲುಮರದ ತಿಮ್ಮಕ್ಕ ಉದ್ಯಾನವನ ಪಕ್ಕದ ಖುಲ್ಲಾ ಜಾಗದಲ್ಲಿ ಗಾಂಜಾ ಮಾದಕ ವಸ್ತುವನ್ನು ಅಕ್ರಮವಾಗಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರೋಪಿತರಾದ 1) ಮಹ್ಮದ್ ಮೋಸಿನ್ ತಂದೆ ನಜೀರ್ ಅಹ್ಮದ್ ಶೇಖ್ ಕಸ್ತೂರ ಬಾ ನಗರ, ಶಿರಸಿ 2) ಮಂಜುನಾಥ @ ಮಿಂಟಾ ತಂದೆ ಮಾರುತಿ ಪೂಜಾರಿ ವಿದ್ಯಾನಗರ,ಶಿರಸಿ ಇಬ್ಬರು ಸಿಕ್ಕಿಬಿದ್ದಿದ್ದು ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ.

1) 266 ಗ್ರಾಂ ತೂಕದ ಗಾಂಜಾ ಅಂದಾಜು ಮೊತ್ತ 10000/- ರೂ
2) ,ಕೃತ್ಯಕ್ಕೆ ಬಳಸಲಾದ ಹೊಂಡಾ ಆಕ್ಟಿವ್ ಬೈಕ್ ಅಂದಾಜು ಮೊತ್ತ 25000/- ರೂ ಹಾಗೂ 3) ನಗದು ಹಣ 1000/-ರೂ 4) 2 ಮೊಬೈಲ್ ಫೊನ್ ಗಳನ್ನು ಮಾರುಕಟ್ಟೆ ಪೊಲೀಸರು ಜಪ್ತಿಪಡಿಸಿಕೊಂಡಿದ್ದು ಈ ಬಗ್ಗೆ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಶಿವಪ್ರಕಾಶ್ ದೇವರಾಜು ಪೊಲೀಸ್ ಅಧೀಕ್ಷಕರು ಉ.ಕ ಕಾರವಾರ,ಶ್ರೀ ಬದ್ರಿನಾಥ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉ.ಕ ಕಾರವಾರ,ಶ್ರೀರವಿ ಡಿ ನಾಯ್ಕ ಡಿ.ಎಸ್.ಪಿ ಶಿರಸಿ ಉಪವಿಭಾಗ, ಶ್ರೀ ಬಿ.ಯು ಪ್ರದೀಪ್ ವೃತ್ತ ನಿರೀಕ್ಷಕರು ಶಿರಸಿ ರವರ ಮಾರ್ಗದರ್ಶನದಲ್ಲಿ ಶಿರಸಿ ಹೊಸ ಮಾರುಕಟ್ಟೆ ಠಾಣೆಯ ಪಿ.ಎಸ್.ಐ ನಾಗಪ್ಪ ನೇತೃತ್ವದ ಪ್ರೋ ಪಿ.ಎಸ್.ಐ ರತ್ನಾ ಕುರಿ ಸಿಬ್ಬಂದಿಗಳಾದ ಪ್ರಶಾಂತ ಪವಾಸ್ಕರ್ ನಗರ ಠಾಣೆ , ಚಂದ್ರಪ್ಪ ಕೊರವರ ಬನವಾಸಿ ಠಾಣೆ,ಮೋಹನ ನಾಯ್ಕ, ರಾಮಯ್ಯ ಪೂಜಾರಿ ,ಹನುಮಂತ ಮಾಕಾಪುರ,ರವರನ್ನು ಒಳಗೊಂಡ ತಂಡ ಕಾರ್ಯಾಚರಣೆ ಕೈಗೊಂಡಿತ್ತು. ಮಾನ್ಯ ಪೊಲೀಸ್ ಅಧೀಕ್ಷಕ ಶಿವಪ್ರಕಾಶ ದೇವರಾಜುರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತಂಡಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.
ಅಡಿಕೆ ವಿಚಾರ-



ಇಂದು (29-01-2021) ಶಾಸಕರಾದ ಹೆಚ್.ಹಾಲಪ್ಪ ಅಧಿವೇಶನದಲ್ಲಿ ಪಾಲ್ಗೊಂಡು. ಮಾತನಾಡಿದ್ದು ಹೀಗೆ……
ಅಡಿಕೆಯನ್ನು ಡ್ರಗ್ಸ್ ಮತ್ತು ನಾರ್ಕೋಟಿಕ್ಸ್ ಗೆ ಸೇರಿಸಿರುವ ಬಗ್ಗೆ ವರದಿಯಾಗಿದೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.
ಕೊನೆ ಕೋಯ್ಲು ಸಮಯದಲ್ಲಿ ಇಂತಹ ಆತಂಕಕಾರಿ ವಿಷಯಗಳನ್ನು ಮಾಧ್ಯಮಗಳ ಮೂಲಕ ಹರಿಬಿಡುತ್ತಾರೆ. ಇದು ರೈತರಿಗೆ ತೊಂದರೆ ಕೊಡಲು ನೆಡೆಸಿದ ಹುನ್ನಾರ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಚರ್ಚಿಸಿದಾಗ.
ಸೂಕ್ತವಾಗಿ ಸ್ಪಂದಿಸಿದ ಗೃಹ ಸಚಿವರು, ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ, ಕೃಷಿ ಮಾರಾಟ ಮಂಡಳಿ ವೆಬ್ಸೈಟ್ ನಲ್ಲಿ ಆದ ತಪ್ಪನ್ನು ಸರಿ ಪಡಿಸಲು ಕ್ರಮ ಕೈಗೊಳ್ಳುವ ಬಗ್ಗೆ ಸದನದಲ್ಲಿ ತಿಳಿಸಿದರು.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
