

ರೈತರು ಬಡವರ ವಿರುದ್ಧ ಕಾರ್ಯಾಚರಿಸುತ್ತಿರುವ ಸರ್ಕಾರಗಳು ದಮನನೀತಿಯಿಂದ ಈ ದೇಶದ ಶ್ರಮಿಕ ಬಹುಸಂಖ್ಯಾತರನ್ನು ನಿಯಂತ್ರಿಸುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿರುವ ರಾಜ್ಯ ಸಿ.ಆಯ್.ಟಿ.ಯು. ಕಾರ್ಯದರ್ಶಿ ಯಮುನಾ ಗಾಂವ್ಕರ್ ಬಂಡವಾಳಶಾಹಿಗಳ ಪರವಾಗಿರುವ ಈಗಿನ ಸರ್ಕಾರ ಸರ್ಕಾರಿ ವ್ಯವಸ್ಥೆಯನ್ನೇ ಖಾಸಗಿಕರಿಸುವ ಅಪಾಯ ತಂದಿಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಗಾಂಧೀಜಿ ಹುತಾತ್ಮ ದಿನದ ಅಂಗವಾಗಿ, ಸಂಘರ್ಷ ಸಂಕಲ್ಪ ದಿನದಂದು ದೇಶವ್ಯಾಪಿ ರೈತ ಕಾರ್ಮಿಕರ ಆಂದೋಲನ ಯಶಸ್ಸಿಗಾಗಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಇಂದು ಸಿದ್ದಾಪುರದಲ್ಲಿ ಬಸ್ ನಿಲ್ದಾಣದ ಎದುರು ನಡೆದ ಧರಣ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ
ಯಮುನಾ ಗಾಂವ್ಕರ್, ದೇಶದ ಜನರ ಒಳಿತೇ ದೇಶದ ಒಳಿತು ಎಂದರು.
ಪ್ರತಿಭಟನಾ ಧರಣಿ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದ ಪತ್ರಕರ್ತ ಕನ್ನೇಶ್ ಕೋಲಶಿರ್ಸಿ ಜನವಿರೋಧಿ ಸರ್ಕಾರ, ಜನಪರವಲ್ಲದ ಕಾರ್ಯಕ್ರಮಗಳ ಮೂಲಕ ತನ್ನ ಗುಪ್ತ ಕಾರ್ಯಸೂಚಿ ಜಾರಿ ಮಾಡುತ್ತಿದೆ. ಇದರಿಂದಾಗಿ ಜನರ ಜೀವನ ಮತ್ತಷ್ಟು ಕಷ್ಟದಾಯಕವಾಗಲಿದೆ. ಈ ವ್ಯವಸ್ಥಿತ ಹುನ್ನಾರದ ವಿರುದ್ಧ ಜನ ಸಿಡಿದೇಳುತಿದ್ದು ರೈತರ ಪ್ರತಿಭಟನೆ ಇದರ ಒಂದು ಭಾಗ ಇಂಥ ಜನಹೋರಾಟಗಳಿಂದಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಉರುಳಿ ಜನಪರ ಸರ್ಕಾರ ಬರಲಿದೆ ಎಂದು ಆಶಿಸಿದರು.
ಕ.ರಾಜ್ಯ ರೈತ ಸಂಘ ಹಸಿರುಸೇನೆಯ ತಾಲೂಕಾ ಅಧ್ಯಕ್ಷ ವೀರಭದ್ರ ನಾಯ್ಕ ಕವಿ ವಿಠ್ಠಲ ನಾಯ್ಕ, ಅವರಗುಪ್ಪ, ಎಸ್.ಎಫ್.ಐ ನ ಸಾಕಿಬ್ ಗುರ್ಕಾರ್, ರೈತ ಸಂಘದ ಕೆರಿಯಪ್ಪ ನಾಯ್ಕ, ಈರಪ್ಪ ನಾಯ್ಕ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಚಂದ್ರಕಾಂತ ಶೇಟ್, ಮಳಲವಳ್ಳಿ, ಸುರೇಶ್ ನಾಯ್ಕ, ತೆಂಗಿನಮನೆ, ಕಲಾವಿದೆ ಅರ್ಚನಾ ಸಂಗಡಿಗರು ಹಾಜರಿದ್ದರು.
ಸಂಘಟಕರ ಪರವಾಗಿಜಾಗೃತಿಗಾಗಿ ಕರಪತ್ರ ವಿತರಿಸಲಾಯಿತು. ರೈತ ಕಾರ್ಮಿಕರ ಕ್ರಾಂತಿಗೀತೆ ಮತ್ತು ಕರಪತ್ರಗಳ ಮೂಲಕ ಜಾಗೃತಿಗೆ ಪ್ರಯತ್ನಿಸಲಾಯಿತು.


ಶಿರಸಿಯಲ್ಲಿ ಗಾಂಧಿ ಹುತಾತ್ಮದಿನದ ಅಂಗವಾಗಿ ಬಿಡಕಿಬೈಲಿನ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಜಿಲ್ಲಾ ಅರಣ್ಯ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರನಾಥ ನಾಯ್ಕ ಸಂಘಡಿಗರು ದೆಹಲಿಯಲ್ಲಿ ರೈತರ ಮೇಲಾದ ಹಲ್ಲೆ ಪ್ರಕರಣವನ್ನು ಸುಪ್ರಿಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
