

ಉತ್ತರ ಕನ್ನಡ ಪೊಲೀಸ್ ವಿಭಾಗ ಚುರುಕಾದಂತಿದೆ.ಉತ್ತಮ ಅಧಿಕಾರಿ ಎಸ್.ಪಿ.ಶಿವಪ್ರಕಾಶ ಮಾರ್ಗದರ್ಶನದಲ್ಲಿ ಎಲ್ಲಾ ಪೊಲೀಸ್ ಉಪ ವಿಭಾಗಗಳು ಚುರುಕಾದಂತಿವೆ. ಶಿರಸಿ ವಿಭಾಗದಲ್ಲಿ ನೂತನ ಉಪ ಪೊಲೀಸ್ ಜಿಲ್ಲಾ ವರಿಷ್ಠ ರವಿನಾಯ್ಕ ಭರವಸೆ ಮೂಡಿಸಿದ್ದಾರೆ. ಒಂದು ವಾರದ ಕೆಳಗೆ ಸಿದ್ಧಾಪುರ ವೃತ್ತ ನಿರೀಕ್ಷಕರಾಗಿ ಆಗಮಿಸಿರುವ ಮಹೇಶ್ ಎನ್. ಈ ಹಿಂದೆ ರಾಜ್ಯದ ಕಠಿಣ ಠಾಣೆಗಳಲ್ಲಿ ಕೆಲಸ ಮಾಡಿ ಅಪರಾಧ ಪತ್ತೆ ಮತ್ತು ನಿಯಂತ್ರಣದಲ್ಲಿ ಸಾಧನೆ ಮಾಡಿ ಹೆಸರು ಮಾಡಿದವರು.
ಸಿದ್ಧಾಪುರಕ್ಕೆ ಬರುತ್ತಲೇ ತಾವೊಬ್ಬ ಉತ್ತಮ ಕ್ರೀಡಾಪಟು ಎಂದು ಸಾಬೇತು ಮಾಡಿದ ಮಹೇಶ್ ಒಂದು ವಾರದ ಒಳಗೆ ಪ್ರಮುಖ ಮೂರು ಪ್ರಕರಣಗಳನ್ನು ಪತ್ತೆ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕಳೆದ ಒಂದೆರಡು ತಿಂಗಳಲ್ಲಿ ಸಿದ್ಧಾಪುರ ವ್ಯಾಪ್ತಿಯಲ್ಲಿ ನಡೆದ ಕಳ್ಳತನ,ದರೋಡೆ ಸೇರಿದ ಕೆಲವು ಪ್ರಕರಣಗಳನ್ನು ಭೇದಿಸಿರುವ ಮಹೇಶ್ ಎನ್. ನೇತೃತ್ವದ ಸಿದ್ಧಾಪುರ ಪೊಲೀಸ್ ತಂಡ ತೀರ್ಥಹಳ್ಳಿ ಮೂಲದ ಬ್ಯಾಂಕ್ ಒಂದರ ಕಳ್ಳತನ ಮಾಡಿ ಲಕ್ಷಾಂತರ ಲಪಟಾಯಿಸಿದ್ದ ಸ್ಥಳಿಯ ಕಳ್ಳರನ್ನು ಹಿಡಿದಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಾತಿ ಪ್ರಮಾಣಪತ್ರ ಅಪಹರಿಸಿದ್ದ ವ್ಯಕ್ತಿಯನ್ನು ಬಂಧಿಸಿದ್ಧಾರೆ. ಅಪಘಾತ ಮಾಡಿ ಹಿಟ್ &ರನ್ ಆರೋಪಿಯಾಗಿದ್ದ ಶಿರಸಿ ವ್ಯಕ್ತಿಯನ್ನು ಪತ್ತೆಮಾಡಿ ಬಂಧಿಸಿರುವುದು ಸೇರಿದಂತೆ ಕೆಲವು ಪ್ರಕರಣಗಳಿಂದ ಉತ್ತರ ಕನ್ನಡ ಪೊಲೀಸ್ ಮೇಲೆ ಭರವಸೆ ಇಡುವಂಥ ಕೆಲಸ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎನ್ನಲಾಗಿದೆ.


