

ಸ್ವಪಕ್ಷೀಯ ಸರ್ಕಾರದ ವಿರುದ್ಧ ಮುಲಾಜಿಲ್ಲದೇ ಟೀಕೆ ಮಾಡುವ ಸುಬ್ರಹ್ಮಣಿಯನ್ ಸ್ವಾಮಿ ಈಗ ಮತ್ತೊಮ್ಮೆ ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಬುಧವಾರ ಸೀತಾ ಸ್ವಯಂವರ- 2020-21 ರ ಒಡ್ಡೋಲಗ ರಂಗಪರ್ಯಟನ ರಂಗಪ್ರಸ್ತುತಿಯ ಸೀತಾಸ್ವಯಂವರ ಮೊದಲ ಪ್ರದರ್ಶನ ಫೆ,3 ರ ಬುಧವಾರಸಂಜೆ ಆರು ಗಂಟೆಗೆ ಸಿದ್ಧಾಪುರ ಶಂಕರಮಠ ಸಭಾಭವನದಲ್ಲಿ ನಡೆಯಲಿದೆ ಎಂದು ಒಡ್ಡೋಲಗ ಸಂಸ್ಥೆಯ ಅಧ್ಯಕ್ಷ ಗಣಪತಿ ಹೆಗಡೆ ಹಿತ್ತಲಕೈ ಹೇಳಿದರು. ಶಂಕರಮಠದಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ನಮ್ಮ ನಾಟಕ, ರಂಗಚಟುವಟಿಕೆಗಳಿಗೆ ಶಂಕರಮಠದ ವಿಜಯ ಹೆಗಡೆಯವರ ಸಹಕಾರ ಸಿಗುತ್ತಿದೆ. ಸ್ಥಳೀಯರೂ ಕಲಾವಿದರಾಗಿ, ಕಲಾಭಿಮಾನಿಗಳಾಗಿ ನಮ್ಮನ್ನು ಪ್ರೋತ್ಸಾಹಿಸುತಿದ್ದಾರೆ. ಈ ವರ್ಷದ ಸೀತಾ ಸ್ವಯಂವರ ಎಂ.ಎಲ್. ಶ್ರೀಕಂಠೇಶಗೌಡರ ರಚನೆಯಾಗಿದ್ದು ರಂಗಕರ್ಮಿ ಪ್ರಮೋದ್ ಶಿಗ್ಗಾಂ ಒಂದು ತಿಂಗಳ ಕಾಲ ಇಲ್ಲೇ ಉಳಿದು ಈ ನಾಟಕ ನಿರ್ಧೇಶಿಸಿ ನಮಗೆ ನೆರವಾಗಿದ್ದಾರೆ ಎಂದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಂಗಕರ್ಮಿ ಪ್ರಮೋದ್ ಶಿಗ್ಗಾಂ ಸಿದ್ಧಾಪುರದಲ್ಲಿ ರಂಗಾಸಕ್ತರು, ಪ್ರತಿಭಾವಂತ ಕಲಾವಿದರ ತಂಡಗಳಿದ್ದು ಇಲ್ಲಿಯ ಜನರ ಕಲಾಭಿರುಚಿ, ಆಸಕ್ತಿ,ಈ ಪರಿಸರದ ಮೋಹದಿಂದ ರಂಗಕ್ಷೇತ್ರದ ಆಸಕ್ತಿಯಿಂದ ಇಲ್ಲಿ ತೊಡಗಿಸಿಕೊಂಡಿದ್ದೇನೆ. ನನಗಂತೂ ರಂಗಭೂಮಿಯೇ ಬದುಕು ಎಂದರು. ಸಿದ್ಧಾಪುರದ ಎರಡು ರಂಗತಂಡಗಳು,ಎರಡು ಸಂಗೀತ ತಂಡಗಳು ಇಲ್ಲಿಯ ಹೆಮ್ಮೆ,ಇಂಥ ಕಲಾಸಕ್ತರು, ಸಂಗೀತ-ಸಾಂಸ್ಕೃತಿಕ ಪ್ರೇಮಿಗಳ ಜೊತೆಗಿರುವುದೇ ನಮಗೆ ಖುಷಿ ಎಂದು ವಿಜಯ ಹೆಗಡೆ ದೊಡ್ಮನೆ ಮತ್ತು ರಂಗಕರ್ಮಿ ಗುರುಮೂರ್ತಿ ವರದಾಮೂಲ ಹೇಳಿದರು.
ನವದೆಹಲಿ: ಸ್ವಪಕ್ಷೀಯ ಸರ್ಕಾರದ ವಿರುದ್ಧ ಮುಲಾಜಿಲ್ಲದೇ ಟೀಕೆ ಮಾಡುವ ಸುಬ್ರಹ್ಮಣಿಯನ್ ಸ್ವಾಮಿ ಈಗ ಮತ್ತೊಮ್ಮೆ ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಈ ಬಾರಿ ಪೆಟ್ರೋಲ್ ಬೆಲೆ ವಿಷಯಕ್ಕಾಗಿ ಕೇಂದ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಬ್ರಹ್ಮಣಿಯನ್ ಸ್ವಾಮಿ, ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಫೋಟೋ ವೈರಲ್ ಆಗತೊಡಗಿದೆ.

https://imasdk.googleapis.com/js/core/bridge3.437.0_debug_en.html#goog_1371170616
ಕೇಂದ್ರ ಬಜೆಟ್-2021 ಮಂಡನೆಯಾದ ಬಳಿಕ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಈ ಫೋಟೋ ಹಂಚಿಕೊಂಡಿರುವುದು ಮಹತ್ವ ಪಡೆದುಕೊಂಡಿದೆ.
ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಸ್ವಾಮಿ, ರಾಮನ ಭಾರತದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 93 ರೂಪಾಯಿಗಳಾಗಿದೆ. ಸೀತೆಯ ನೇಪಾಳದಲ್ಲಿ ಪ್ರತಿ ಲೀಟರ್ ಗೆ 53 ರೂಪಾಯಿಗಳಾಗಿದ್ದರೆ ರಾವಣನ ಲಂಕೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 51 ರೂಪಾಯಿಗಳು ಎಂದು ಬರೆದಿದ್ದು, ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸತತ 6ನೇ ದಿನ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗದೇ ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ದೆಹಲಿ ಹಾಗೂ ಮುಂಬೈ ಗಳಲ್ಲಿ ಪೆಟ್ರೋಲ್ ಬೆಲೆ ಅನುಕ್ರಮವಾಗಿ ಪ್ರತಿ ಲೀಟರ್ ಗೆ 86.30 ರೂಪಾಯಿ ಹಾಗೂ 92.86 ರೂಪಾಯಿಗಳಷ್ಟಾಗಿದೆ.
ಡೀಸೆಲ್ ಬೆಲೆ ರಾಷ್ಟ್ರ ರಾಜಧಾನಿಯಲ್ಲಿ 76.48 ರೂಪಾಯಿಗಳಿದ್ದರೆ ಮುಂಬೈ ನಲ್ಲಿ 83.30 ರೂಪಾಯಿಗಳಷ್ಟಾಗಿದೆ. ಇಂಧನದ ಮೇಲೆ ವಿಧಿಸಲಾಗಿರುವ ಕೃಷಿ ಸೆಸ್ ನಿಂದಾಗಿ ತೈಲ ಬೆಲೆ ಏರಿಕೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. (kpc)

