

ಬಿಜೆಪಿ ನಾಯಕರು ಅಯೋಧ್ಯೆ ಶ್ರೀರಾಮ ಮಂದಿರದ ಹೆಸರಲ್ಲಿ ದೇಣಿಗೆ ಸಂಗ್ರಹಿಸಿ, ಆ ಹಣದಲ್ಲಿ ಮದ್ಯ ಖರೀದಿ ಮಾಡಿ ಕುಡಿಯುತ್ತಿದ್ದಾರೆ ಎಂದು ಹೇಳುವ ಮೂಲಕ ಮಧ್ಯಪ್ರದೇಶದ ಜಬುವಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕಾಂತಿಲಾಲ್ ವಿವಾದ ಸೃಷ್ಟಿಸಿದ್ದಾರೆ.
” ಸನ್ಯಾಸಿಯೊಬ್ಬರ ಜನ್ಮದಿನವನ್ನು ಯುವ ದಿನವನ್ನಾಗಿ ಆಚರಿಸುವುದೇ ಸ್ವಾರಸ್ಯಕರವಾಗಿದೆ. ಯೌವ್ವನ ಎಂದರೆ ಶಕ್ತಿಯ ಅಪರಿಮಿತ ಪ್ರವಾಹ. ಆದರೆ ಸನ್ಯಾಸ ಎನ್ನುವುದು ಇದಕ್ಕೆ ತದ್ವಿರುದ್ಧ ಸ್ಥಿತಿ. ಶಕ್ತಿಯ ಎಲ್ಲ ಮೂಲಗಳನ್ನು ಸಂಯಮದಲ್ಲಿ ನಿಲ್ಲಿಸಿಕೊಳ್ಳುವ, ಸಾಧನ ಮಾರ್ಗವೇ ಸನ್ಯಾಸ ಎಂದು ವಿವೇಕಾನಂದರು ತಿಳಿದಿದ್ದರು. ಹಿಂದೂ ಧರ್ಮದ ಬಗ್ಗೆ ಹೆಮ್ಮೆಯನ್ನು ಹೊಂದಿದ್ದ ಇವರು ಧರ್ಮದ ಓರೆಕೋರೆಗಳನ್ನು, ಅಂಕುಡೊಂಕುಗಳನ್ನು ಎಂದಿಗೂ ಒಪ್ಪುವವರಲ್ಲ. ಅದನ್ನು ಅಷ್ಟೇ ಕಟುವಾಗಿ ಟೀಕಿಸಿದರು.
ಚಿಕ್ಕ ವಯಸ್ಸಿನಲ್ಲಿಯೇ ಭಾರತೀಯ ಮತ್ತು ಪಾಶ್ಚಿಮಾತ್ಯ ವಿದ್ವಾಂಸರ ಚಿಂತನೆಗಳಿಂದಲೂ ವಿವೇಕಾನಂದರು ಪ್ರಭಾವಿತರಾಗಿದ್ದರು.
ನಮಗೆ ಬೇಕಾದದ್ದು ಅನ್ಯ ಧರ್ಮ ಸಹಿಷ್ಣುತೆಯ ಗುಣವಲ್ಲ; ಸಕಲ ಧರ್ಮಗಳೂ ಒಂದೇ ಎಂಬ ಅರಿವು. ಮೌಢ್ಯ, ಕಂದಾಚಾರಗಳಿಲ್ಲದ ಎಲ್ಲಾ ಧರ್ಮವನ್ನು ಗೌರವಿಸುತ್ತಿದ್ದ ವಿವೇಕಾನಂದರು ನೀವಿರುವ ಧರ್ಮದಲ್ಲಿದ್ದೇ ಬದುಕಿನ ಔನ್ಯತ್ಯ ಸಾಧಿಸಬಹುದು ಎಂದರು.”ಎಂದು ಇಂಗ್ಲಿಷ್ ಪ್ರಾಧ್ಯಾಪಕರಾದ ಡಾ. ಎಂ ದೇವಾನಾಂಪ್ರಿಯ ಹೇಳಿದರು. ಅವರು ಇತ್ತೀಚೆಗೆ ಎಂಜಿಸಿ ಮತ್ತು ಜಿಎಚ್.ಡಿ ಮಹಾವಿದ್ಯಾಲಯದ ಸಿದ್ದಾಪುರದ ಎನ್.ಎಸ್.ಎಸ್ ಘಟಕ ಹಮ್ಮಿಕೊಂಡ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಈ ಸಭೆಯನ್ನು ಉದ್ದೇಶಿಸಿ ಉಪಪ್ರಾಚಾರ್ಯರಾದ ಡಾ. ಎಸ್.ಎಸ್. ಗುತ್ತಿಕರ್, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ. ವಿಠ್ಠಲ ಭಂಡಾರಿ ಮಾತನಾಡಿದರು. ಪ್ರಾಚಾರ್ಯರಾದ ಪ್ರೊ. ಜಯಂತಿ ಶಾನಭಾಗ್ ಅಧ್ಯಕ್ಷತೆಯ ವಹಿಸಿದ್ದರು. ಪ್ರೊ. ಬಸವಲಿಂಗಪ್ಪ ಅರವಳದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಉಷಾ ನಾಯ್ಕ ವಂದಿಸಿದರು. ಕುಮಾರ್ ನಾಗರಾಜ್ ಗೌಡರ್ ಕಾರ್ಯಕ್ರಮ ನಿರ್ವಹಿಸಿದರು.


ಭೋಪಾಲ್: ಬಿಜೆಪಿ ನಾಯಕರು ಅಯೋಧ್ಯೆ ಶ್ರೀರಾಮ ಮಂದಿರದ ಹೆಸರಲ್ಲಿ ದೇಣಿಗೆ ಸಂಗ್ರಹಿಸಿ, ಆ ಹಣದಲ್ಲಿ ಮದ್ಯ ಖರೀದಿ ಮಾಡಿ ಕುಡಿಯುತ್ತಿದ್ದಾರೆ ಎಂದು ಹೇಳುವ ಮೂಲಕ ಮಧ್ಯಪ್ರದೇಶದ ಜಬುವಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕಾಂತಿಲಾಲ್ ಭುರಿಯಾ ವಿವಾದ ಸೃಷ್ಟಿಸಿದ್ದಾರೆ.
ಬಿಜೆಪಿ ನಾಯಕರು ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಕೋಟಿ ಕೋಟಿ ರೂಪಾಯಿ ಸಂಗ್ರಹ ಮಾಡಿದ್ದಾರೆ. ಆ ಹಣವೆಲ್ಲ ಎಲ್ಲಿ ಹೋಯಿತು? ಈ ನಾಯಕರು ಬೇರೇನೂ ಮಾಡುತ್ತಿಲ್ಲ. ಬೆಳಗ್ಗೆಯೆಲ್ಲ ಹಣ ಸಂಗ್ರಹ ಮಾಡಿ, ಅಂದೇ ರಾತ್ರಿ ಮದ್ಯ ಸೇವನೆ ಮಾಡುತ್ತಿದ್ದಾರೆ. ಈ ಮೂಲಕ ಹಣವನ್ನು ಹಾಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.





https://imasdk.googleapis.com/js/core/bridge3.437.0_debug_en.html#goog_2115627333
ರಾಷ್ಟ್ರಾದ್ಯಂತ ಸುತ್ತುವರಿದು ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಮಾಡುವ ಜವಾಬ್ದಾರಿಯನ್ನು ಆರ್ಎಸ್ಎಸ್, ವಿಶ್ವ ಹಿಂದೂ ಪರಿಷತ್ ಸೇರಿ ಹಲವು ವಿಶ್ವಾಸಾರ್ಹ ಸಂಘಟನೆಗಳಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಹಿಸಿದೆ. ಇದೀಗ ಇವರ ಕೆಲಸದ ಬಗ್ಗೆ ಕಾಂಗ್ರೆಸ್ ಶಾಸಕ ಅನುಮಾನ ವ್ಯಕ್ತಪಡಿಸಿದ್ದಾರೆ. ಎಲ್ಲವನ್ನೂ ಮದ್ಯಕ್ಕಾಗಿಯೇ ಖಾಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಂದು ಸಂಗ್ರಹ ಮಾಡಿದ ಹಣವೆಲ್ಲ ಅಂದೇ ಶ್ರೀರಾಮ ಮಂದಿರದ ಬ್ಯಾಂಕ್ ಅಕೌಂಟ್‌ಗೆ ಹೋಗುತ್ತಿದೆ ಎಂದು ಸ್ಪೀಕರ್ ರಾಮೇಶ್ವರ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ. (kpc)
