ಅರಣ್ಯ ನಿರ್ವಹಣೆಗಾಗಿ ಈ ವರ್ಷ ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (ಕ್ಯಾಂಪಾ) ನಿಧಿಯಲ್ಲಿ ಮೊದಲ ಬಾರಿಗೆ ಕರ್ನಾಟಕ ಸರ್ಕಾರವು ಸಿಂಹ ಪಾಲು ಪಡೆದಿದೆ.
ಬೆಂಗಳೂರು: ಅರಣ್ಯ ನಿರ್ವಹಣೆಗಾಗಿ ಈ ವರ್ಷ ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (ಕ್ಯಾಂಪಾ) ನಿಧಿಯಲ್ಲಿ ಮೊದಲ ಬಾರಿಗೆ ಕರ್ನಾಟಕ ಸರ್ಕಾರವು ಸಿಂಹ ಪಾಲು ಪಡೆದಿದೆ.
ಮೊದಲ ಬಾರಿಗೆ 1,350 ಕೋಟಿ ರು. ಅನುದಾನ ದೊರೆತಿದ್ದು, ಅದನ್ನು ಬಳಸಲು ಇಲಾಖೆ ಗೊಂದಲದಲ್ಲಿ ಕುಳಿತಿದೆ. ಎಲ್ಲಾ ಹುಲಿ ಮೀಸಲು ಅರಣ್ಯ, ವನ್ಯಜೀವಿ ಅಭಯಾರಣ್ಯಗಳು ಮತ್ತು ಇತರ ಕಾಡುಗಳ ನಿರ್ವಹಣೆಗೆ ಅರಣ್ಯ ಇಲಾಖೆಯು ಪಡೆಯುವ ಮೊತ್ತಕ್ಕಿಂತ ಈ ವರ್ಷ ರಾಜ್ಯದ ಪಾಲು ಹೆಚ್ಚು ಅನುದಾನ ಸಿಕ್ಕಿದೆ.
ಸಾಮಾನ್ಯವಾಗಿ ರಾಜ್ಯಕ್ಕೆ ಸುಮಾರು 80-100 ಕೋಟಿ ರೂ. ಅನುದಾನ ಸಿಗುತ್ತಿತ್ತು. ಕಳೆದ ವರ್ಷ, ಅರಣ್ಯ ಇಲಾಖೆಯು ಅವರು ಕೈಗೊಳ್ಳಬೇಕಾದ ಕೆಲಸಗಳಿಗಾಗಿ 269 ಕೋಟಿ ರೂ. ನೀಡಲಾಗಿತ್ತು. ಈ ವರ್ಷ ಅರಣ್ಯ ಸಂರಕ್ಷಣೆಗಾಗಿ ಕೇಂದ್ರವು ಎಲ್ಲಾ ರಾಜ್ಯಗಳಿಗೆ ಒಟ್ಟು 48,000 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ.
ಈ ಮೊತ್ತವು ಅಪಾರವಾಗಿದ್ದು ಹಣವನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ಇಲಾಖೆ ಅಧಿಕಾರಿಗಳು ಗೊಂದಲಕ್ಕೊಳಗಾಗಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ, ಅರಣ್ಯ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಕ್ರಮ ಮಾಡುವ ಬದಲು, ಅರಣ್ಯ ಇಲಾಖೆಯು ಬುಡಕಟ್ಟು ಜನಾಂಗದವರ ಪುನರ್ವಸತಿಗಾಗಿ ಕೆಲಸ ಮಾಡಬೇಕು, ಏಕೆಂದರೆ ಅರಣ್ಯ ಸಂರಕ್ಷಣೆಗೆ ಸಿದ್ಧರಿದ್ದಾರೆ ಎಂದು ಇಲಾಖೆಯ ಕೆಲ ಅದಿಕಾರಿಗಳು ತಿಳಿಸಿದ್ದಾರೆ.
ಹಣವನ್ನು ಯಾವುದಕ್ಕೆ ಬಳಸಬೇಕು, ಯಾವ ಕೆಲಸಕ್ಕೆ ಬಳಸಬಾರದು ಎಂಬು ಬಗ್ಗೆ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸೂಕ್ತ ಸಮಯ ಎಂದು ತಿಳಿಸಿದ್ದಾರೆ. ಅರಣ್ಯ ಕಾವಲುಗಾರರಿಗೆ ಪಡಿತರ, ಬಟ್ಟೆ ಇತ್ಯಾದಿಗಳನ್ನು ಒದಗಿಸುವಂತಹ ಕೆಲಸಗಳನ್ನು 4-5 ಕೋಟಿ ರೂ. ಗಳಲ್ಲಿ ಮಾಬಡಬಹುದು, ಇದರ ಬದಲಿಗೆ ಅವರು ಅರಣ್ಯ ಕಾವಲುಗಾರರ ವೇತನವನ್ನು ಪಾವತಿಸುವ ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ.
ಕ್ಯಾಂಪಾ ನಿಧಿಯ ರಾಜ್ಯದ ಪಾಲನ್ನು ಒಂದೇ ಸಮಯದಲ್ಲಿ ಬಳಸಲಾಗುವುದಿಲ್ಲ. ಖರ್ಚು ಮಾಡುವ ಮೊದಲು ರಾಷ್ಟ್ರೀಯ ಕ್ಯಾಂಪಾ ಫಂಡ್ ಮಂಡಳಿಯ ಅನುಮೋದನೆ ಅಗತ್ಯವಿದೆ ಎಂದು ಕ್ಯಾಂಪಾದ ಹೆಚ್ಚುವರಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಪುನೀತ್ ಪಾಠಕ್ ಹೇಳಿದ್ದಾರೆ.
ಈ ಹಣವನ್ನು ಅರಣ್ಯೀಕರಣ, ವನ್ಯಜೀವಿ, ಸಂರಕ್ಷಣೆ ಮುಂತಾದವುಗಳಿಗೆ ಮಾತ್ರ ಬಳಸಬಹುದು, ಶಾಶ್ವತ ಸ್ಥಾಪನೆ ಯೋಜನೆಗಳಿಗಾಗಿ ಬಳಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. (kpc)