

ಗ್ರಾಮೀಣ ಜನರ ಅಗತ್ಯಗಳಿಗೆ ಸ್ಫಂದಿಸುತ್ತಿರುವ ನೆಲೆಮಾಂವ ಸೇವಾ ಸಹಕಾರಿ ಸಂಘ ನಿ. ಹೇರೂರು ಗ್ರಾಮೀಣ ಜನರ ಅಗತ್ಯದ ಎಂಬುಲನ್ಸ್ ಒದಗಿಸುವುದು ಸೇರಿದಂತೆ ಅನೇಕ ಜನಪರ ಕೆಲಸಗಳಿಗೆ ಮುಂದಾಗಿದ್ದು ಇದರ ಅಂಗವಾಗಿ ಶನಿವಾರ ಉಚಿತ ಆರೋಗ್ಯ ತಪಾಸಣೆ ಮತ್ತು ರವಿವಾರ ಗ್ರಾಮೀಣ ಸೂಪರ್ ಮಾರ್ಕೆಟ್ ಪ್ರಾರಂಭಿಸುತ್ತಿದೆ.
ಈ ಬಗ್ಗೆ ಕರೆದ ಮಾಧ್ಯಮಗೋಷ್ಠಿಯಲ್ಲಿ ಈ ವಿಚಾರಗಳನ್ನು ಪ್ರಕಟಿಸಿದ ಆಡಳಿತ ಮಂಡಳಿ ಹೇರೂರು ಭಾಗದ ಜನರಿಗೆ ಜಾತಿ-ಧರ್ಮ, ಬಡವ, ಶ್ರೀಮಂತ ಎನ್ನದೆ ಎಲ್ಲರಿಗೂ ಸೇವೆ ಸಲ್ಲಿಸುತ್ತಿರುವ ಈ ಸಂಘ ಈಗಾಗಲೇ 101 ವರ್ಷಗಳನ್ನು ಪೂರೈಸಿದೆ. ಮುಂದಿನ ದಿನಗಳಲ್ಲಿ ಜನರಿಗೆ ಅಗತ್ಯ ಸೇವೆ-ಸಹಕಾರ ನೀಡಲು ಯೋಜಿಸಿದೆ ಎಂದರು.




ಎನ್.ಎಸ್.ಎಸ್. ಸೂಪರ್ ಮಾರ್ಕೆಟ್ ಉದ್ಘಾಟನೆ... 07 ಫೆ,2021 ಬೆಳಿಗ್ಗೆ 10-30 ಕ್ಕೆ ಉದ್ಘಾಟಕರು-ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯ ಅತಿಥಿಗಳು- ಎಸ್.ಎಲ್. ಘೊಟ್ನೇಕರ್, ಅಧ್ಯಕ್ಷತೆ-ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್.
