

ಮಾರ್ಚ್ ತಿಂಗಳ 30 ರಿಂದ ಏಪ್ರಿಲ್ ಆರರ ವರೆಗೆ ಒಂದು ವಾರ ಕಾಲ ನಡೆಯುವ ಸಿದ್ಧಾಪುರ ಕೊಂಡ್ಲಿ ಮಾರಿಕಾಂಬಾ ಜಾತ್ರೆಗೆ ಸಕಲ ಸಿದ್ಧತೆಗಳಾಗಿದ್ದು ಕೋವಿಡ್ ನಿಯಮಾನುಸಾರವೇ ವಿಜೃಂಬಣೆಯಿಂದ ಈ ವರ್ಷದ ಮಾರಿಜಾತ್ರೆ ಮಾಡುವುದಾಗಿ ಕೊಂಡ್ಲಿ ಮಾರಿಕಾಂಬಾ ಜಾತ್ರಾ ಸ್ವಾಗತ ಸಮಿತಿ ಪ್ರಕಟಿಸಿದೆ.
ಇಂದು ಈ ಬಗ್ಗೆ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮಾರಿಕಾಂಬಾ ಜಾತ್ರಾ ಸಮೀತಿ ಮತ್ತು ದೇವಾಲಯದ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜಿಬೈಲ್ ಆಡಳಿತ ಸಮೀತಿ, ಚುನಾಯಿತ ಪ್ರತಿನಿಧಿಗಳು, ವಿಶೇಶ ಆಹ್ವಾನಿತರೆಲ್ಲಾ ಸೇರಿ ಒಟ್ಟೂ 25 ಜನರ ಜಾತ್ರಾ ಸ್ವಾಗತ ಸಮೀತಿ ರಚಿಸಿದ್ದು ಇದರಡಿ ಉಪಸಮೀತಿಗಳು ಕಾರ್ಯನಿರ್ವಹಿಸಲಿವೆ ಈ ತಿಂಗಳ ಕೊನೆಯ ಸರ್ಕಾರದ ಕೋವಿಡ್ ಮಾರ್ಗಸೂಚಿ ಆಧರಿಸಿ ಎಲ್ಲಾ ವ್ಯವಸ್ಥೆ,ವಿಜೃಂಬಣೆಯ ತಯಾರಿ ನಡೆಯಲಿದೆ ಎಂದರು.
ನಗರದ ಹೊಸೂರು ಕಂದಾಯ ಗ್ರಾಮ ಹೊರತುಪಡಿಸಿ ಮೂರು ಸಾವಿರ ಕುಟುಂಬಗಳಿಗೆ ತಲಾ ಒಂದು ಸಾವಿರ ದೇಣಿಗೆ ನಿಗದಿ ಮಾಡಿದ್ದು ಕಟ್ಟಡ ನಿರ್ಮಾಣ ಸಹಾಯಾರ್ಥ ನಿಧಿ ಸಂಗ್ರಹಕ್ಕೆ 14 ಜನರ ಬೇರೆ ಸಮೀತಿ ರಚಿಸಲಾಗಿದೆ ಎಂದು ವಿವರಿಸಿದರು.
ಮಾರ್ಚ್ 30 ರಿಂದ ಪ್ರಾರಂಭವಾಗುವ ಜಾತ್ರೆ 31 ರಂದು ಆರಂಭಿಕ ಶಾಸ್ತ್ರದಿಂದ ಅಧೀಕೃತವಾಗಿ ಶುರುವಾಗಿ ಏಫ್ರಿಲ್ ಆರರಂದು ಮುಕ್ತಾಯವಾದರೂ ಏ.7 ರ ಬೆಳಿಗ್ಗೆ ವಿಸರ್ಜನಾ ಪ್ರಕ್ರೀಯೆ ನಡೆಯಲಿದೆ. ಇದಕ್ಕೆ ಅಂಕೆ ಹಾಕುವ ಪದ್ಧತಿ ಮಾ.23 ರಂದು ನಡೆಯಲಿದ್ದು ಅಂದು ಮಾರಿಕೋಣ ಜಾತ್ರಾವ್ಯಾಪ್ತಿಯ ಜನರ ಮನೆಮನೆಗೆ ತೆರಳಲಿದೆ. -ಕೆ.ಜಿ.ಎನ್.


