ದಿ. ಜಯಾ ಯಾಜಿ ಶಿರಾಲಿ ಗೌರವಾರ್ಥ
ಕಥೆಗಾರ್ತಿಯರಿಗಾಗಿ ರಾಜ್ಯಮಟ್ಟದ ಕಥಾ ಸ್ಪರ್ಧೆ
ಕಾರವಾರ; ನಾಡಿಯ ಹಿರಿಯ ಕಥೆಗಾರ್ತಿ ದಿ. ಜಯಾ ಯಾಜಿ ಶಿರಾಲಿ ಅವರ ಗೌರವಾರ್ಥ ಕನ್ನಡದ ಕಥೆಗಾರ್ತಿಯರಿಗಾಗಿಯೇ ರಾಜ್ಯಮಟ್ಟದ ಕಥಾ ಸ್ಪಧೆಯನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದೆ ಎಂದು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೂ ಭಾಗವಹಿಸಲು ಅವಕಾಶವಿದ್ದು, ಈ ವಿಭಾಗದಲ್ಲಿ ಸ್ಪರ್ಧಿಸುವ ಆಸಕ್ತರು ಕಥೆಯೊಟ್ಟಿಗೆ ಕಾಲೇಜಿನ ಪ್ರಾಂಶುಪಾಲರಿಂದ ಪಡೆದ ವ್ಯಾಸಂಗ ಪ್ರಮಾಣ ಪತ್ರ ಲಗತ್ತಿಸುವುದು ಕಡ್ಡಾಯ.
ಕಥಾಸ್ಪರ್ಧೆಯಲ್ಲಿ ಮೊದಲ ಮೂರು ಬಹುಮಾನ ಕ್ರಮವಾಗಿ ರೂ. 6000, ರೂ.3000, ರೂ.2000, ಮೆಚ್ಚುಗೆ ಬಹುಮಾನ ಪಡೆದ ಈರ್ವರಿಗೆ ತಲಾ ರೂ. 1000 ಒಳಗೊಂಡಿರುತ್ತದೆ. ಉತ್ತಮ ಕಥೆ ಬರೆದ ಓರ್ವ ಕಾಲೇಜು ವಿದ್ಯಾರ್ಥಿನಿಗೆ ರೂ. 2000 ಬಹುಮಾನ ನೀಡಲಾಗುವುದು. ವಿಜೇತರಿಗೆಲ್ಲರಿಗೂ ಅಭಿನಂದನ ಪತ್ರ ನೀಡಲಾಗುವುದು.
ಕಥೆ 2500 ಶಬ್ದಗಳು ಮೀರಿರಬಾರದು. ಕಥೆ ಕಳಿಸುವ ಕೊನೆಯ ದಿನಾಂಕ. ಫೆ.23. ನಾಡಿನ ಹಿರಿಯ ಕಥೆಗಾರರು ಸ್ಪರ್ಧೆಯ ತೀರ್ಪುಗಾರರಾಗಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 9611650066 (ವಾಟ್ಸಾಪ್) ಸಂಪರ್ಕಿಸಬಹುದು.
ಕಥೆ ಕಳುಹಿಸಬೇಕಾದ ವಿಳಾಸ : ಅರವಿಂದ ಕರ್ಕಿಕೋಡಿ, ಅಧ್ಯಕ್ಷರು, ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ‘ಕನ್ನಡದ ಹಣತೆ’, ಜೆ.ಎಂ.ಎಫ್.ಸಿ. ಕೋರ್ಟ್ ಪಕ್ಕ, ಕೋರ್ಟ್ ರಸ್ತೆ, ಅಂಚೆ ಮತ್ತು ತಾಲ್ಲೂಕು : ಕುಮಟಾ ( ಉತ್ತರ ಕನ್ನಡ ಜಿಲ್ಲೆ)-581343. ನುಡಿ ತಂತ್ರಾಂಶದಲ್ಲಿ ಕಥೆ ಕಳುಹಿಸುವವರು : kannadadahanate56@gmail.com ಗೆ ಕಳುಹಿಸುವುದು
ವೈಜಾರಿ ಮಹಾಲೆ ನಿಧನ.
ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ನಿವಾಸಿ ವೈಜಾರಿ ವಿಶ್ವನಾಥ ಮಹಾಲೆ(98) ಸೋಮವಾರ ನಿಧನಹೊಂದಿದರು.
ಇವರು ಮೂಲತಃ ಹೊನ್ನಾವರ ತಾಲೂಕಿನ ಮಂಕಿಯವರಾಗಿದ್ದು ಹಲವು ವರ್ಷಗಳಿಂದ ಹಾರ್ಸಿಕಟ್ಟಾದ ಕೃಷ್ಣಾಬಾಯಿ ಶಾನಭಾಗ ಅವರ ಮನೆಯಲ್ಲಿ ವಾಸವಾಗಿದ್ದರು.