

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲ ದೇವಾಲಯಗಳು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಜಾತ್ರೆ, ಉತ್ಸವ, ವಿಶೇಷ ಪೂಜೆ, ಅನ್ನದಾಸೋಹ, ಪ್ರಸಾದ ವಿತರಣೆಗೆ ವಿಧಿಸಿದ್ದ ನಿರ್ಬಂಧಗಳನ್ನು ತೆರವುಗೊಳಿಸಿ ಧಾರ್ಮಿಕ ದತ್ತಿ ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ.

ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲ ದೇವಾಲಯಗಳು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಜಾತ್ರೆ, ಉತ್ಸವ, ವಿಶೇಷ ಪೂಜೆ, ಅನ್ನದಾಸೋಹ, ಪ್ರಸಾದ ವಿತರಣೆಗೆ ವಿಧಿಸಿದ್ದ ನಿರ್ಬಂಧಗಳನ್ನು ತೆರವುಗೊಳಿಸಿ ಧಾರ್ಮಿಕ ದತ್ತಿ ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ.
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿನ ಎಲ್ಲ ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಜಾತ್ರೆ ಮತ್ತು ರಥೋತ್ಸವ ಸೇರಿದಂತೆ ಎಲ್ಲ ಧಾರ್ಮಿಕ ಆಚರಣೆಗಳಿಗೆ ಮುಜರಾಯಿ ಇಲಾಖೆ ಅನುಮತಿ ನೀಡಿದ್ದು ಮುಂಜಾಗ್ರತಾ ಕ್ರಮ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ.
ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಮಂಗಳವಾರ ಹೊರಡಿಸಿರುವ ಆದೇಶದಂತೆ ಜಾತ್ರೆ, ಉತ್ಸವ, ಅನ್ನದಾಸೋಹ, ವಿಶೇಷ ಪೂಜೆ ಮತ್ತು ಪ್ರಸಾದ ವಿತರಣೆಯಂತಹ ಧಾರ್ಮಿಕ ಚಟುವಟಿಕೆಗಳಿಗೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ.
2020ರ ಮಾರ್ಚ್ ತಿಂಗಳಿನಿಂದಲೂ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ದೇವಾಲಯಗಳಲ್ಲಿ ಈ ಹಿಂದಿನಂತೆ ಸಂಪ್ರದಾಯಗಳಿಗೆ ಅನುಗುಣವಾಗಿ ಉತ್ಸವ ಮತ್ತು ಪೂಜಾ ಕೈಂಕರ್ಯಗಳು ನಡೆದಿಲ್ಲ.
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ, ರಾಜ್ಯ ಸರ್ಕಾರಗಳು, ಜಿಲ್ಲಾಧಿಕಾರಿಗಳು ಹೊರಡಿಸಿರುವ ಮತ್ತು ಹೊರಡಿಸಲಿರುವ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಈ ಎಲ್ಲ ಕಾರ್ಯಗಳನ್ನೂ ನಡೆಸಬೇಕು ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ. ಸೆಪ್ಟೆಂಬರ್ 1ರಂದು ಧಾರ್ಮಿಕ ಕೇಂದ್ರಗಳಲ್ಲಿ ಷರತ್ತು ಬದ್ಧ ಸೇವೆಗಳಿಗೆ ಅವಕಾಶ ನೀಡಲಾಗಿತ್ತು. (kpc)
training programme @ kavalkoppa-
ಸಿದ್ದಾಪುರ: ತಾಲೂಕಿನ ಕವಲಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್ ಡಿ ಎಮ್ ಸಿ ಯವರಿಗೆ ಒಂದು ದಿನದ ತರಭೇತಿ ಕಾರ್ಯ ಗಾರ ಇಂದು ನಡೆಯಿತು.
ಎಸ ಡಿ ಎಂ ಸಿ ಸದಸ್ಯೆ ಪಾವನ ರಾಘವೇಂದ್ರ ಹೆಗಡೆ ದೀಪ ಬೆಳಗಿಸುವ ಮೂಲಕ ತರಬೇತಿ ಗೆ ಚಾಲನೆ ನೀಡಿದರು
ಪ್ರಾಸ್ತಾ ವಿಕವಾಗಿ ಮುಖ್ಯೋಧ್ಯಾಪಕರಾದ ಮಂಗಲ ಆರ ಮಡಿವಾಳ ಮಾತನಾಡಿದರು . ಸಂಪನ್ಮೂಲ ವ್ಯಕ್ತಿ ಯಾಗಿ ಶಿಕ್ಷಕಿ ವೈಶಾಲಿ ಎಸ್ ಡಿ ಎಮ್ ಸಿ ಕುರಿತಾಗಿ ಮಾಹಿತಿ ನೀಡಿದರು
ಎಲ್ಲಾ ಸದಸ್ಯರುಗಳು ತರಬೇತಿ ಪಡೆದರು. ಮನರಂಜನೆ ಗಾಗಿ ಮ್ಯೂಸಿಕಲ್ ಚೇರ್, ಗುಂಡು ಎಸೆತ ದ ಸ್ಪರ್ಧೆ ಗಳನ್ನು ನಡೆಸಲಾಯಿತು.
ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ಪಾವನ ರಾಘವೇಂದ್ರ ಹೆಗಡೆ ಪ್ರಥಮ
ರೇಖಾ ಪ್ರಶಾಂತ್ ನಾಯ್ಕ್ ದ್ವಿತೀಯ ಅನಸೂಯಾ ಪ್ರಕಾಶ್ ನಾಯ್ಕ್ ತೃತೀಯ ಸ್ಥಾನ
ಗುಂಡು ಎಸೆತ ದಲ್ಲಿ ಚಂದ್ರಶೇಖರ ನಾಲಿ ಗಾ ರ್ ಪ್ರಥಮ ರೇಖಾ ಪ್ರಶಾಂತ್ ನಾಯ್ಕ್ ದ್ವಿತೀಯ ನಿರ್ಮಲ ಚಂದ್ರಶೇಖರ ತೃತೀಯ ಸ್ಥಾನ ಪಡೆದರು
ಎಸ್ ಡಿ ಎಮ್ ಸಿ ಯ ಸದಸ್ಯರುಗಳಾದ ರಾಜೇಶ್ವರಿ ಹೆಗಡೆ ಅನಸೂಯಾ ಪ್ರಕಾಶ ನಾಯ್ಕ್ ,ರೇಖಾ ಪ್ರಶಾಂತ್ ನಾಯ್ಕ್, ಉಪಸ್ಥಿತರಿದ್ದರು.
ಶಿಕ್ಷಕ ನಾಗರಾಜ ಟಿ ಸ್ವಾಗತಿಸಿದರು. ಶಿಕ್ಷಕಿ ನಮ್ರತಾ ಪೈ ವಂದಿಸಿದರು.
