ಎನ್.ಆಯ್. ನಾಯ್ಕರ ಸಾವು,ಗಣೇಶ್ ನಾಯ್ಕರ ನೋವು!

ಎನ್.ಐ.ನಾಯ್ಕ ಐನಕೈ ನಿಧನಕ್ಕೆ ಸಂತಾಪ
ಸಿದ್ದಾಪುರ 11- ಹಿರಿಯ ಸಾಮಾಜಿಕ ಕಾರ್ಯಕರ್ತ ಹಾಗೂ ಸಹಕಾರಿ ಧುರೀಣರಾಗಿದ್ದ ಎನ್. ಐ. ನಾಯ್ಕ ಐನಕೈ (ಕ್ಯಾದಗಿ) ನಿಧನದಿಂದ ಸಾಮಾಜಿಕ ಹಾಗೂ ಸಹಕಾರಿ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರೊಬ್ಬ ಸಾಮಾಜಿಕ ಕಳಕಳಿಯ ವ್ಯಕ್ತಿಯಾಗಿದ್ದರು ಎಂದು ಸಿದ್ದಾಪುರ ಟಿ.ಎಮ್.ಎಸ್. ಅಧ್ಯಕ್ಷ ಆರ್.ಎಮ್.ಹೆಗಡೆ ಬಾಳೇಸರ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭೀಮಣ್ಣ ಟಿ. ನಾಯ್ಕ, ಸಿದ್ದಾಪುರ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಕೆ.ಜಿ. ನಾಗರಾಜ, ಟಿ.ಎಂ.ಎಸ್. ಉಪಾಧ್ಯಕ್ಷ ಎಂ.ಜಿ ನಾಯ್ಕ ಹಾದ್ರಿಮನೆ ರವರು ತಮ್ಮ ಶೋಕವನ್ನು ವ್ಯಕ್ತಪಡಿಸಿದ್ದಾರೆ.

ಗಣೇಶ್ ನಾಯ್ಕರ ಧರಣಿ ಸತ್ಯಾಗ್ರಹದ ಮನವಿ-

ರಿಗೆ,
ಮಾನ್ಯ ತಹಶೀಲ್ದಾರ
ತಹಶೀಲ್ದಾರ ರವರ ಕಾರ್ಯಾಲಯ,
ಸಿದ್ದಾಪುರ (ಉ.ಕ.)

ಇಂದ,
ಕಾಲೇಜು ಹಿತರಕ್ಷಣಾ ಸಮಿತಿ ಮತ್ತು ಹಳೆ ವಿದ್ಯಾರ್ಥಿಗಳು,
ಪಾಲಕರು ಮತ್ತು ಜನಪ್ರತಿನಿಧಿಗಳು,
ಜ್ಞಾನಸಾಗರ ಕಲಾ ಮತ್ತು ವಾಣಿಜ್ಯ
ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯ,
ಬಿಳಗಿ, ಸಿದ್ದಾಪುರ (ಉ.ಕ.)

ಮಾನ್ಯರೇ,
ವಿಷಯ : ತಹಶೀಲ್ದಾರ ಕಾರ್ಯಾಲಯ ಸಿದ್ದಾಪುರದ ಎದುರು ಧರಣಿ ಸತ್ಯಾಗ್ರಹವನ್ನು ಕೈಗೊಳ್ಳುವ ಬಗ್ಗೆ.
ಸೂಚಿತ ವಿಷಯಕ್ಕೆ ಸಂಬಂಧಿಸಿರುವಂತೆ ಈ ಮೇಲಿನ ವಿಳಾಸದಾವರಾದ ನಾವು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಮ್ಮ ಜ್ಞಾನಸಾಗರ ಕಲಾ ಮತ್ತು ವಾಣಿಜ್ಯ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯ, ಬಿಳಗಿ, ಸಿದ್ದಾಪುರ (ಉ.ಕ.) ಇದರ ಆಡಳಿತ ಮಂಡಳಿಯಾದ ಚೌಡೇಶ್ವರಿ ಶಿಕ್ಷಣ ಸಂಸ್ಥೆ ಶಿರಿನಾಯಕನಕೊಪ್ಪ ಸೊರಬ ತಾಲೂಕು ಇವರಿಂದ ಮಹಾವಿದ್ಯಾಲಯ ಹಾಗೂ ಸಿಬ್ಬಂದಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಬಗ್ಗೆ ತಮಗೆ ಈಗಾಗಲೇ 05-11-2020 ಮತ್ತು 06-01-2021 ರಂದು ಎರಡು ತಿಂಗಳ ಹಿಂದೆ ನಮ್ಮ ಬೇಡಿಕೆಗಳನ್ನು ಸರಿಪಡಿಸಬೇಕೆಂದು ಸಂಬಂಧಪಟ್ಟ ವ್ಯಕ್ತಿಗಳನ್ನು, ಅಧಿಕಾರಿಗಳನ್ನು ಕರೆಯಿಸಿ ಸರಿಪಡಿಸುವ ಬಗ್ಗೆ ಮನವಿಯನ್ನು ಸಲ್ಲಿಸಲಾಗಿತ್ತು. ಆದರೆ ತಮ್ಮಿಂದ ಈ ಮನವಿಗೆ ಯಾವುದೇ ರೀತಿಯಿಂದಲೂ ನಮ್ಮ ಬೇಡಿಕೆಗಳು ಈಡೇರಿಲ್ಲ. ಹಾಗಾಗಿ ದಿನಾಂಕ : 17-02-2021 ಬುಧವಾರ ಬೆಳಿಗ್ಗೆ 10.30 ಕ್ಕೆ ತಹಶೀಲ್ದಾರ ಕಾರ್ಯಾಲಯ ಸಿದ್ದಾಪುರದ ಎದುರು ಅನ್ಯಾಯಕ್ಕೆ ಒಳಗಾಗಿರುವ ಉಪನ್ಯಾಸಕರೊಂದಿಗೆ ಧರಣಿ ಸತ್ಯಾಗ್ರಹವನ್ನು ಅನಿರ್ದಿಷ್ಟಾವಧಿಯವರೆಗೆ ಕೈಗೊಳ್ಳಲಾಗುವುದೆಂದು ತಮ್ಮ ಗಮನಕ್ಕೆ ತರಬಯಸುತ್ತೇವೆ.
ಧನ್ಯವಾದಗಳೊಂದಿಗೆ,
ಇಂತಿ ತಮ್ಮ ವಿಶ್ವಾಸಿ,
ದಿನಾಂಕ : 03-02-2021
ಸ್ಥಳ : ಸಿದ್ದಾಪುರ (ಉ.ಕ.)
(ಶ್ರೀ ವಿ. ಎನ್. ನಾಯ್ಕ)
ಅಧ್ಯಕ್ಷರು,
ಕಾಲೇಜು ಹಿತರಕ್ಷಣಾ ಸಮಿತಿ
ಬಿಳಗಿ, ಸಿದ್ದಾಪುರ (ಉ.ಕ.)

ರಿಗೆ,
ಮಾನ್ಯ ತಹಶೀಲ್ದಾರ
ತಹಶೀಲ್ದಾರ ರವರ ಕಾರ್ಯಾಲಯ,
ಸಿದ್ದಾಪುರ (ಉ.ಕ.)

ಇಂದ,
ಗಣೇಶ ಐ. ನಾಯ್ಕ,
ಕನ್ನಡ ಉಪನ್ಯಾಸಕರು,
ಜ್ಞಾನಸಾಗರ ಕಲಾ ಮತ್ತು ವಾಣಿಜ್ಯ
ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯ,
ಬಿಳಗಿ, ಸಿದ್ದಾಪುರ (ಉ.ಕ.)

ಮಾನ್ಯರೇ,
ವಿಷಯ : ತಮ್ಮ ಕಚೇರಿಯ ಎದುರು ಧರಣಿ ಸತ್ಯಾಗ್ರಹ ಕೈಗೊಳ್ಳುವ ಬಗ್ಗೆ.
ಸೂಚಿತ ವಿಷಯಕ್ಕೆ ಸಂಬಂಧಿಸಿರುವಂತೆ ಈ ಮೇಲಿನ ವಿಳಾಸದಾರನಾದ ನಾನು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಮ್ಮ ಜ್ಞಾನಸಾಗರ ಕಲಾ ಮತ್ತು ವಾಣಿಜ್ಯ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯ, ಬಿಳಗಿ, ಸಿದ್ದಾಪುರ (ಉ.ಕ.) ಇದರ ಆಡಳಿತ ಮಂಡಳಿಯಾದ ಚೌಡೇಶ್ವರಿ ಶಿಕ್ಷಣ ಸಂಸ್ಥೆ ಶಿರಿನಾಯಕನಕೊಪ್ಪ ಸೊರಬ ತಾಲೂಕು ಇವರಿಂದ ನನಗಾಗಿರುವ ಅನ್ಯಾಯವನ್ನು ಸರಿಪಡಿಸುವ ಬಗ್ಗೆ ತಮಗೆ ಈಗಾಗಲೇ 05-11-2020 ಮತ್ತು 06-01-2021 ರಂದು ಎರಡು ತಿಂಗಳ ಹಿಂದೆ ನಮ್ಮ ಈ ಕೆಳಕಂಡ ಬೇಡಿಕೆಗಳನ್ನು ಸರಿಪಡಿಸಬೇಕೆಂದು ಸಂಬಂಧಪಟ್ಟ ವ್ಯಕ್ತಿಗಳನ್ನು, ಅಧಿಕಾರಿಗಳನ್ನು ಕರೆಯಿಸಿ ಸರಿಪಡಿಸುವ ಬಗ್ಗೆ ಮನವಿಯನ್ನು ಸಲ್ಲಿಸಲಾಗಿತ್ತು. ಆದರೆ ತಮ್ಮಿಂದ ಈ ಮನವಿಗೆ ಯಾವುದೇ ರೀತಿಯಿಂದಲೂ ನಮ್ಮ ಬೇಡಿಕೆಗಳು ಈಡೇರಿಲ್ಲ. ಹಾಗಾಗಿ ನಾನು ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಬೇಕೆಂದು ಕೋರಿ ಧರಣಿ ಸತ್ಯಾಗ್ರಹವನ್ನು ಕೈಗೊಳ್ಳುತ್ತಿದ್ದೇನೆ.
1) ಸರಕಾರದಿಂದ ನೀಡುತ್ತಿರುವ ವೇತನವನ್ನು ಕಳೆದ ಮೂರು ವರ್ಷದಿಂದ ಆಡಳಿತ ಮಂಡಳಿ ನಿಲ್ಲಿಸಿರುವುದನ್ನು ಬಿಡುಗಡೆ ಮಾಡುವ ಬಗ್ಗೆ. (2018 ಆಗಸ್ಟ್ ರಿಂದ ಇಲ್ಲಿಯವರೆಗೆ)
2) ನನ್ನ ಮೇಲೆ ಸುಳ್ಳು ಕ್ರಿಮಿನಲ್ ಕೇಸನ್ನು ಹಿಂಪಡೆಯುವ ಬಗ್ಗೆ.
ಅವುಗಳೆಂದರೆ, 1) 1/2020 ಕ್ರಿಮಿನಲ್ 2) ಎಸ್ಸಿ.ಎಸ್.ಟಿ. 20/2020,
3) ದುರುದ್ದೇಶಪೂರ್ವಕವಾಗಿ ಕರ್ತವ್ಯದಿಂದ ವಜಾಗೊಳಿಸಿರುವುದನ್ನು ಮರು ನೇಮಕ ಮಾಡುವ ಬಗ್ಗೆ.
4) ಸರ್ವಾಧಿಕಾರಿ ಮನೋಭಾವನೆಯನ್ನು ಕಾಲೇಜಿನ ಸಿಬ್ಬಂದಿಯ ಮೇಲೆ ಆಡಳಿತ ಮಂಡಳಿ ಕೈಗೊಳ್ಳುತ್ತಿರುವ ಬಗ್ಗೆ.
5) ಮಹಾವಿದ್ಯಾಲಯಕ್ಕೆ 2001 ರಲ್ಲಿ ಬಂದು 1995 ರಲ್ಲಿ ಹಾಜರಾಗಿದ್ದಾರೆಂದು ಖೊಟ್ಟಿ ದಾಖಲಾತಿಗಳನ್ನು ಸೃಷ್ಟಿ ಮಾಡಿ ಸರಕಾರದಿಂದ ಉಪನ್ಯಾಸಕ ಹುದ್ದೆಗೆ ಮಾನ್ಯತೆ ಪಡೆದು ಸರಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡು ಸರಕಾರಕ್ಕೆ ಮೋಸ ಎಸಗಿರುವ ಇತಿಹಾಸ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಸ್ತುತ ಪ್ರಭಾರಿ ಪ್ರಾಂಶುಪಾಲರಾಗಿ ಕಾರ್ಯವನ್ನು ನಿರ್ವಹಿಸುತ್ತಿರುವ ಶ್ರೀ ಹನುಮಪ್ಪ ಬಿ. ಲಮಾಣಿ ಇವರ ನೇಮಕಾತಿಯ ಬಗ್ಗೆ ಸರಕಾರ ಮಟ್ಟದಲ್ಲಿ ಉನ್ನತ ತನಿಖೆಗೆ ಒಳಪಡಿಸುವ ಬಗ್ಗೆ.
..2…..
-2-
6) ಮಹಾವಿದ್ಯಾಲಯದಲ್ಲಿ ನಡೆಸಿರುವ ಭಾರೀ ಪ್ರಮಾಣದ ಹಣಕಾಸಿನ ಅವ್ಯವಹಾರವನ್ನು ಉನ್ನತಮಟ್ಟದ ತನಿಖೆಗೆ ಒಳಪಡಿಸುವ ಬಗ್ಗೆ.
7) ವಿದ್ಯಾಸಂಸ್ಥೆಯಲ್ಲಿ ಜಾತಿ ರಾಜಕಾರಣವನ್ನು ಮಾಡಿ ಉಪನ್ಯಾಸಕರಿಗೆ ಕಿರುಕುಳವನ್ನು ನೀಡುತ್ತಿರುವ ಅನ್ಯಾಯದ ಬಗ್ಗೆ.
ನನಗೆ ಮಾಡಿರುವ ಅನ್ಯಾಯದಿಂದ ನಾನು ತುಂಬಾ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುತ್ತೇನೆ. ಇದರಿಂದ ಜೀವನ ನಿರ್ವಹಣೆ ಕಷ್ಟದಾಯಕವಾಗಿದೆ. ವಿವಿಧ ಸಂಘ-ಸಂಸ್ಥೆಯಲ್ಲಿ ವೇತನವನ್ನು ಆಶ್ರಯಿಸಿ ಸಾಲ ಸೌಲಭ್ಯ ಪಡೆದುಕೊಂಡಿರುತ್ತೇನೆ. ಈಗ ನಾನು ಸಾಲವನ್ನು ಕಟ್ಟಲಾಗದೇ ಆರ್ಥಿಕ ಸಮಸ್ಯೆಯಿಂದ ನನ್ನ ಕುಟುಂಬ ನಿರ್ವಹಣೆ ಕಷ್ಟದಾಯಕವಾಗಿದೆ. ಹಾಗಾಗಿ ನನಗಾಗಲೀ, ನನ್ನ ಕುಟುಂಬಕ್ಕಾಗಲೀ ತೊಂದರೆಯಾದರೆ ತಾವು ಹಾಗೂ ಸಂಬಂಧಪಟ್ಟ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಕಾಲೇಜಿನ ಪ್ರಾಂಶುಪಾಲರು, ಅಧಿಕಾರಿಗಳು ಕಾರಣರಾಗುತ್ತೀರಿ. ಈ ಎಲ್ಲಾ ವಿಚಾರಗಳನ್ನು ತಮ್ಮ ಗಮನಕ್ಕೆ ತರಬಯಸುತ್ತಾ, ನನಗಾದ ಅನ್ಯಾಯಕ್ಕೆ ನ್ಯಾಯವನ್ನು ಒದಗಿಸಿಕೊಡಲು ವಿನಂತಿಸಿಕೊಳ್ಳುತ್ತೇನೆ. ಈ ದಿನಾಂಕದೊಳಗೆ ನ್ಯಾಯ ಸಿಕ್ಕಿಲವೆಂದಾದರೆ ನಾನು ದಿನಾಂಕ : 17-02-2021 ಬುಧವಾರ ಬೆಳಿಗ್ಗೆ 10.30 ಕ್ಕೆ ಕಾಲೇಜಿನ ಹಿತರಕ್ಷಣಾ ಸಮಿತಿ, ಹಳೆವಿದ್ಯಾರ್ಥಿಗಳು, ಪಾಲಕ-ಪೋಷಕರು, ಜನಪ್ರತಿನಿಧಿಗಳು, ಸ್ಥಳೀಯ ಸಂಘ-ಸಂಸ್ಥೆಗಳ ನೆರವಿನಿಂದ ತಹಶೀಲ್ದಾರ ಕಾರ್ಯಾಲಯ ಸಿದ್ದಾಪುರದ ಎದುರು ಧರಣಿ ಸತ್ಯಾಗ್ರಹವನ್ನು ಅನಿರ್ದಿಷ್ಟಾವಧಿಯವರೆಗೆ ಕೈಗೊಳ್ಳಲಾಗುವುದೆಂದು ತಮ್ಮ ಗಮನಕ್ಕೆ ತರಬಯಸುತ್ತೇನೆ.
ಧನ್ಯವಾದಗಳೊಂದಿಗೆ,
ಇಂತಿ ತಮ್ಮ ವಿಶ್ವಾಸಿ,
ದಿನಾಂಕ : 03-02-2021
ಸ್ಥಳ : ಸಿದ್ದಾಪುರ (ಉ.ಕ.)
(ಗಣೇಶ ಐ. ನಾಯ್ಕ)
ಪ್ರತಿಗಳನ್ನು ಗೌರವಪೂರ್ವಕವಾಗಿ :
1) ಮಾನ್ಯ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಸನ್ಮಾನ್ಯ ವಿಧಾನಸಭಾಧ್ಯಕ್ಷರು, ವಿಧಾನಸಭೆ, ಕರ್ನಾಟಕ ಸರಕಾರ, ಬೆಂಗಳೂರು.
2) ಮಾನ್ಯ ಶ್ರೀ ಶಿವರಾಮ ಹೆಬ್ಬಾರ, ಕಾರ್ಮಿಕ ಸಚಿವರು ಹಾಗೂ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರಕಾರ, ಬೆಂಗಳೂರು.
3) ಜಿಲ್ಲಾಧಿಕಾರಿಗಳು, ಕಾರವಾರ, ಉತ್ತರಕನ್ನಡ ಜಿಲ್ಲೆ.
4) ಉಪವಿಭಾಗಾಧಿಕಾರಿಗಳು, ಶಿರಸಿ, ಉತ್ತರಕನ್ನಡ ಜಿಲ್ಲೆ.
5) ಪೊಲೀಸ್ ವರಿಷ್ಠಾಧಿಕಾರಿಗಳು, ಕಾರವಾರ, ಉತ್ತರಕನ್ನಡ ಜಿಲ್ಲೆ.
6) ಪೊಲೀಸ್ ವೃತ್ತ ನಿರೀಕ್ಷಕರು, ಸಿದ್ದಾಪುರ, ಉತ್ತರಕನ್ನಡ ಜಿಲ್ಲೆ.
7) ನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು.
8) ಜಂಟಿ ನಿರ್ದೇಶಕರು, (ಮಾನ್ಯತೆ ಮತ್ತು ಅನುದಾನ) ಪದವಿಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು.
9) ಉಪನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ, ಕಾರವಾರ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *