

ದೆಹಲಿಯ ರೈತ ಹೋರಾಟದಲ್ಲಿ ಸಿದ್ದಾಪುರದ ಏಕೈಕ ಯುವ ಕೃಷಿಕ ಭಾಗಿಯಾಗಿ ಸುದ್ದಿಯಾಗಿದ್ದಾರೆ. ಹರಿಯಾಣ, ಪಂಜಾಬ್ ಗಡಿ ಭಾಗದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಸಿದ್ದಾಪುರದಿಂದ ಯುವ ಕೃಷಿಕ ಪಾಂಡುರಂಗ ಗಣಪತಿ ನಾಯ್ಕ ಹಳದೋಟ ,ಹೋಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಪಾಂಡುರಂಗ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ,ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಶಿರಸಿಯ ರಾಘು ನಾಯ್ಕ, ಕಲಕರಡಿಯ ಸಂತೋಷ್, ಮತ್ತು ಮೌಲಾಲಿ ಜೊತೆಗೂಡಿ ಗಾಜಿಯಾಬಾದ್, ಟಿಕ್ರಿ, ಸಿಂಘು ಬಾರ್ಡರ್ ಗಳಲ್ಲಿ ಫೆಬ್ರುವರಿ 4,5,6 ರಂದು ಪ್ರತಿಭಟನೆ ನಡೆಸಿ ವಾಪಸ್ ಊರಿಗೆ ಮರಳಿದ್ದಾರೆ.
ರೈತರ ಸಮಸ್ಯೆ,ರೈತ ಹೋರಾಟ ಯಾವುದೋ ಒಂದೆರಡು ರಾಜ್ಯಗಳ ಸಮಸ್ಯೆ ಅಲ್ಲ ದೇಶದ ಸಮಸ್ಯೆ ದೇಶದ ರೈತರು ಎಲ್ಲರೂ ಕೂಡಿ ಇದನ್ನು ಬೆಂಬಲಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಿಂದ ದೆಹಲಿಗೆ ಹೋಗಿ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಜಿಲ್ಲೆಯ 50 ಕ್ಕೂ ಹೆಚ್ಚು ಜನರಲ್ಲಿ ಪಾಂಡುರಂಗ ನಾಯ್ಕ ಒಬ್ಬರಾಗಿದ್ದು ಸಿದ್ಧಾಪುರದಿಂದ ತೆರಳಿದ ಏಕೈಕ ಕೃಷಿಕ ಇವರಾಗಿದ್ದಾರೆ.

