
ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವವರು ಹಣ ಕೊಟ್ಟವರ, ಕೊಡದವರ ಮನೆ ಗುರುತು ಮಾಡುತ್ತಿರುವ ಕ್ರಮ ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಿದ್ದಾಪುರ: ಕಾರವಾರಕ್ಕೆ ವರ್ಗಾವಣೆ ಯಾಗಿರುವ ತಹಸೀಲ್ದಾರ್ ಮಂಜುಳ ಭಜಂತ್ರಿಯವರಿಗೆ ತಾಲೂಕು ಆಡಳಿತದಿಂದ ಬೀಲ್ಕೊಡುಗೆ ಕಾರ್ಯಕ್ರಮ ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ನಂತರ ಮಾತನಾಡಿದ ಮಂಜುಳ ಭಜಂತ್ರಿ ಯಾವುದೇ ಕೆಲಸ, ಸಾಧನೆ ಒಬ್ಬರಿಂದ ಸಾಧ್ಯವಿಲ್ಲ. ನಿಮ್ಮೆಲ್ಲರ ಸಹಕಾರದಿಂದ ಸಾಧ್ಯವಾಗಿದೆ, ಒಳ್ಳೇ ಆಡಳಿತ ವ್ಯವಸ್ಥೆ ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಸ್ಪಂದನೆ ಯಿಂದ ಮಾತ್ರ ಸಾಧ್ಯ. ಯಾವುದೇ ಭೇದ ಭಾವ ತೋರದೆ, ಪ್ರಾಮಾಣಿಕ ವಾಗಿ ನಮ್ಮ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದರು.
ನೂತನ ತಹಶೀಲ್ದಾರ್ ಪ್ರಸಾದ್ ಎಸ್ ಎ ಮಾತನಾಡಿ ನಿಮ್ಮೆಲ್ಲರ ಸಹಕಾರವಿದ್ದರೆ ಕಾನೂನು ಭದ್ಧ ವಾದ ಕೆಲಸಗಳನ್ನು ಶ್ರೀಘ್ರವಾಗಿ ಮಾಡುತ್ತೇನೆ. ಕೆಲಸಕೋಸ್ಕರವೇ ನನ್ನ ಮೊದಲ ಆಧ್ಯತೆ ಎಂದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಗೌಡರ ಮಾತನಾಡಿ ಉತ್ತಮ ಅಧಿಕಾರ ಗಳನ್ನು ಬಹು ಬೇಗನೆ ಕಳೆದುಕೊಳ್ಳುತ್ತೇವೆ, ಭಜಂತ್ರಿ ಜನಸ್ನೇಹಿ ತಹಸೀಲ್ದಾರ ರಾಗಿದ್ದರೂ ಎಂದರು.
ಪಿಡಿಓ ಸುಬ್ರಹ್ಮಣ್ಯ ಹೆಗಡೆ, ಕ್ರಷಿ ಇಲಾಖೆಯ ಪ್ರಶಾಂತ್, ಪತ್ರಕರ್ತರಾದ ನಾಗರಾಜ ಭಟ್, ಕನ್ನೇಶ ಕೋಲಸಶಿರ್ಸಿ, ಕಂದಾಯ ಇಲಾಖೆಯ ಬಸವರಾಜ ಬಿಸನಾಳ,ಬಿಸಿಎಂ ಇಲಾಖೆಯ ಕೆಕೆಆರ್ ಗಣಪತಿ, ತೋಟಗಾರಿಕೆಯ ಮಾಬ್ಲೇಶ್ವರ ಹೆಗಡೆ, ಶಿರಸ್ತೇದಾರ ನಾಯ್ಕಡ್,ತಾಲೂಕು ಪಂಚಾಯತ್ ಅಧ್ಯಕ್ಷ ಸುಧೀರ್ ಗೌಡರ ಅನಿಸಿಕೆ ವ್ಯಕ್ತಪಡಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾವಣಾಧಿಕಾರಿ ಪ್ರಶಾಂತ ರಾವ್ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.
ಎನ್ ಐ ಗೌಡ ಕಾರ್ಯಕ್ರಮ ನಿರ್ವಹಿಸಿದರು. ನಾಯ್ಕಡ್ ಸ್ವಾಗತಿಸಿದರು. ಸುಧೀರ್ ವಂದಿಸಿದರು.


ಬೆಂಗಳೂರು: ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವವರು ಹಣ ಕೊಟ್ಟವರ, ಕೊಡದವರ ಮನೆ ಗುರುತು ಮಾಡುತ್ತಿರುವ ಕ್ರಮ ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜರ್ಮನಿಯಲ್ಲಿ ಸರ್ವಾಧಿಕಾರಿ ಹಿಟ್ಲರ್ ಕಾಲದಲ್ಲಿ ನಾಜಿ-ಯಹೂದಿಗಳ ಮಧ್ಯೆ ಗಲಾಟೆ ನಡೆದು ಲಕ್ಷಾಂತರ ಜನರ ಮಾರಣ ಹೋಮ ನಡೆಯಿತು. ನಮ್ಮ ದೇಶದಲ್ಲಿ ಆಗುತ್ತಿರುವ ಇಂದಿನ ವಿದ್ಯಮಾನ ಎಲ್ಲಿಗೆ ಹೋಗಿ ತಲುಪುತ್ತದೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ.
ಜರ್ಮನಿಯಲ್ಲಿ ನಾಜಿ ಹುಟ್ಟಿದ ಕಾಲದಲ್ಲೇ ಆರೆಸ್ಸೆಸ್ ಹುಟ್ಟಿದೆ ಎಂದು ಇತಿಹಾಸಜ್ಞರು ಹೇಳುತ್ತಾರೆ.ಆರೆಸ್ಸೆಸ್ ಕೂಡ ಆ ನೀತಿಗಳನ್ನೇ ಜಾರಿ ಮಾಡಿದರೆ ಮುಂದೇನಾಗುತ್ತದೆಂಬ ಆತಂಕವಿದೆ.ದೇಶದಲ್ಲಿ ಮೂಲಭೂತ ಹಕ್ಕನ್ನೆ ಕಸಿಯಲಾಗುತ್ತಿದೆ.ಸ್ವತಂತ್ರವಾಗಿ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲದ ಸ್ಥಿತಿ ಇದೆ.ಇದು ಅಘೋಷಿತ ತುರ್ತು ಪರಿಸ್ಥಿತಿ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಜನರು ತಮ್ಮ ಭಾವನೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಮಾಧ್ಯಮಗಳು ಸರ್ಕಾರದ ಭಾವನೆಗಳನ್ನು ಎತ್ತಿಹಿಡಿದರೆ ಯಾರಿಗೆ ಏನಾಗುತ್ತದೋ ಗೊತ್ತಿಲ್ಲ. ಜನಸಾಮಾನ್ಯರ ಪರಿಸ್ಥಿತಿಯೇನಾಗಬಹುದು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. (kpc)




