ಒಂದು ತಿಂಗಳೊಳಗೆ ನಿಲ್ಕುಂದ-ಸಂತೆಗುಳಿ ರಸ್ತೆ ಸಿದ್ಧ- ಭರವಸೆ

ಸಿದ್ದಾಪುರ: ಪುರಾತನ ಕಾಲದ ನಿಲ್ಕುಂದ ಹಾಗೂ ಸಂತೆಗುಳಿ ರಸ್ತೆಯ ತಾತ್ಪೂರ್ತಿಕ ರಸ್ತೆಯ ರಿಪೇರಿ ಕಾರ್ಯವನ್ನು ಮುಂದಿನ 8 ದಿನಗಳಲ್ಲಿ ಪ್ರಾರಂಭಿಸಿ ಹೆಚ್ಚುವರಿ ಕಾಮಗಾರಿಯನ್ನು ಸೇರಿಸಿ ಜನಸಾಮಾನ್ಯರಿಗೆ ಓಡಾಡಲು 30 ದಿನಗಳಲ್ಲಿ ಸಿದ್ಧಪಡಿಸಿ ಕೊಡಲಾಗುವುದೆಂದು ಲೋಕೊಪಯೋಗಿ ಅಧಿಕಾರಿ ಸಭೆಯಲ್ಲಿ ಘೋಷಿಸಿದರು.

ರಸ್ತೆಯ ಕಾಮಗಾರಿಗೆ ತುರ್ತು ಕಾರ್ಯಯೋಜನೆ ಮಾಡಲು ಅಗ್ರಹಿಸಿ ಇಂದು ನಿಲ್ಕುಂದದಿಂದ ಕುಮಟ ಗಡಿಯವರೆಗೆ 7 ಕೀ.ಮಿ ಪಾದಯಾತ್ರೆ ಪೂರ್ಣಗೊಂಡು  ಏರ್ಪಡಿಸಿದ ಸಭೆಯಲ್ಲಿ ಅಧಿಕಾರಿಗಳು ಈ ಭರವಸೆ ನೀಡಿದರು.

ಸಂಪೂರ್ಣ ಜೀರ್ಣಾವ್ಯವಸ್ಥೆ ಗಿಡಗಂಟಿಗಳು, ಮಧ್ಯದಲ್ಲಿ ಮಳೆಗಾಲದಲ್ಲಿ ರಸ್ತೆಯ ಮೇಲೆ ಉರುಳಿಬಿದ್ದ ಮರ ದಾಟುತ್ತಾ ಹಿರಿಯ ಕಂದಾಯ, ಫಾರೆಸ್ಟ, ಪೊಲೀಸ್, ಅರಣ್ಯ ಅಧಿಕಾರಿಗಳು ಹೋರಾಟಗಾರರ ಜೊತೆಯಲ್ಲಿ ಪಾದಯಾತ್ರೆಗೆ ಹೆಜ್ಜೆ ಹಾಕಿರುವುದು ವಿಶೇಷವಾಗಿತ್ತು 

ಅರಣ್ಯ ಅಧಿಕಾರಿಗಳಿಗೆ ಛಿಮಾರಿ:

ಸಾರ್ವಜನಿಕ ಹಿತಾಶಕ್ತಿಯ ರಸ್ತೆಯ ನಿರ್ವಹಣೆಯ ಹಿನ್ನೆಲೆಯಲ್ಲಿ ಪದೇ ಪದೇ ಅರಣ್ಯ ಸಿಬ್ಬಂದಿಗಳು ಹಸ್ತಕ್ಷೇಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಕುಮಟ ಮತ್ತು ಸಿದ್ಧಾಪುರ ವಿಭಾಗದ ಅರಣ್ಯ ಅಧಿಕಾರಿಗಳು ಉಪಸ್ಥಿತರಿರುವಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಮುಂಚಿತವಾಗಿ ಪತ್ರ ಬರೆಯಲಾಗಿದ್ದು ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಸಾಮೂಹಿಕವಾಗಿ ಛಿಮಾರಿ ಹಾಕಿದರು.

ಅಧಿಕಾರಿಗಳ ದಂಡು ಹಾಜರ್:

ಪ್ರತಿಷ್ಠೆಯ ಹೋರಾಟದ ಪಾದಯಾತ್ರೆಗೆ ಸಿದ್ಧಾಪುರ ಸಿಪಿಐ ಎನ್ ಮಹೇಶ,     ಶಿರಸಿ ಸಿಪಿಐ ಪ್ರಮೋದ, ಡೆಪ್ಯೂಟಿ ಆರ್‍ಎಫ್‍ಒ ಹರೀಣಾ ಗ್ರೀಷ್, ಸಿದ್ಧಾಪುರ  ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಮುದಕಣ್ಣನವರ್, ಅಸಿಟೆಂಟ್ ಇಂಜಿನಿಯರ್ ಶಿವಪ್ರಕಾಶ, ಕುಮಟ ಅಸಿಟೆಂಟ್ ಇಂಜಿನಿಯರ್ ಸೋಮನಾಥ ಭಂಡಾರಿ, ಕುಮಟ ಪಿಎಸ್‍ಐ ಆನಂದ ಮೂರ್ತಿ, ಪಿಎನ್ ಜರಮಲ್ ಉಪತಹಶಿಲ್ದಾರ್ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ನೇತ್ರತ್ವವನ್ನು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ  ವಹಿಸಿದ್ದು ತುಕಾರಾಮ ಗೌಡ ಹುಕ್ಕಳಿ, ಬೀರಾ ಗೌಡ, ರವೀಶ್ ಹುತ್‍ಗಾರ, ಮಂಜುನಾಥ ನಾಯ್ಕ, ಈಶ್ವರ ಮರಾಠಿ ಬೆಂಗಳೆ, ಕೃಷ್ಣ ಮರಾಠಿ, ಮಾದೇವ ನಾಯ್ಕ, ಹರೀಶ್ ನಾಯ್ಕ, ನಾಗಪತಿ ಗೌಡ ಮಾಜಿ ಎಪಿಎಮ್‍ಸಿ ಸದಸ್ಯರು ಮುಂತಾದವರು ಭಾಗವಹಿಸಿದ್ದರು.


related old news-

ಬ್ರಿಟಿಷ್ ಆಳ್ವಿಕೆ ಅವಧಿಯಲ್ಲಿ ಕರಾವಳಿ ಭಾಗದವರಿಗೆ ಘಟ್ಟದ ಮೇಲಿನ ತಾಲೂಕುಗಳಿಗೆ ಸಂಪರ್ಕ ರಸ್ತೆಯಾಗಿದ್ದು, ಸರಕಾರದ ತೀವ್ರ ನೀರ್ಲಕ್ಷ್ಯದಿಂದ 150 ವರ್ಷಕ್ಕಿಂತ ಹಳೆಯ ರಸ್ತೆ ಇಂದು ಅವಶೇಷದ ಕುರುಹುಗಳಾಗಿ ನಿಂತಿರುವುದು ವಿಷಾದಕರ.

ಶತಮಾನದ ಇತಿಹಾಸದ ರಸ್ತೆ ಪುನರ್ ಸ್ಥಾಪನೆಗೆ ಸ್ಥಳೀಕರು ಸಂಘಟನಾತ್ಮಕವಾಗಿ ಹೋರಾಟಕ್ಕೆ ಧುಮುಕಲು ನಿರ್ಧರಿಸಿರುವುದು ಸಾರ್ವಜನಿಕವಾಗಿ ಉತ್ತಮ ಪ್ರಕ್ರಿಯೇ ದೊರಕುತ್ತಿದೆ.

ಪಾದಯಾತ್ರೆ:

ಸರ್ವಋತು ರಸ್ತೆಗೆ ಅಗ್ರಹಿಸಿ ಫೆಬ್ರವರಿ 18 ಗುರುವಾರ ಮುಂಜಾನೆ 9:30 ಗಂಟೆಗೆ ನಿಲ್ಕುಂದದಿಂದ ಬೃಹತ್ ಪಾದಯಾತ್ರೆ ಪ್ರಾರಂಭವಾಗಿ ಕರ್ಮನಘಟಗಿಯಿಂದ 2 ಕೀ.ಮಿ ದೂರದಲ್ಲಿರುವ ಸಿದ್ಧಾಪುರ-ಕುಮಟ ಗಡಿಯಾದ ಪೆರಲಮಾರಿಯಲ್ಲಿಯವರೆಗೂ 7 ಕೀ.ಮಿ ಪಾದಯಾತ್ರೆಯೂ 11 ಗಂಟೆಗೆ ತಲುಪಿ ಸಭೆಯಾಗಿ ಪರಿವರ್ತನೆಗೊಳ್ಳುವುದು. ಸದ್ರಿ ಸಭೆಗೆ ಕಂದಾಯ, ಪೋಲಿಸ್, ಲೋಕಪಯೋಗಿ ಹಾಗೂ ಅರಣ್ಯ ಇಲಾಖೆಯವರಿಗೆ ಮುಂಚಿತವಾಗಿ ಸಭೆಯಲ್ಲಿ ಉಪಸ್ಥಿತರಿದ್ದು, ರಸ್ತೆ ದುರಸ್ಥಿಗೆ ಮತ್ತು ವಿಳಂಬಕ್ಕೆ  ಕಾರಣದ ಸ್ಪಷ್ಪೀಕರಣ ನೀಡಬೆಕೆಂದು ಸಂಘಟಿಕರು ಜಿಲ್ಲಾಧಿಕಾರಿಗಳಿಗೆ ಇಗಾಗಲೇ ಮನವಿ ನೀಡಿದ್ದಾರೆ. 

ಹಗಲು-ರಾತ್ರಿ ಧರಣಿಗೆ ನಿರ್ಧಾರ:

ಪಾದಯಾತ್ರೆ ಮುಗಿದ ನಂತರ ಕುಮಟ-ಸಿದ್ಧಾಪುರ ಗಡಿಯಲ್ಲಿ ಸಂಬಂಧಿಸಿದ ರಸ್ತೆಯ ಕುರಿತು ಪರಿಶಿಲಿಸದೇ ಸೂಕ್ತ ಮಾಹಿತಿ ಮತ್ತು ದಾಖಲೆ ಕೊಡುವಲ್ಲಿ ಗೈರಾದಲ್ಲಿ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ನಿರಂತರ ಹಗಲು-ರಾತ್ರಿ ನೂರಾರು ಕಾರ್ಯಕರ್ತರ ಧರಣಿ ಸ್ಥಳಿದಲ್ಲಿಯೇ ಜರುಗಿಸಲಾಗುವುದು ಎಂದು ಸಂಘಟಿಕರು ತಿರ್ಮಾನಿಸಿದ್ದಾರೆ. ಅಲ್ಲದೇ ಈ ಸಂದರ್ಭದಲ್ಲಿ ಹೋರಾಟಗಾರರ ಪ್ರಾಣಕ್ಕೆ ತೊಂದರೆ ಉಂಟಾದಲ್ಲಿ ಸಂಬಂಧಿಸಿದ ಇಲಾಖೆಯು ಜವಾಬ್ದಾರಿಯಾಗುವುದು ಎಂದು ಸಂಘಟಿಕರು ಎಚ್ಚರಿಸಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *