

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳ ಜಾಮೀನು ಅರ್ಜಿ ವಾಜಾಗೊಳಿಸಲಾಗಿದೆ.

ಆಧಾರ್ ಕಾರ್ಡ್-ಮನವಿ- ಸಿದ್ದಾಪುರ ತಾಲೂಕಿನಲ್ಲಿ ಆಧಾರ ತಿದ್ದುಪಡಿ ಮಾಡಿಸಲು ಸಾರ್ವನಿಕರಿಗೆ ಆಗುತ್ತಿರುವ ಸಮಸ್ಯೆ ಸರಿಪಡಿಸುವ ಕುರಿತು ಸಿದ್ದಾಪುರ ಮಂಡಲದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್ ಕೆ ಮಸ್ತ ಹಾಗೂ ನಾಲ್ಕು ಜನರು ಜಿಲ್ಲಾಧಿಕಾರಿಗಳಿಗೆ ಸಂಭೋದಿಸಿದ ಮನವಿಯನ್ನು ತಸಿಲ್ದಾರ್ ಸಿದ್ದಾಪುರ್ ಅವರಿಗೆ ನೀಡಿದರು.
ಮನವಿಯ ಸಾರಾಂಶ
🔷 ಪ್ರಸ್ತುತ ಆಧಾರ್ ಸೇವಾ ಕೇಂದ್ರಗಳಲ್ಲಿ ಕೇವಲ 15 ಜನರಿಗೆ ಆಧಾರ್ ಕಾರ್ಡ್ ತಿದ್ದುಪಡಿ ಮಾಡುತ್ತಿದ್ದು ಈ ಸಂಖ್ಯೆ ಕನಿಷ್ಠ 30 ಕ್ಕೆ ಹೆಚ್ಚಿಸಬೇಕು
🔷 ಪ್ರತಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಆಧಾರ್ ಸೇವಾ ಕೇಂದ್ರವನ್ನು ತೆರೆಯುವುದು
🔷 ಪ್ರತಿ ತಿಂಗಳು ಕೆಲವು ದಿನಗಳು ಆಯ್ದ ಸ್ಥಳದಲ್ಲಿ ಆಧಾರ್ ಕ್ಯಾಂಪ್ ನಡೆಸುವುದು
ಜಿಲ್ಲಾಧಿಕಾರಿಗಳಿಗೆ ಸಂಭೋಧಿಸಿದ ಮನವಿಯನ್ನು ತಹಸಿಲ್ದಾರ್ ಅನುಪಸ್ಥಿತಿಯಲ್ಲಿ ಕಚೇರಿಯಲ್ಲಿ ಹಾಜರಿದ್ದ ಶಿರಸ್ತೇದಾರ್ ಶ್ರೀಮತಿ ಸಂಗೀತ ಭಟ್ ರವರಿಗೆ ನೀಡಲಾಗಿದೆ.

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳ ಜಾಮೀನು ಅರ್ಜಿ ವಾಜಾಗೊಳಿಸಲಾಗಿದೆ.
ಹತ್ಯೆ ಪ್ರಕರಣದ ಐದು ಮಂದಿ ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿ ನಗರದ 1ನೇ ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ.
ಅಮಿತ್ ದಿಗ್ವೇಕರ್, ಸುರೇಶ್ ಎಚ್., ರಾಜೇಶ್ ಡಿ. ಬಂಗೇರ, ಸುರೇಶ್ ಹಾಗೂ ಸುಧನ್ವ ಎಂಬ ಆರೋಪಿಗಳ ಜಾಮೀನು ಅರ್ಜಿ ವಜಾ ಆಗಿದೆ.
ಸೆಪ್ಟೆಂಬರ್ 5, 2017ರಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ವರ ಹತ್ಯೆ ನಡೆದಿತ್ತು. ಅವರ ಮನೆ ಮುಂದೆ ನಿಂತಿದ್ದಾಗಲೇ ದ್ವಿಚಕ್ರ ವಾಹನದಲ್ಲಿ ಬಂದಿದ್ದ ದುಷ್ಕರ್ಮಿಗಳು ಗುಂಡು ಹಾರಿಸಿ ಗೌರಿ ಅವರನ್ನು ಹತ್ಯೆ ಮಾಡಿದ್ದರು. (kpc)




