ಇಂದಿನ ವಿಶೇಶ ಕಾರ್ಯಕ್ರಮಗಳು-ಮೀಸಲಾತಿ ವಿರೋಧಿಸಿದ್ದ ಸಮುದಾಯಗಳಿಂದ ಮೀಸಲಾತಿಗಾಗಿ ಹೋರಾಟ ವಿಪರ್ಯಾಸ

: ಭವಿಷ್ಯದಲ್ಲಿ ಸಂವಿಧಾನ ಬಿಕ್ಕಟ್ಟು ಸೃಷ್ಟಿಗೆ ನಾಂದಿ ದಲಿತ ಸಮುದಾಯಗಳಿಗೆ ಮೀಸಲಾತಿ ನೀಡುವುದನ್ನು ವಿರೋಧಿಸುತ್ತಿದ್ದ ಸಮುದಾಯಗಳೆಲ್ಲಾ ಇದೀಗ ತಮ್ಮ ಜಾತಿ, ಜನಾಂಗಗಳಿಗೂ ಮೀಸಲಾತಿ ಒದಗಿಸಬೇಕೆಂದು ಪೈಪೋಟಿಗೆ ಬಿದ್ದಿದ್ದು,…


ಇಂದು ದಿನಾಂಕ 20-02-2021 ರಂದು ಸ್ಥಳೀಯ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ರವರು
🔷 10;30 ಗಂಟೆಗೆ ನಿಡಗೋಡು ಉಪವಲಯ ಅರಣ್ಯಾಧಿಕಾರಿಗಳ ವಸತಿ ಗೃ ಹದ ಉದ್ಘಾಟನೆ ಮಾಡಿದರು ಈ ವೇಳೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸುಮಾರು 50-60 ಜನ ಹಾಜರಿದ್ದರು
🔷11:00 ಗಂಟೆಗೆ ನಿಡಗೋಡು ಸಾಂದ್ರ ಶೀತಲೀಕರಣ ಘಟಕದ ಉದ್ಘಾಟನೆ ಮಾಡಿ ಮಾತನಾಡಿ
ಉತ್ತರ ಕನ್ನಡ ಜಿಲ್ಲೆಯ ಹಾಲು ಒಕ್ಕೂಟ ರಚನೆಯಾಗಬೇಕು
🔷 ಗೋಹತ್ಯ ನಿಷೇದ ಕಾಯ್ದೆ ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿ ಯಾಗುತ್ತಿರುವುದು ಹೆಮ್ಮೆಯ ವಿಷಯ
🔷ಸರ್ಕಾರ ಪ್ರತಿ ಲೀಟರ್ ಹಾಲಿಗೆ ಐದು ರೂಪಾಯಿ ಪ್ರೋತ್ಸಾಹ ಧನ ನೀಡುತ್ತಿದೆ
ಹೈನುಗಾರಿಕೆ ಲಾಭದಾಯ ಕವಾಗಿದ್ದು ಹೆಚ್ಚಿನ ಜನರು ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದರು.
🔷 11:30 ಗಂಟೆ ಇಂದ12-45 ಗಂಟೆವರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ
🔷2006ರ ಪೂರ್ವದಲ್ಲಿ ಗಂಡು ಮತ್ತು ಹೆಣ್ಣಿನ ಅನುಪಾತದಲ್ಲಿ ಸಮಸ್ಯೆ ಇತ್ತು. ಈ ಅನುಪಾತ ಸರಿ ಮಾಡುವ ನಿಟ್ಟಿನಲ್ಲಿ ಹೆಣ್ಣು ಮಗು ಹುಟ್ಟಿದರೆ ಅವರನ್ನು ಪ್ರೋತ್ಸಾಹಿಸಲು 2006ರಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ಬಂದಿದೆ
🔷ಈ 14 ವರ್ಷದಲ್ಲಿ ಹೆಣ್ಣು ಮಗುವಿನ ಜನ ಪ್ರಮಾಣ ಹೆಚ್ಚಿದೆ
ಬಿಪಿಎಲ್ ಕಾರ್ಡ್ ದಾರರಿಗೆ ಹೆಣ್ಣು ಮಗು ಹುಟ್ಟಿದರೆ ಮೊದಲನೇ ಹಾಗೂ ಎರಡನೇ ಮಗುವಿಗೆ ಸರ್ಕಾರ 18 ಸಾವಿರ ರೂಪಾಯಿಯನ್ನು ಎಲ್ಐಸಿ ಕಟ್ಟುತ್ತದೆ ಅದು ಆ ಮಗುವಿಗೆ 18 ವರ್ಷ ಆದಾಗ rs.100000 ಆಗಿಬರುತ್ತದೆ
🔷ಇದು ಅವರ ಉನ್ನತ ವಿದ್ಯಾಭ್ಯಾಸಕ್ಕಾಗಿ/ ಉದ್ಯೋಗಕ್ಕಾಗಿ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ನೀಡುವ ಮೊತ್ತವಾಗಿದೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಹಾಗೂ ಸಹಕಾರ ನೀಡಬೇಕು ಮೊಬೈಲ್ ಮತ್ತು ಟಿವಿ ಎಲ್ಲ ದೂರ ಇಟ್ಟು ಅವರಲ್ಲಿ ಒಳ್ಳೆಯ ನಂಬಿಕೆ ಬೆಳೆಸಬೇಕು
🔷ಸಿದ್ದಾಪುರ ತಾಲೂಕಿನಲ್ಲಿ ಈವರೆಗೆ 5150 ಜನ ಭಾಗ್ಯಲಕ್ಷ್ಮಿ ಬಾಂಡ್ ಪಡೆಯಲು ಅರ್ಹರಿದ್ದಾರೆ 4768 ಜನರಿಗೆ ಈಗಾಗಲೇ ಬಾಂಡ್ ನೀಡಿಯಾಗಿದೆ 771 ಬಾಂಡ್ ಬರಲು ಬಾಕಿ ಇದೆ ಇವತ್ತು 380 ಜನರಿಗೆ ಬಾಂಡ್ ವಿತರಣೆ ಮಾಡಲಿದ್ದೇವೆ
🔷ಹೆಣ್ಣು ಮಗು ಸಮಾಜದ ಕಣ್ಣು ಪ್ರತಿಯೊಂದು ಮನೆಯಲ್ಲಿ ಜನಿಸುವ ಹೆಣ್ಣು ಮಗು ಭಾಗ್ಯಲಕ್ಷ್ಮಿ ಯಾಗಿ ಜನಿಸಲಿದ್ದಾಳೆ. ಎಂದರು

ಸಾಂಕೇತಿಕವಾಗಿ 100 ಜನರಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ನಾಗರಾಜನಾಯಕ್ ಬೇಡ್ಕಣಿ. ಎಂ ಜಿ ಹೆಗಡೆ ಗೆಜ್ಜೆ, ಸುಮಂಗಲ ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ತಾಲೂಕ ಪಂಚಾಯತ್ ಸದಸ್ಯ ರಘುಪತಿ ಭಟ್, ಪಟ್ಟಣ ಪಂಚಾಯತಿ ಸದಸ್ಯೆ ಶ್ರೀಮತಿ ಕುಸುಮ, ತಾಲೂಕ ಪಂಚಾಯತ್ ಇಓ ಪ್ರಶಾಂತ್ ರಾವ್, ಸಿಡಿಪಿಒ ಸುಶೀಲ ಮೊಗೇರ್ ಸೇರಿದಂತೆ ಸುಮಾರು 250 ಜನ ಹಾಜರಿದ್ದರು.


ಕಾರ್ಯಕ್ರಮ ಮುಗಿಸಿ ಹೊರಡುವಾಗ ರಾಘವೇಂದ್ರ ಕಲ್ಯಾಣ ಮಂಟಪದ ಆವರದಲ್ಲಿ ಸಿದ್ದಾಪುರ ಭಜರಂಗದಳದ ತಾಲೂಕ ಸಂಚಾಲಕ ಅಣ್ಣಪ್ಪ ಗಣಪತಿ ನಾಯ್ಕ ಹಾಗೂ ನಾಲ್ವರು ಸ್ಥಳೀಯರ ಪರವಾಗಿ ಸಿದ್ದಾಪುರ ರಾಜ್ಯ ಹೆದ್ದಾರಿಯ ಎಚ್.ಪಿ ಪೆಟ್ರೋಲ್ ಪಂಪ್ ಎದುರುಗಡೆ ಇರುವ ಅರಣ್ಯ ಇಲಾಖೆ ಜಾಗವನ್ನು ಕೆಎಸ್ಸಾರ್ಟಿಸಿಗೆ ನೀಡಿ ಅಲ್ಲಿ ಬಸ್ ಡಿಪೋ ಆಗಲು ಕ್ರಮಕೈಗೊಳ್ಳಲು ವಿನಂತಿಸಿದರು.
ನಂತರ ಹಾಳದಕಟ್ಟಾ ದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಾಣವಾಗಲಿರುವ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು.
🔷13:30 ಗಂಟೆಗೆ ಕಡಕೆರಿ ಸಾಂದ್ರ ಶೀತಲೀಕರಣ ಘಟಕದ ಉದ್ಘಾಟನೆ ಮಾಡಿದರು
ನಂತರ ಸಿದ್ದಾಪುರ ತಾಲೂಕಿನ ಕಾರ್ಮಿಕರ ಸಭೆಯನ್ನು ಬಾಲಭವನದಲ್ಲಿ ನಡೆಸಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಸಿಗಬಹುದಾದ ಸೌಲತ್ತುಗಳು ಬಗ್ಗೆ ತಿಳಿಸಿ ಹೇಳಿದರು

ಸಿದ್ದಾಪುರ ಪಟ್ಟಣದ ಶ್ರೀ ಶಂಕರ ಮಠದ ಹತ್ತಿರ ಇರುವ ಅರಣ್ಯ ಇಲಾಖೆಯ ಪ್ರಕೃತಿ ನಿರೂಪಣ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ದಲಿ ಭಾಗಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟರು
ಈ ವೇಳೆಯಲ್ಲಿ ಗ್ರಾಮ ಅರಣ್ಯ ಸಮಿತಿ ವತಿಯಿಂದ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಸೋಲಾರ್ ದೀಪ ವಿತರಿಸಿದರು. ಕಾರ್ಯಕ್ರಮದಲ್ಲಿ
ಡಿಎಫ್ಓ ಎಸ್ ಜಿ ಹೆಗಡೆ, ಎಸಿಎಫ್ ಅಬ್ದುಲ್ ಅಜೀಜ್, ಎಸಿಎಫ್ ಡಿ ರಘು, ಹಾಗೂ ಇತರ ಅರಣ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಸೇರಿದಂತೆ 50-60 ಜನರು ಹಾಜರಿದ್ದರು.

The Kurubas held a massive convention in Bengaluru recently

ಬೆಂಗಳೂರು: ದಲಿತ ಸಮುದಾಯಗಳಿಗೆ ಮೀಸಲಾತಿ ನೀಡುವುದನ್ನು ವಿರೋಧಿಸುತ್ತಿದ್ದ ಸಮುದಾಯಗಳೆಲ್ಲಾ ಇದೀಗ ತಮ್ಮ ಜಾತಿ, ಜನಾಂಗಗಳಿಗೂ ಮೀಸಲಾತಿ ಒದಗಿಸಬೇಕೆಂದು ಪೈಪೋಟಿಗೆ ಬಿದ್ದಿದ್ದು, ಈ ಬೆಳವಣಿಗೆ ಸಂವಿಧಾನ ಬಿಕ್ಕಟ್ಟಿಗೆ ನಾಂದಿಯಾಗುತ್ತದೆ ಎಂದು ಶೋಷಿತ ಸಮುದಾಯದ ಮುಖಂಡರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
  
ಮೀಸಲಾತಿಯನ್ನೇ ವಿರೋಧಿಸಿ ಹೋರಾಟ ಮಾಡಿದ್ದವರು ಇದೀಗ ಮೀಸಲಾತಿ ಬೇಕು ಎಂದು ಹೋರಾಟ ಮಾಡುವ ಹಂತಕ್ಕೆ ಬಂದಿದ್ದಾರೆ. ಈ ಮೀಸಲಾತಿ ಪೈಪೋಟಿ ಮುಂಬರುವ ದಿನಗಳಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗುತ್ತದೆ. ಮೀಸಲಾತಿ ಶೇ 50 ಕ್ಕಿಂತ ಹೆಚ್ಚಾದರೆ ಸಂವಿಧಾನ ಬಿಕ್ಕಟ್ಟು ಸೃಷ್ಟಿಯಾಗುತ್ತದೆ ಎಂದು ಹೇಳಿದ್ದಾರೆ.
  
ನಗರದ ಗಾಂಧಿ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಶೋಷಿತ ಸಮುದಾಯಗಳೊಂದಿಗೆ “ ಸಾಮಾಜಿಕ ನ್ಯಾಯಕ್ಕಾಗಿ ಮೀಸಲಾತಿ ಮತ್ತು ಒಳ ಮೀಸಲಾತಿ “ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಶೋಷಿತ ಸಮುದಾಯಗಳ ಮುಖಂಡರು ಮೀಸಲಾತಿ ಹೋರಾಟ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದಿದ್ದಾರೆ.
  
ಸಾಹಿತಿ ಮತ್ತು ದಲಿತ ಸಂಘರ್ಷ ಸಮಿತಿ ಮುಖಂಡ ಸಿ ಕೆ ಮಹೇಶ್ ಮಾತನಾಡಿ, ಮೀಸಲಾತಿ ಬೇಡ ಎಂದು ಹೋರಾಡಿದ ವ್ಯಕ್ತಿಗಳು, ಜಾತಿಗಳು, ಮೀಸಲಾತಿ ವಿರೋಧಿಸಿದ ಸಮುದಾಯಗಳು ಈಗ ನಮಗೂ ಮೀಸಲಾತಿ ಬೇಕು ಎಂದು ಹೋರಾಟ ಮಾಡುತ್ತಿರುವುದು ವಿಪರ್ಯಾಸವಾಗಿದೆ. ಸಂವಿಧಾನದಲ್ಲಿ ಮೀಸಲಾತಿ ಪ್ರಮಾಣ ಶೇ. 50ಕ್ಕೆ ಸೀಮಿತವಾಗಿದೆ. ಇದೀಗ ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿ ನೀಡಿದರೆ ಇದು ರಾಜ್ಯದಲ್ಲಿ ಶೇ 54.5ಕ್ಕೆ ಏರಿಕೆಯಾಗಲಿದೆ. ಇದಲ್ಲದೇ ಕೇಂದ್ರ ಸರ್ಕಾರ ಮೇಲ್ಜಾತಿಗೆ ಶೇ 10 ರಷ್ಟು ಮೀಸಲಾತಿ ನೀಡುವುದಾಗಿ ಪ್ರಕಟಿಸಿದ್ದು, ಬರುವ ದಿನಗಳಲ್ಲಿ ಮೀಸಲಾತಿ ಶೇ 64.5 ಕ್ಕೆ ಏರಿಕೆಯಾಗಲಿದೆ. ನಂತರ ಸಂವಿಧಾನ ಬಿಕ್ಕಟ್ಟು ಸೃಷ್ಟಿಯಾಗಲಿದೆ ಎಂದರು.
  


ಮೀಸಲಾತಿ ಹೋರಾಟದಿಂದ ನಮ್ಮ ನಮ್ಮಲ್ಲಿ ಜಗಳಗಳ ಆರಂಭಕ್ಕೆ ಕಾರಣವಾಗುತ್ತದೆ. ಲಿಂಗಾಯಿತರು, ಒಕ್ಕಲಿಗರಿಂದಲೂ ಸಹ ಮೀಸಲಾತಿಗಾಗಿ ಬೇಡಿಕೆ ಬಂದಿದೆ. ಇವರೆಲ್ಲರ ನಡೆ ಅಂಬೇಡ್ಕರ್ ಮೀಸಲಾತಿ ಪರಿಕಲ್ಪನೆಗೆ ವಿರುದ್ಧವಾಗಿದೆ. ಶೋಷಿತರ ವಿರುದ್ಧ ಮೇಲ್ಜಾತಿಯವರನ್ನು ಎತ್ತಿಕಟ್ಟುವ ಪ್ರಯತ್ನ ಇದಾಗಿದೆ. ಪರಿಶಿಷ್ಟ ವಲಯದ 101 ಸಮುದಾಯಗಳನ್ನು ಪ್ರತ್ಯೇಕ ಗುಂಪುಗಳನ್ನಾಗಿ ಮಾಡಿ ಪ್ರತಿ ಜಾತಿಗಳಿಗೆ ಆಯೋಗಗಳನ್ನು ರಚಿಸಿ ನಮ್ಮ ಒಗ್ಗಟ್ಟು ಒಡೆಯುವ ಕೆಲಸ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
  
ಅಧ್ಯಕ್ಷತೆ ವಹಿಸಿದ್ದ ಕೆ.ಡಿ.ಎಸ್.ಎಸ್. ರಾಜ್ಯ ಸಂಚಾಲಕ ಹೆಣ‍್ಣೂರು ಶ್ರೀನಿವಾಸ್ ಮಾತನಾಡಿ, ಪರಿಶಿಷ್ಟ ವಲಯದಲ್ಲಿನ ಒಳಮೀಸಲಾತಿ ಜಾರಿಗಾಗಿ ನ್ಯಾಯಮೂರ್ತಿ ಎ.ಜಿ. ಸದಾಶಿವ ಆಯೋಗದ ವರದಿ ಮೊದಲು ಜಾರಿಯಾಗಬೇಕು. ನಮ್ಮಲ್ಲಿರುವ 101 ಜಾತಿಗಳಲ್ಲಿ ಒಗ್ಗಟ್ಟು ಮೂಡಿಸಿ. ಏಕತೆಯ ಹೋರಾಟ ರೂಪಿಸಬೇಕು. ಇದಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಹೇಳಿದರು.
  
ಕುರುಬ ಸಮುದಾಯದ ಎಸ್.ಟಿ ಹೋರಾಟ ಸಮಿತಿ ಮುಖಂಡ ಮುಖಡಪ್ಪ ಮಾತನಾಡಿ, ಶೇ 98 ರಷ್ಟು ಕುರುಬರನ್ನು ಶೇ. 2 ರಷ್ಟು ನಾಯಕರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ರಾಜಕೀಯ ನೇತರಾರರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ಸಿದ್ದರಾಮಯ್ಯ ಇವರೆಲ್ಲರೂ ಮೇಲ್ಜಾತಿ ಬ್ರಾಹ್ಮಣರಂತೆ ವರ್ತಿಸುತ್ತಿದ್ದಾರೆ. ನಿಜಕ್ಕೂ ಮೀಸಲಾತಿ ಬೇಕು ಎಂದರೆ ಸಂವಿಧಾನದ ಪರಿಚ್ಚೇದಕ್ಕೆ ತಿದ್ದುಪಡಿ ತರಬೇಕು. ತಮಿಳುನಾಡಿನಲ್ಲಿ ಜೆ. ಜಯಲಿತಾ ಮೀಸಲಾತಿಯನ್ನು ಶೇ 69ಕ್ಕೆ ಹೆಚ್ಚಿಸಿದ್ದಾರೆ. ಈ ಮಾದರಿ ರೂಪಿಸುವ ಇಚ್ಚಾಶಕ್ತಿ ಪ್ರದರ್ಶಿಸಿದರೆ ಎಲ್ಲರಿಗೂ ಮೀಸಲಾತಿ ನೀಡಬಹುದು ಎಂದರು.
  
ನಿವೃತ್ತ ಐ.ಎ.ಎಸ್ ಅಧಿಕಾರಿ ಬಾಬುರಾವ್ ಮುಡಬಿ ಮಾತನಾಡಿ, ಮೀಸಲಾತಿ ಸ್ಥಿತಿ, ಗತಿ, ಕಾನೂನಿನ ಆಗುಹೋಗುಗಳ ಬಗ್ಗೆ ಜ್ಞಾನ ಹೊಂದಿರುವ ತಜ್ಞರ ಜತೆ ಚರ್ಚೆ ನಡೆಸಿ ಸರ್ಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡಬಹುದು. ಸರ್ಕಾರಿ ಅಧಿಕಾರಿಯಾಗಿ ಕೆಲಸ ಮಾಡಿದ್ದ ನಮಗೆ ಸರ್ಕಾರದ ಬಗ್ಗೆ ವಿಶ್ವಾಸವಿದೆ. ಮೀಸಲಾತಿ ಇಲ್ಲದಿದ್ದರೆ ದೇಶ ಶೈಕ್ಷಣಿಕವಾಗಿ, ಆರ್ಥಿಕವಾಗಿ ಇಷ್ಟೊಂದು ಬೆಳವಣಿಗೆ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಮೀಸಲಾತಿ ಪಡೆಯುವವರು ತಮ್ಮ ಸಮುದಾಯಗಳ ಸಾಮಾಜಿಕ ಸ್ಥಿತಿಗತಿ, ಆರ್ಥಿಕ ಪರಿಸ್ಥಿತಿ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಬೇಕು. ಸ್ಪಷ್ಟತೆ ಇಲ್ಲದಿದ್ದರೆ ಸಮರ್ಪಕ ವಾದ ಮಂಡನೆ, ಪ್ರತಿಪಾದನೆ ಸಾಧ್ಯವಿಲ್ಲ ಎಂದರು.
  
ಕಾರ್ಯಕ್ರಮದಲ್ಲಿ ಡಿ..ಎಸ್.ಎಸ್ ನ ರಾಜ್ಯ ಸಮಿತಿ ಸದಸ್ಯರು, ವಿವಿಧ ಜಿಲ್ಲೆಗಳ ಕೆ.ಡಿ.ಎಸ್ಎಸ್. ಪದಾಧಿಕಾರಿಗಳು, ಪರಿಶಿಷ್ಟ ಪಂಗಡಗಳ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *