

ದೇಶದಲ್ಲಿ ಮಾರಕ ಕೊರೋನಾ ವೈರಸ್ ನ 2ನೇ ಅಲೆಯ ಭೀತಿ ಆರಂಭವಾಗಿರುವಂತೆಯೇ ಇತ್ತ ಕೋಲ್ಕತಾದಲ್ಲಿ ವಿಚಿತ್ರ ಸೋಂಕು ಭಾರಿ ಸದ್ದು ಮಾಡುತ್ತಿದ್ದು, ಕೇವಲ 3 ದಿನಗಳ ಅಂತರದಲ್ಲಿ ಬರೊಬ್ಬರಿ 200 ನಾಯಿಗಳು ಸೋಂಕಿನಿಂದಾಗಿ ಸಾವನ್ನಪ್ಪಿವೆ ಎನ್ನಲಾಗಿದೆ.

ಸಿದ್ದಾಪುರ ಪ.ಪೂ ಕಾಲೇಜಿನಲ್ಲಿ ಜಿಲ್ಲಾಮಟ್ಟದ ಜೀವಶಾಸ್ತ್ರ ಕಾರ್ಯಾಗಾರ
ಸಿದ್ದಾಪುರ. ತಾಲೂಕಿನ ಪಟ್ಟಣ ವ್ಯಾಪ್ತಿಯ ಹಾಳದಕಟ್ಟಾದಲ್ಲಿರುವ ಸರಕಾರಿ ಪ.ಪೂ.ಕಾಲೇಜಿನಲ್ಲಿ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಜೀವಶಾಸ್ತ್ರ ಉಪನ್ಯಾಸಕರಿಗೆ ಒಂದುದಿನದ ವಿಷಯಾಧಾರಿತ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಪ.ಪೂ.ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್. ಎನ್. ಬಗಲಿ ಕಾರ್ಯಾಗಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ ಜಿಲ್ಲೆಯ ಫಲಿತಾಂಶ ಉತ್ತಮ ಪಡಿಸಲು ವಿಷಯವಾರು ಸಂಘಟನೆಗಳು ಪ್ರಯತ್ನ ಶೀಲವಾಗಿವೆ ಅಲ್ಲದೆ ಯಶಸ್ಸನ್ನೂಗಳಿಸಿವೆ. ಎಲ್ಲಾ ಕಾಲೇಜುಗಳ ಉಪನ್ಯಾಸಕರು ಇಂತಹ ಕಾರ್ಯಾಗಾರಗಳಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ಉಪಯೋಗ ಪಡೆದುಕೊಳ್ಳಬೇಕು. ರಾಜ್ಯಮಟ್ಟದಲ್ಲಿ ಹಿಂದಿನ ವರ್ಷ ತೃತೀಯ ಸ್ಥಾನ ಪಡೆದ ನಾವು ಈ ವರ್ಷ ಪ್ರಥಮ ಸ್ಥಾನಕ್ಕಾಗಿ ಪ್ರಯತ್ನಿಸಬೇಕಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ. ಕವಿತಾ ಬಾದ್ರಿ ಜೀವಶಾಸ್ತ್ರ ಪ್ರಯೋಗಾಲಯ ಕೈಪಿಡಿ ಬಿಡುಗಡೆ ಮಾಡಿದರು. ಜಿಲ್ಲಾ ಜೀವಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ರಮೇಶ ಪತ್ರೇಕರ ಅಧ್ಯಕ್ಷತೆ ವಹಿಸಿದ್ದರು. ಪ.ಪೂ.ಶಿಕ್ಷಣ ಇಲಾಖೆಯ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಜಿ.ಪಿ.ನಾಯಕ್ ಸಿದ್ದರ, ಕಾರವಾರ, ಆತಿಥೇಯ ಕಾಲೇಜಿನ ಪ್ರಾಚಾರ್ಯ ಭಾಸ್ಕರ್ ಹೆಗಡೆ, ಉಪನ್ಯಾಸಕರ ಸಂಘದ ತಾಲೂಕಾ ಘಟಕದ ಅಧ್ಯಕ್ಷ ಮಂಜಪ್ಪ.ಎಂ.ಜಿ., ಜೀವಶಾಶಾಸ್ತ್ರ ವೇದಿಕೆಯ ಗೌರವಾಧ್ಯಕ್ಷ ಆರ್. ಎಂ.ಭಟ್ಟ ಶಿರಸಿ ವೇದಿಕೆಯಲ್ಲಿದ್ದು ಮಾತನಾಡಿದರು. ಜೀವಶಾಸ್ತ್ರ ವಿಷಯದಲ್ಲಿ ನೂರಕ್ಕೆ ನೂರರಷ್ಟು ಅಂಕಪಡೆದ ಜಿಲ್ಲೆಯ ವಿದ್ಯಾರ್ಥಿಗಳು ಮತ್ತು ಸದರಿ ವಿಷಯದಲ್ಲಿ ನೂರಕ್ಕೆ ನೂರು ಉತ್ತೀರ್ಣ ಫಲಿತಾಂಶ ನೀಡಿದ ಉಪನ್ಯಾಸಕರುಗಳನ್ನು ಪುರಸ್ಕರಿಸಲಾಯಿತು. ವಿದ್ಯಾರ್ಥಿನಿಯರಾದ ಚೈತ್ರಾ ಮತ್ತು ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು.
ಕಾರ್ಯದರ್ಶಿ ನಾಗರಾಜ ನಾಯ್ಕ ಶಿರಸಿ ಸ್ವಾಗತಿಸಿದರು. ವಿನಾಯಕ.ಆರ್. ನಾಯ್ಕ ಸಿದ್ದಾಪುರ ವಂದಿಸಿದರು. ಅರವಿಂದ ಪಾಟೀಲ ಹಲಗೇರಿ ನಿರೂಪಿಸಿದರು.
ಜೀವಶಾಸ್ತ್ರ ಬೋಧಕರ ವೇದಿಕೆ ಮತ್ತು ಸರಕಾರಿ ಪ.ಪೂ.ಕಾಲೇಜು ಸಿದ್ದಾಪುರ ಸಂಯುಕ್ತವಾಗಿ ತರಬೇತಿಯನ್ನು ಆಯೋಜಿಸಿದ್ದವು.
ಕೊಲ್ಕತ್ತಾ: ದೇಶದಲ್ಲಿ ಮಾರಕ ಕೊರೋನಾ ವೈರಸ್ ನ 2ನೇ ಅಲೆಯ ಭೀತಿ ಆರಂಭವಾಗಿರುವಂತೆಯೇ ಇತ್ತ ಕೋಲ್ಕತಾದಲ್ಲಿ ವಿಚಿತ್ರ ಸೋಂಕು ಭಾರಿ ಸದ್ದು ಮಾಡುತ್ತಿದ್ದು, ಕೇವಲ 3 ದಿನಗಳ ಅಂತರದಲ್ಲಿ ಬರೊಬ್ಬರಿ 200 ನಾಯಿಗಳು ಸೋಂಕಿನಿಂದಾಗಿ ಸಾವನ್ನಪ್ಪಿವೆ ಎನ್ನಲಾಗಿದೆ.
ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು, ಕಳೆದ ಮೂರು ದಿನಗಳಲ್ಲಿ 200ಕ್ಕೂ ಹೆಚ್ಚು ಶಾನ್ವಗಳು ಸಾವನ್ನಪ್ಪಿದೆ. ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಬಿಷ್ಣುಪುರ ನಗರದಲ್ಲಿ ಈ ಘಟನೆ ನಡೆದಿದ್ದು, ನಾಯಿಗಳ ದಿಢೀರ್ ಸಾವಿಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಮೂಲಗಳ ಪ್ರಕಾರ ಕಳೆದ ಮಂಗಳವಾರ 60, ಬುಧವಾರ 97, ಗುರುವಾರ 45 ಸೇರಿದಂತೆ ಮೂರು ದಿನಗಳಲ್ಲಿ ಸುಮಾರು 200 ನಾಯಿಗಳು ಸಾವನ್ನಪ್ಪಿವೆ. ಈ ಕುರಿತಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದ್ದು, ಮೃತಪಟ್ಟ ನಾಯಿಗಳ ದ್ರವವನ್ನು ಸಂಗ್ರಹಿಸಿ ಕೊಲ್ಕತ್ತಾಗೆ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ನಾಯಿಗಳ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.
ಇನ್ನು ಸಾವನ್ನಪ್ಪಿದ ನಾಯಿಗಳನ್ನು ಬಿಷ್ಣುಪುರ ಪುರಸಭೆ ಸಿಬ್ಬಂದಿಗಳು ಸಾಮೂಹಿಕವಾಗಿ ಡಂಪಿಂಗ್ ಮಾಡಿದ್ದಾರೆ ಎನ್ನಲಾಗಿದೆ.
ನಾಯಿಗಳ ಸಾವಿಗೆ ನಿಗೂಢ ಸೋಂಕು ಕಾರಣ ಎಂದು ಶಂಕಿಸಲಾಗಿದ್ದು, ಸಾಮಾನ್ಯವಾಗಿ ಬಂಗಾಳದಲ್ಲಿ ನಾಯಿಗಳಿಗೆ ಈ ಸಮಯದಲ್ಲಿ ಸೋಂಕು ಸಾಮಾನ್ಯ. ಈ ಕುರಿತು ಆತಂಕ ಪಡುವ ಅಗತ್ಯವಿಲ್ಲ. ನಾಯಿಗಳಿಗೆ ಹರಡಿದ ಸೋಂಕು ಇತರ ಪ್ರಾಣಿ ಅಥವಾ ಮನುಷ್ಯರಿಗೆ ಹರಡುವ ಸಾಧ್ಯತೆ ಇಲ್ಲ. ನಾಯಿಗಳ ದ್ರವವನ್ನು ಪಡೆದಿದ್ದೇವೆ ಪರೀಕ್ಷೆ ಮಾಡುತ್ತೇವೆ ಎಂದು ಸರ್ಕಾರಿ ಪಶುವೈದ್ಯರು ಹೇಳಿದ್ದಾರೆ. (kpc)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
