

ನಮ್ಮ ದೇಶದ ಆಹಾರ ಸಂಸ್ಕೃತಿಯಲ್ಲಿ ಮಾಂಸಾಹಾರ ಅಥವಾ ಮತ್ಸ್ಯಾಹಾರ ಗಣನೀಯ ಪಾತ್ರವಹಿಸುತ್ತದೆ. ವಿಶೇಷವಾಗಿ ಕರಾವಳಿ ಪ್ರದೇಶಗಳಲ್ಲಿ ಮೀನೆನ್ನುವುದು ಅಲ್ಲಿನ ಜನಜೀವದ ಅವಿಭಾಜ್ಯ ಅಂಗವಾಗಿದೆ. ಕೇವಲ ಆಹಾರವಾಗಿ ಮಾತ್ರವಲ್ಲದೇ ಸಾಂಸ್ಕೃತಿಕ ಮತ್ತು ಆರ್ಥಿಕ ಜೀವನಗಳು ಕೂಡ ಮೀನಿನೊಟ್ಟಿಗೆ ಬೆಸೆದುಕೊಂಡಿವೆ. ತೇಜಸ್ವಿಯವರ ಪುಸ್ತಕಗಳಲ್ಲಿ, ರಶೀದರ ಕಥನಗಳಲ್ಲಿ ಮೀನಿನ ಬಗ್ಗೆ ಸಾಕಷ್ಟು ಓದಿ ಮೆಚ್ಚಿದ್ದ ನನಗೆ Following Fish ಅತ್ಯಂತ ವಿಭಿನ್ನ ಅನುಭವ ಕೊಟ್ಟಿತು.

ಒಂದು ಪ್ರವಾಸ ಕಥನ ಹೇಗಿರಬೇಕು ಅನ್ನೋದಕ್ಕೆ ಬೆಂಚ್‌ಮಾರ್ಕ್ ಆಗಿ ನಿಲ್ಲುತ್ತದೆ ಈ ಪುಸ್ತಕ. ಭಾರತದ ಕರಾವಳಿಗಳಲ್ಲಿ ಮೀನಿನ ಖಾದ್ಯಗಳ ಅರಸುತ್ತಾ ಅಲ್ಲಿನ ಸ್ಥಳೀಯ ಸಂಸ್ಕೃತಿಗಳ ಬಗ್ಗೆ ಲೇಖಕರು ಆಳವಾದ ವಿಶ್ಲೇಷಣೆ ಮಾಡುತ್ತಾ ಸಾಗುತ್ತಾರೆ. ತಮ್ಮ ಅಭಿಪ್ರಾಯವನ್ನು ಹೇಳಬೇಕಾದರೆ ಎಲ್ಲೂ ಪೂರ್ವಾಗ್ರಹಕ್ಕೆ ಒಳಗಾಗದೇ ಹೇಳುವ ರೀತಿ ಬಹಳ ಇಷ್ಟವಾಯಿತು.

ಭಾರತದ ಕರಾವಳಿಯ ಪ್ರತಿ ರಾಜ್ಯಗಳಲ್ಲೂ ಪ್ರಯಾಣಿಸಿ ಮೀನಿನ ಜೊತೆ ಬೆಸೆದುಕೊಂಡಿರುವ ಜನಜೀವನದ ಬಗ್ಗೆ ಅವರ ಅನುಭವಗಳ ಹೇಳುತ್ತಾ ಹೋಗುತ್ತಾರೆ. ಇದು ಒಂದೇ ಬಾರಿ ಪ್ರಯಾಣಿಸಿ ಬರೆದಿದ್ದಲ್ಲ. ಇಲ್ಲಿ ಲೇಖಕರು ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ರಾಜ್ಯಗಳಿಗೆ ಪ್ರವಾಸ ಹೋಗಿ ಬರೆದ ಕಥನಗಳಿವೆ. ಒಂದೊಂದು ಅಧ್ಯಾಯಗಳು ಅದರದೇ ಆದ ವೈಶಿಷ್ಟ್ಯವನ್ನು ಹೊಂದಿವೆ. ಒಟ್ಟಾರೆಯಾಗಿ ಓದಲೇಬೇಕಾದ ಪುಸ್ತಕ. ಮೂಲ ಇಂಗ್ಲಿಷಿನಲ್ಲಿರುವ ಈ ಕೃತಿಯನ್ನ ಸಹನಾ ಹೆಗಡೆಯವರು ಬಹಳ ಚಂದಕ್ಕೆ ಕನ್ನಡೀಕರಿಸಿದ್ದಾರೆ.
ನಮಸ್ತೆ ಸರ್ ದಿನಾಂಕ 21/02/2021 ರಂದು ಸುಮಾರು 12 ಘಂಟೆಗೆ ಕೊಲಸಿರ್ಸಿ ಗ್ರಾಮದ ಶ್ರೀ ನೀಲ ಚಂದ್ರಶೇಕರ ನಾಯ್ಕ ಇವರ ವಾಸ್ತವ್ಯದ ಮನೆಗೆ ವಿದ್ಯುತ್ ಅವಗಡದಿಂದ ಬೆಂಕಿ ಬಿದ್ದು ಸುಟ್ಟು ಹಾನಿಯಾಗಿದ್ದು ಅಂದಾಜು ಹಾನಿಯ ಮೊತ್ತ 150000 ರೂ ಇರುತ್ತದೆ ಸದ್ರಿ ಘಟನೆಯಲ್ಲಿ ಯಾವುದೇ ಜನ ಜಾನುವಾರುಗಳಿಗೆ ಜೀವ ಹಾನಿ ಆಗಿರುವುದಿಲ್ಲ ಎಂದು ಮಾನ್ಯರಿಗೆ ಪ್ರಾಥಮಿಕ ವರದಿ ಒಪ್ಪಿಸಿದೆ ಪ್ರಕರಣವನ್ನು ಹಿಂದಿನಿಂದ ಒಪ್ಪಿಸಲಾಗುವುದು.



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
