ಮಂಡಗಳಲೆ ಯನ್ನು ಬದಲಾಯಿಸಿದ ಶಿಕ್ಷಣ!

ಮಲೆನಾಡಿನ#ಬಯಲು#ಸೀಮೆ#ಮುಳುಗಡೆ#ಮಂಡಗಳಲೆಯ#ಶಿಕ್ಷಣ#ಕ್ರಾಂತಿ#ನಿಮಗೆ#ಗೊತ್ತೇ…ಪೂರ್ವದಲ್ಲಿ ವರದಾ ನದಿಯು ಮಂಡಗಳಲೆಯ ದುಃಖ ನದಿಯಾಗಿ ಕಾಡಿದರೆ, ಪಶ್ಚಿಮದಲ್ಲಿ ಕನ್ನೆಹೋಳೆ ತೀರದ ಅಬ್ಬರಕ್ಕೆ ಪ್ರತಿವರ್ಷ ನಷ್ಟಕ್ಕೆ ಒಳಗಾಗುವ ತುಂಡು ಹೊಲದ, ಅಷ್ಟೇನೂ ಫಲವತ್ತಲ್ಲದ ಹೋಂಗಲು ಭೂಮಿಯ ರೈತಾಪಿಗಳ ಊರು ಮಂಡಗಳಲೆ.

ಮಳೆಗಾಲದ ಕೆಲವು ಮಾಸಗಳಲ್ಲಿ ಪ್ರತಿವರ್ಷ ಪ್ರವಾಹಕ್ಕೆ ಸಿಲುಕಿ ದ್ವೀಪ ಪ್ರದೇಶದಂತೆ ಕಾಣುವ ಮಂಡಗಳಲೆಯ ಜಡಿಮಳೆ ಕೆಲವರಿಗೆ ಅಚ್ಚರಿಯ ಪ್ರವಾಸಿತಾಣ, ಅಲ್ಲಿನ ನಿವಾಸಿಗಳಿಗೆ ಕಣ್ಣೀರಿನ ದುರಂತ ಮೌನಗಾನ.ಮಲೆನಾಡಿನ ಕೇಂದ್ರಭಾಗದ ಸಾಗರ ತಾಲೂಕಿನ ಕೆಳದಿ ಸೀಮೆಯ ಮಲೆನಾಡಿನ ಹಳ್ಳಿಯಾದರೂ ಮಂಡಗಳಲೆ ಯಲ್ಲಿ ಮಲೆನಾಡಿನ ಯಾವ ಲಕ್ಷಣವೂ ಇಲ್ಲ. ಕುರುಚಲು ಗಿಡ ಮರಗಳು, ಕಳ್ಳಿಮಟ್ಟಿ, ಕುನ್ನೇರಲು ಮರಗಳೇ ಹಸಿರು ಸಿರಿ. ಬಯಲು ಬೀಡಾದ ಹಬ್ಬೇವು ನಮ್ಮೂರಿನ ಹುಲ್ಲುಗಾವಲು. ಸಮೀಪದ ಗುಡವಿ ಪಕ್ಷಿಧಾಮಕ್ಕೆ ಹೋಗುವ ಹಲವು ಪಕ್ಷಿಗಳು ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಇಲ್ಲಿಯೂ ಸಹ ಉಳಿಯುವುದು ಮಾತ್ರ ಮತ್ತೊಂದು ವಿಶೇಷ.

ಸಮೀಪದ ಕಾಗೋಡು, ಹಿರೇನೆಲ್ಲೂರಿನ ಸಮಾಜವಾದಿ ಗುಣ ಹುಟ್ಟಿದ್ದೇ ಮಂಡಗಳಲೆ ಮಣ್ಣಿನಲ್ಲಿ ,ಕಾಗೋಡು ಚಳವಳಿಯ ಹಲವು ರೂವಾರಿಗಳು ಮಂಡಗಳಲೆಯವರು ಎಂಬುದು ಹಲವು ಹಿರಿಯರ ಅಂಬೋಣ. ಈ ಬಗ್ಗೆ ಬಂಜಗೆರೆ ಜಯಪ್ರಕಾಶ್ ಅವರ ನೇತೃತ್ವದಲ್ಲಿ ಹುಚ್ಚಪ್ಪ ಮಾಸ್ತರು ಸಂಪಾದಿಸಿದ ಪುಸ್ತಕದಲ್ಲಿ ಈ ಬಗ್ಗೆ ದಾಖಲೆಗಳ ಉಲ್ಲೇಖವಿದೆ.

ಇಂತಹ ಹಳ್ಳಿಯ ಜನಗಳ ಎದೆಯಲ್ಲಿ ಇದ್ದದ್ದು ಒಂದೇ ಸ್ವಾಭಿಮಾನ ಮತ್ತು ಪರಿಶ್ರಮ. ಶಿಕ್ಷಣವೇ ಶಕ್ತಿಯೆನ್ನುವ ತಿಳಿವು.ಇರುವ ಭೂಮಿ ಒಂದು ಕುಟುಂಬದಲ್ಲಿ ಕೇಂದ್ರೀಕೃತವಾಗಿತ್ತು. ಹೇಗೋ ಉಳುವವನೇ ಭೂ ಒಡೆಯ ಕಾನೂನಿನ ಅಡಿಯಲ್ಲಿ ಚೂರುಪಾರು ಭೂಮಿ ಗಿಟ್ಟಿಸಿಕೊಂಡರು ಕೂಲಿ ತಪ್ಪಲಿಲ್ಲ. ಹಲಸಿ ಬೀಜ ಹುಳಿಸಾರು ಗತಿಯಾಗಿತ್ತು. ಸಣ್ಣಪುಟ್ಟ ಕೆರೆ ಗುಂಡಿಯ ಮೀನಿನ ಆಸೆಗೆ ಈ ಊರಿನಲ್ಲಿ ಬೀಡುಬಿಟ್ಟು ನೆಲೆಸಿದ್ದೇವೆ ಹೊರತು ಇದು ಜನವಸತಿಗೆ, ಅಭಿವೃದ್ಧಿಗೆ ಪೂರಕವಾದ ಜಾಗವಲ್ಲ ಎಂಬುದು ನಮಗೂ ಗೊತ್ತಿತ್ತು ಆದರೂ ಇಲ್ಲೇ ಉಳಿದುಬಿಟ್ಟೇವು ಎಂದು ಪೂರ್ವಜರು ಮೀನಿನ ಆಸೆಯ ಹುಂಬತನವನ್ನು ಈಗಲೂ ಸ್ಮರಿಸಿಕೊಳ್ಳುತ್ತಾರೆ.

ಸಮೀಪದ ಬೆಳ್ಳಿಕೊಪ್ಪ ಎಂತದೋ ದೆವ್ವ-ಭೂತ ಮಾಟ-ಮಂತ್ರ ,ಮಲೇರಿಯಾ ರೋಗದ ಕಾಲದಲ್ಲಿ ಅವನತಿಯತ್ತ ಸಾಗಿದಂತೆ ಮಂಡಗಳಲೆಯಲ್ಲಿ ಜನವಸತಿ ಹೆಚ್ಚುತ್ತಾ ಹೋಯಿತು. ಈ ಮಂಡಗಳಲೆ ಜನವಸತಿ ಪ್ರದೇಶ ತೀರಾ ಇತ್ತೀಚಿನ ತಲೆಮಾರುಗಳಲ್ಲಿ ಬೆಳೆದದ್ದು ಹೊರತು ದೀರ್ಘಕಾಲದ ತಲೆಮಾರುಗಳ ಯಾವ ಇತಿಹಾಸವು ಇಲ್ಲ.ಆದರೆ ಈಗ ಮಂಡಗಳಲೆಯ ಚಿತ್ರಣವೇ ಬೇರೆ. ಸುತ್ತಲ ಕೆಳದಿಸೀಮೆ ಸಾಗರ, ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ನೌಕರರನ್ನು ಹೊಂದಿದ ಊರಷ್ಟೆ ಅಲ್ಲ, ಸಮಾಜವಾದಿ ನೆಲೆಗಟ್ಟಿನ ಗ್ರಾಮ ಸುಧಾರಣಾ ಸಮಿತಿ ಇರುವ, ಸುಂದರ ಗ್ರಾಮ ನಿರ್ಮಾಣ ಯೋಜನೆ, ಸುಸಜ್ಜಿತ ರಸ್ತೆಗಳು, ಸಾಲು-ಸಾಲು ತೆಂಗಿನ ತೋಪಿನ ನಡುವಿನ ಮನೆಗಳ ವಾತಾವರಣ ಮತ್ತು ನಗರ ಯೋಜನೆಯನ್ನು ಮೀರಿಸುವಂತಹ ವ್ಯವಸ್ಥಿತ ಕೇರಿ ಯೋಜನೆ , ರಸ್ತೆ ಚರಂಡಿ ಯೋಜನೆ ಇರುವ ಊರಾಗಿ ಮಂಡಗಳಲೆ ನಿಮ್ಮನ್ನು ಗಮನಸೆಳೆಯುತ್ತದೆ.

ಮಂಡಗಳಲೆಯ ಸಮೀಪದಲ್ಲಿ ಇತ್ತೀಚಿನ ವರ್ಷಗಳವರೆಗೂ ಯಾವ ಹೈಸ್ಕೂಲು ಕಾಲೇಜು ಇರಲಿಲ್ಲ ಆದರೂ ಎಂಬತ್ತರ ದಶಕದಲ್ಲಿಯೇ ಹಲವರು ಪದವೀಧರರು, ನೌಕರರು ಇದ್ದರು. ಬಹುತೇಕ ಇಡೀ ಊರಿನ ಕುಟುಂಬಗಳು ಸ್ವತಂತ್ರ ಹೋರಾಟಗಾರರ ಜೊತೆ ಕೈಜೋಡಿಸಿದ್ದು ಉಳುವವನೇ ಭೂ ಒಡೆಯ ಹೋರಾಟದಲ್ಲಿ ಎಲ್ಲ ಕುಟುಂಬಗಳು ಒಂದಾಗಿ ತೊಡಗಿಕೊಂಡಿದ್ದರೆಂಬುದು ಹಿರಿಯರ ಮಾತು.ಹೆಚ್ಚುವರಿ ಜಿಲ್ಲಾಧಿಕಾರಿಯಂತಹ ಉನ್ನತ ಹುದ್ದೆಗಳಿಂದ ಹಿಡಿದು, ವಿವಿಧ ಅಧಿಕಾರಿವರ್ಗ, ಹಲವು ಉಪನ್ಯಾಸಕರು, ಶಿಕ್ಷಕರು, ಪೊಲೀಸರು, ಇಂಜಿನಿಯರುಗಳು, ಉದ್ಯಮಿಗಳು, ಬರಹಗಾರರು, ವಿವಿಧ ಸ್ತರದ ಸರ್ಕಾರಿ ಮತ್ತು ಖಾಸಗಿ ನೌಕರರು, ಚಾರ್ಟೆಡ್ ಅಕೌಂಟೆಂಟ್, ರಾಜಕೀಯ ಸಕ್ರಿಯರು, ಗುತ್ತಿಗೆದಾರರು ಸೇರಿದಂತೆ ಅಂದಾಜು 60 ಕ್ಕೂ ಹೆಚ್ಚು ನೌಕರರು , ರೈಲ್ವೆ ಇಲಾಖೆ ಪಂಚಾಯಿತಿ, ಅಗ್ನಿಶಾಮಕದಳ ಮೆಟ್ರೋ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಇನ್ನಿತರ ವಿವಿಧ ಇಲಾಖೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಶಿಕ್ಷಿತ ಪ್ರಜ್ಞಾವಂತರ ಊರು ಮಂಡಗಳಲೆ.

ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೃಷ್ಣಮೂರ್ತಿ ಹೆಚ್ ಕೆ . ಕೂಡ ಮಂಡಗಳಲೆ ಊರಿನವರು.ಸಮಾಜವಾದಿ ನೆಲೆಗಟ್ಟಿನ ಗ್ರಾಮ ಸುಧಾರಣಾ ಸಮಿತಿಯು ಎಂತಹ ಹೈಕೋರ್ಟ್ ನ್ನು ಮೀರಿಸುವಂತಹ ಕಾನೂನು ವ್ಯಾಪ್ತಿಯ ದಕ್ಷತೆಯನ್ನು ಸದಾ ಮೆರೆಯುತ್ತಾ ಬಂದಿದೆ. ಗೋಮಾತೆಯೆಂದು ಬಡಾಯಿ ಭಾಷಣ ಬಿಗಿಯುವ ಹಲವರ ಎದುರು ಅತಿ ಹೆಚ್ಚಿನ ಮಲೆನಾಡು ಕಗ್ಗ ಹಸುಗಳನ್ನು ಸ್ವತಹ ಸಾಕಿ ಬೆಳೆಸಿ ಉಳಿಸಿಕೊಂಡಿರುವ ಊರು ಎಂಬುದಾಗಿಯೂ ಪಶುಸಂಗೋಪನಾ ಇಲಾಖೆಯ ಮಾಹಿತಿಗಳು ಉಲ್ಲೇಖಿಸುತ್ತವೆ.ಮಂಡಗಳಲೆಯಲ್ಲಿ ಇದ್ದದ್ದು ಹೊಂಗಲು ನೆಲದ ತುಂಡು ಭೂಮಿ ಆದರೂ ಇಂದು ಬಹುತೇಕ ಅದೇ ನೆಲದಲ್ಲಿ ಅಡಿಕೆ ಬೆಳೆಯುವ ಪ್ರಗತಿಪರ ಕೃಷಿಕರ ಸಂಖ್ಯೆ ಸಹ ಹೆಚ್ಚಿರುವುದು ಮತ್ತೊಂದು ವಿಶೇಷ. ಯಕ್ಷಗಾನ ಕಲಾವಿದರು , ನಾಟಕ ಕಲಾವಿದರು , ಜಾನಪದ ಕಲಾವಿದರು, ಭಜನೆ ಕಲಾವಿದರು , ರಾಜ್ಯಮಟ್ಟದ ಕ್ರೀಡಾಪಟುಗಳನ್ನು, ಬರಹಗಾರರನ್ನು ನೀಡಿರುವ ಊರು ಮಂಡಗಳಲೆ.ಇಲ್ಲಿನ ಜನಗಳಲ್ಲಿ ಇದ್ದದ್ದು ಒಂದೇ. ಸ್ವಾಭಿಮಾನದಿಂದ ಸಾಧಿಸುವ ಛಲ, ನಿರಂತರ ಪರಿಶ್ರಮ, ಶಿಕ್ಷಣದ ಮಹತ್ವವನ್ನು ಅರಿತ ಪ್ರಜ್ಞಾವಂತಿಕೆ.

-ರವಿರಾಜ್ ಸಾಗರ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

1 Comment

  1. https://karnatakastartoday.com/a-education-revolution-sagar-taluku-mandagalale-village/

    ಮಂಡಗಳಲೆ ಎಂಬ ಹಳ್ಳಿಯಲ್ಲಿ ನ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಕ್ರಾಂತಿ ಕುರಿತು ವಿಶೇಷ ಲೇಖನ .
    ಓದಿ ..
    ಸುದ್ದಿ ಓದಿ ಕಮೆಂಟ್ ಮಾಡಿ.

    ಶೇರ್ ಮಾಡಿ.
    ಆತ್ಮೀಯ ಕನ್ನೇಶ ಅವರೆ… ಈ ಲೇಖನ ಅನಾಮಧೇಯ ಹೇಗೆ ಆಗುತ್ತದೆ…
    ಲೇಖನವನ್ನು ಯಥಾವತ್ತಾಗಿ ಪಡೆಯುವಾಗ ಸ್ವಲ್ಪ ಯೋಚಿಸಿ.. ತಾವು ಸಹ ಬರಹಗಾರರಾಗಿ ಮತ್ತೊಬ್ಬ ಬರಹಗಾರರನ್ನು ಪೋಷಿಸಿಸಬೇಕಾಗುವುದು ತಮ್ಮ ಕರ್ತವ್ಯ.

Leave a Reply

Your email address will not be published. Required fields are marked *