

ಮೀಸಲಾತಿ, ದೇಶದ ವಿದ್ಯಮಾನಗಳ ಬಗ್ಗೆ ಮಾತನಾಡಲು ಹೆದರುವ ಪರಿಸ್ಥಿತಿ ಈಗಿದೆ, ಹಾಗಾಗಿ ಈಗ ಯಾವುದೇ ಪ್ರತಿಕ್ರೀಯೆ ಇಲ್ಲ ಎಂದು ಚಿತ್ರದುರ್ಗದ ಮುರಘಾಮಠದ ಶಿವಮೂರ್ತಿ ಶರಣರು ಸಿದ್ಧಾಪುರದಲ್ಲಿ ಮಾಧ್ಯಮ ಹೇಳಿಕೆಯನ್ನು ನಿರಾಕರಿಸಿದ್ದಾರೆ.
ಪಂಚಮಸಾಲಿ ಮೀಸಲಾತಿ ವಿಚಾರವನ್ನು ಕೆಲವರು ವೈಯಕ್ತಿಕವಾಗಿ, ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಂಡು ಸಮಾಜ ಧಿಕ್ಕು ತಪ್ಪಿಸಿರುವುದು ಬಹಳ ದುರದೃಷ್ಟಕರ ಎಂದು ಸಚಿವರಾದ ಸಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ, ಸಮಾಜದ….

“ಸಿದ್ದಾಪುರದಲ್ಲಿ ಶಾಶ್ವತ ಜಾಗಕ್ಕೆ ವ್ಯವಸ್ಥಿತ ನೆಲೆ ಅನಿವಾರ್ಯ”(ಚಿತಾಗಾರ)
ಸ್ಮಶಾನ ಎಂದರೆ ಭಯದ ವಾತಾವರಣ ಕಣ್ಮುಂದೆ.
ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಬಿದಿರು ಗಳ (ಬಾಂಬು),ಹಸಿ ಹೆಡೆ(ತೆಂಗಿನ ಗರಿ),ಮಂಟಪ ಗಳಲ್ಲಿ ಶವಯಾತ್ರೆ ಸ್ಮಶಾನದವರೆಗೆ ಅಲ್ಲಿಯೂ ಜಾತಿ ಗೆರೆಗಳು ಬೇರೆ.ಇರುವ ಪುಟ್ಟ ಜಾಗದಲ್ಲಿ ತರಾತುರಿಯಲ್ಲಿ ಸಿದ್ದಪಡಿಸಿದ ಚಟ್ಟ(ಕಟ್ಟಿಗೆ ರಾಶಿ), ಗುಂಡಿಗಳಲ್ಲಿ ಸಮಾಧಿಯೋ, ಅಗ್ನಿಸ್ಪರ್ಶವೋ ಮಾಡಿ ಬರುವವರೇ ಜಾಸ್ತಿ.
ಕಾರಣ ರುದ್ರಭೂಮಿಯ ಅನಾನುಕೂಲತೆ. ಮಳೆಗಾಲದಲ್ಲಂತೂ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವುದೇ ಸವಾಲು.ಇದಕ್ಕೆಲ್ಲ ಮೂಲ ಹುಡುಕಿದರೆ ಸಿಗುವುದು ವ್ಯವಸ್ಥೆ ಯ ಕೊರತೆ.ಇಂದು ಇದರ ಬಗ್ಗೆ ಕಿಂಚಿತ್ತೂ ಯೋಚಿಸದಿರುವುದು ಸೋಜಿಗದ ಸಂಗತಿಯಾಗಿದೆ ಹೌದು ಮಾದರಿ ಚಿತಾಗಾರದ ಅತೀ ಅವಶ್ಯಕತೆ ನಮ್ಮ ಸಿದ್ದಾಪುರದ ಪ್ರತಿ ಹಳ್ಳಿಯಲ್ಲಿ ಅನಿವಾರ್ಯ.
ಮಾದರಿ ಎಂದಾಗ ಶಿರಸಿಯ ವ್ಯವಸ್ಥಿತ ಚಿತಾಗಾರ ಕಣ್ಮುಂದೆ. ಸಾಮ್ರಾಟ್ ಹೊಟೆಲ್ ಸಮೀಪದಲ್ಲಿರುವ ಇದು ಪಾರ್ಕ್ ರೀತಿಯಲ್ಲಿ ಗೋಚರವಾಗುತ್ತಿದೆ.ಸಂಘ, ಸಂಸ್ಥೆಗಳು ಇದರ ನಿರ್ವಹಣೆ ಜವಾಬ್ದಾರಿ ಪಡೆದರೆ ಉತ್ತಮ. ಇದು ಎಲ್ಲ ವರ್ಗದವರಿಗೂ ಶ್ರೀಮಂತ, ಬಡವ ಭೇದ-ಭಾವ ಇಲ್ಲದೆ ಪ್ರಯೋಜನ ಆಗುವ ಹಾಗೆ ಆಗಬೇಕು.ಬಡ ವರ್ಗದ ಜನರು ಶವ ಸಂಸ್ಕಾರಕ್ಕೂ ತೊಂದರೆ ಪಡುವವರಿದ್ದಾರೆ. ಅಂತಹ ಜನಕ್ಕೆ ಈ ವ್ಯವಸ್ಥೆ ಅಡಿಯಲ್ಲಿ ಸಹಾಯ ಹಸ್ತ ಕಲ್ಪಿಸುವಂತೆ ಆಗಬೇಕು. ಎಲ್ಲರಿಗೂ ಅನುಕೂಲ ಆಗುವಂತೆ ಮೇಲ್ಛಾವಣಿ ಹೊಂದಿರುವ, ಅಲ್ಲಿಯ ಕಾರ್ಯವನ್ನು ನೆರವೇರಿಸುವ ಸಮಯ ಬಂದಂತಹ ಜನರಿಗೆ ಕುಳಿತುಕೊಳ್ಳಲು ಬೆಂಚಿನ ವ್ಯವಸ್ಥೆ, ಸುತ್ತಲೂ ಗಿಡಮರ, ನೀರಿನ ವ್ಯವಸ್ಥೆ,ಅಲ್ಲಿರಲಿ. ಜೀವಂತ ಇರುವಾಗ ಕಟ್ಟಡ, ಬಂಗಲೆ ಕಟ್ಟುವುದಕ್ಕೆ ಗಮನ ನೀಡುವ ನಾವು ನಮ್ಮ ಶಾಶ್ವತ ನೆಲೆ ಬಗ್ಗೆ ಕಿಂಚಿತ್ತೂ ಗಮನ ಹರಿಸದಿರುವುದು ವಿಪರ್ಯಾಸವೇ ಸರಿ.
ಸ್ಮಶಾನದ ಪರಿಸರ ಎಷ್ಟು ಸುಂದರ ಆಗಿರಬೇಕೆಂದರೆ ಇದು ನಮ್ಮ ಶಾಶ್ವತ ಆಸ್ತಿ ಎಂಬ ಮನೋಧೋರಣೆ ಹೊಂದಿರಬೇಕು.ಪಕ್ಷ ಭೇದ ಮರೆತು ಎಲ್ಲರೂ ಒಗ್ಗೂಡಿ ಇದೊಂದು ತುರ್ತು ಕೆಲಸಕ್ಕೆ ಕೈ ಜೋಡಿಸಬೇಕಿದೆ.ಪ್ರತಿ ಪಂಚಾಯತ ಮಟ್ಟದಲ್ಲೂ ಇದರ ಬಗ್ಗೆ ಗಮನ ನೀಡಿದ್ದೇ ಆದಲ್ಲಿ ಖಂಡಿತಾ ಸಾಧ್ಯ. ಮಾದರಿಯಾಗಿ ತಾಲೂಕಿನ ಮಧ್ಯ ಸ್ಥಳದಲ್ಲಿ ಎಲ್ಲರಿಗೂ ಅನುಕೂಲ ಆಗೋತರ ನಿರ್ಮಾಣಕ್ಕೆ ಕಂಕಣ ಬದ್ದರಾಗೋಣ.ಗೌತಮ ಬುದ್ದರ ಮಾತು ನೆನಪಿಸುವ ಹಾಗೆ ಸಾವಿಲ್ಲದ ಮನೆ ಇಲ್ಲ. ಕಾಲಚಕ್ರದಲ್ಲಿ ನಾವೆಲ್ಲ ಒಂದು ದಿನ ಶಾಶ್ವತ ನೆಲೆ ಬಗ್ಗೆ ಕಾಳಜಿವಹಿಸಲೇ ಬೇಕು.ನಂದನ ವನದಂತಿರಲಿ ಶಾಶ್ವತ ಜಾಗ (ರುದ್ರಭೂಮಿ)ಮಾದರಿ ಚಿತಾಗಾರ.
-ಚಿಂತನೆ–ಎಂ.ಡಿ.ನಾಯ್ಕ ಶಿಕ್ಷಕರು
ಬೆಂಗಳೂರು: ಪಂಚಮಸಾಲಿ ಮೀಸಲಾತಿ ವಿಚಾರವನ್ನು ಕೆಲವರು ವೈಯಕ್ತಿಕವಾಗಿ, ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಂಡು ಸಮಾಜ ಧಿಕ್ಕು ತಪ್ಪಿಸಿರುವುದು ಬಹಳ ದುರದೃಷ್ಟಕರ ಎಂದು ಸಚಿವರಾದ ಸಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ, ಸಮಾಜದ ಮುಖಂಡರಾದ ಸಂಗಣ್ಣ ಕರಡಿ, ಕಳಕಪ್ಪ ಬಂಡಿ. ವಿರೂಪಾಕ್ಷಪ್ಪ ಬಳ್ಳಾರಿ,ಮೋಹನ್ ಲಿಂಬಿಕಾಯಿ ದೂರಿದ್ದಾರೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಗಳು ಜಯಮೃತ್ಯುಂಜಯ ಸ್ವಾಮಿಗಳು ಕಳೆದ ಜನವರಿ 14 ರಿಂದ ಪಂಚಮಸಾಲಿ ಸಮಾಜವನ್ನು 2 ಎಗೆ ಸೇರಿಸಲು ಒತ್ತಾಯಿಸಿ ಪಾದಯಾತ್ರೆ ನಡೆಸಿದ್ದರು. ಪಾದಯಾತ್ರೆ ಗೆ ಅಭೂತಪೂರ್ವ ಸಮಾವೇಶ ನಡೆಸಿದ್ದಾರೆ.ಪಂಚಮಸಾಲಿ ಸಮಾಜದ ಯುವಕರು,ಹಿರಿಯರು,ಮಹಿಳೆಯರು ಭಾಗವಹಿಸಿದ್ದರು..
ಆದರೆ ಕೆಲವರು ವೈಯಕ್ತಿಕವಾಗಿ ದುರ್ಬಳಕೆ ಮಾಡಿಕೊಂಡು ಧಿಕ್ಕು ತಪ್ಪಿಸುವ ಕೆಲಸ ಮಾಡಿರುವುದು ದುರದೃಷ್ಟಕರ. ಹಕ್ಕೋತ್ತಾಯ 2ಎ ಗೆ ಸೇರ್ಪಡೆ ಮಾಡುವುದು ಮುಖ್ಯ ಉದ್ದೇಶ. ಸಂವಿಧಾನದ ನಿಯಮಗಳಡಿ ಹಿಂದುಳಿದ ವರ್ಗಗಳ ಆಯೋಗ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದರು.
ಪಂಚಮಸಾಲಿ ಸಮಾಜದ ಮನವಿಯಂತೆ ಆಯೋಗಕ್ಕೆ ಸರ್ಕಾರ ಶಿಫಾರಸ್ಸು ಮಾಡಿದೆ. ಜನರನ್ನು ದಾರಿ ತಪ್ಪಿಸಿದ್ದು, ವಿಜಯಾನಂದ ಕಾಶಪ್ಪನವರ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಪ್ರಚೋದನಕಾರಿ ಭಾಷಣ ಮಾಡಿರುವುದು ಸಹ ಸಮುದಾಯಕ್ಕೆ ಕಳಂಕ ತಂದಿದೆ. ಸಮಾಜದ ಮುಂದೆ ಯಾರೂ ದೊಡ್ಡವರಲ್ಲ. ಸಮಾಜಕ್ಕಿಂತ ಮೇಲೆ ಯಾರೂ ಇಲ್ಲ. ಕಾಶಪ್ಪನವರ್ ಈ ಸಮುದಾಯಕ್ಕೆ ನೀಡಿದ ಕೊಡುಗೆ ಏನು? ಯಡಿಯೂರಪ್ಪ ಹಿಂದೆ 2ಬಿ ಸೇರಿಸಿ ಸಮಾಜದ ಬದ್ಧತೆ ಪ್ರದರ್ಶಿಸಿದ್ದಾರೆ.
2016ರಲ್ಲಿ ಪಂಚಮಸಾಲಿ 2ಎ ವರ್ಗಕ್ಕೆ ಸೇರಿಸುವ ಅರ್ಜಿ ರದ್ದಾಗಿದೆ. ಆದರೆ ಜಯ ಮೃತ್ಯುಂಜಯ ಸ್ವಾಮಿಗಳನ್ನು ಹಿಡಿತದಲ್ಲಿಟ್ಟುಕೊಂಡು, ಎತ್ತಿಕಟ್ಟಿ, ದಾರಿ ತಪ್ಪಿಸಿದ್ದಾರೆ. ಬಸವ ಕಲ್ಯಾಣ ಟ್ರಸ್ಟ್ ಸಭೆ ಕರೆದಿಲ್ಲ. ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಕೆಲ ನಾಯಕರ ವರ್ತನೆಗೆ ಸಚಿವರು ಚಾಟಿ ಬೀಸಿದರು. (kpc)
