
ಸರ್ಕಾರ ದಿಟ್ಟತನ ಪ್ರದರ್ಶಿಸುವ ಮೂಲಕ 2ಎ ಮೀಸಲಾತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆಗ್ರಹಿಸಿ 2ಎ ಹಿತರಕ್ಷಣಾ ವೇದಿಕೆಯಿಂದ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು.
ಬುಧವಾರ bsndp ಸಭೆ– ಸಿದ್ದಾಪುರ : ತಾಲ್ಲೂಕು BSNDP ಘಟಕದ ಸಭೆಯು ಇಂದು (ಫೆಬ್ರುವರಿ 24) ಬುಧವಾರ ಮದ್ಯಾಹ್ನ 3.00 ಗಂಟೆಗೆ ಲಯನ್ಸ್ ಬಾಲಭವನದ ಸಭಾಭವನದಲ್ಲಿ ನಡೆಯಲಿದೆ. ಸಭೆಯಲ್ಲಿ BSNDP ಸಂಘಟನೆಯ ರಾಜ್ಯಾಧ್ಯಕ್ಷ ಸೈದಪ್ಪ ಗುತ್ತೇದಾರ, ಉಪಾಧ್ಯಕ್ಷ ಪ್ರಕಾಶ್ ಕೋಟ್ಯಾನ್, ಕಾರ್ಯದರ್ಶಿ ಕಾಂತರಾಜ್ ಆರ್ಯ, ಬೆಂಗಳೂರು ನಾರಾಯಣ ಗುರು ಕೋ. ಆಪ್ ಸೊಸೈಟಿಯ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ, ರಾಜ್ಯ ಮುಖಂಡರಾದ ಲೋಹಿತ್ ನಾಯ್ಕ್ ಕಾನ್ಸೂರ್, ಶಿವರಾಜ್ ನಾಯ್ಕ ಕೊಂಡ್ಲಿ, ಜಿಲ್ಲಾಧ್ಯಕ್ಷ ಜಗದೀಶ್ ನಾಯ್ಕ ಅಜ್ಜಿಬಳರು, ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಈ ಸಭೆಗೆ ಸಮಾಜ ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾಜದ ಅಭಿವೃದ್ಧಿಗೆ ಪೂರಕವಾದ ವಿಷಯ ಕುರಿತು ಚರ್ಚಿಸಲು ಸಲಹೆ ಸೂಚನೆ ನೀಡಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು BSNDP ಸಿದ್ದಾಪುರ ಘಟಕವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಭಟ್ಕಳ: ಸರ್ಕಾರ ದಿಟ್ಟತನ ಪ್ರದರ್ಶಿಸುವ ಮೂಲಕ 2ಎ ಮೀಸಲಾತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆಗ್ರಹಿಸಿ 2ಎ ಹಿತರಕ್ಷಣಾ ವೇದಿಕೆಯಿಂದ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು.
ಸಮಾವೇಶದಲ್ಲಿ ಈಡಿಗ ಸಮುದಾಯದ ಉಜಿರೆ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶಾಸಕ ಸುನಿಲ ನಾಯ್ಕ್, 22ಕ್ಕೂ 2ಎದಲ್ಲಿ ಬರುವ ಸಮುದಾಯದ ಮುಖಂಡರು ಸೇರಿದಂತೆ 10,000ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಉಜಿರೆ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಯಾರೋ ಹೋರಾಟ, ಪಾದಯಾತ್ರೆ ಮಾಡುತ್ತಾರೆಂದು ಮೀಸಲಾತಿ ಕೊಡಲು ಸಾಧ್ಯವೇ? ಮೀಸಲಾತಿಯೆಂದರೆ ಮಕ್ಕಳಾಟವೇ? ಎಂದು ಪ್ರಶ್ನಿಸಿದರು.
ಸರ್ಕಾರ ಎಂದರೆ ರಾಜ ಇದ್ದಂತೆ. ಜನಸಂಖ್ಯೆ ಆಧಾರದಲ್ಲಿ ಓಟಿನ ಲಾಭಕ್ಕೋಸ್ಕರ ಯಾರೋ ಕೇಳಿದರೆಂದು ಮೀಸಲು ಕೊಡುತ್ತೇವೆಂದು ಸುಳ್ಳು ಭರವಸೆ ಕೊಡುವುದು ಸರಿಯಲ್ಲ. ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇನೆ. ಸರ್ಕಾರ ಪಂಚಮಸಾಲಿ ಆಗ್ರಹಗಳನ್ನು ಕೇಳಿದ್ದೇ ಆದರೆ, ನಮ್ಮ ಪ್ರತಿಭಟನೆ ತೀವ್ರಗೊಳ್ಳಲಿದೆ ಎಂದಿದ್ದಾರೆ
ಮೀಸಲಾತಿಯನ್ನು ನಾವು ಎಂದಿಗೂ ಹಂಚಿಕೊಳ್ಳುವುದ್ಲಿಲ್. ನಮ್ಮ ಭವಿಷ್ಯದ ಪೀಳಿಗೆಯ ಜೀವನವನ್ನು ನಾವು ಹಾಳು ಮಾಡುವುದಿಲ್ಲ ಎಂದು ಸಾಸಕ ಸುನಿಲ ನಾಯ್ಕ್ ಹೇಳಿದ್ದಾರೆ. (kpc)

