

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತು ಸಂಸದ ಅನಂತಕುಮಾರ ಹೆಗಡೆ ವಿರುದ್ಧದ ಖಾಸಗಿ ದೂರನ್ನು ಹೊಸದಾಗಿ ಪರಿಗಣಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಡಿ ಸ್ವೀಕರಿಸದ ಅರ್ಜಿಗಳ ವಿವರ
ತಾಲೂಕ: ಸಿದ್ದಾಪುರ ಗ್ರಾಮ: ನೇರಗೋಡ
ಅ,ನಂ. ಇಲಾಖೆಯ ಹೆಸರು ಸ್ವೀಕರಿಸಿದ ಅರ್ಜಿಗಳ ಸಂಖ್ಯೆ ಷರಾ
1 ತಹಶೀಲ್ದಾರ ಕಛೇರಿ ಸಿದ್ದಾಪುರ
ಪಿಂಚಣಿ ಮತ್ತು 6 ಮಂಜೂರಿ ಆದೇಶ ನೀಡಿ ವೀಲೆವಾರಿಗೋಳಿಸಿದೆ
ಭೂ ಸುಧಾರಣೆ 2 (ಪರಿಶೀಲನಾ ಹಂತದಲ್ಲಿರುತ್ತದೆ)
ಭೂಮಿ (ಪಟ್ಟಾ) 1 ‘’
ಖಾತೆ ಬದಲಾವಣೆ 1
ನ್ಯಾಯಾಲಯ 1
ಆಧಾರ ಕಾರ್ಡ 1
2 ತೋಟಗಾರಿಕೆ ಇಲಾಖೆ 1
3 ಭೂದಾಖಲೆ ಇಲಾಖೆ 2
4 ಗ್ರಾಮ ಪಂಚಾಯತ ದೊಡ್ಮನೆ 43
5 ಅರಣ್ಯ ಇಲಾಖೆ 6
6 ಸಮಾಜ ಕಲ್ಯಾಣ ಇಲಾಖೆ 1
7 ಚಿಕ್ಕ ನೀರಾವರಿ ಇಲಾಖೆ 5
8 ಹೆಸ್ಕಾಂ ಇಲಾಖೆ 4
9 ಪಂ.ಇ.ರಾ. ಇಲಾಖೆ 13
10 ಬಿ ಎಸ್ ಎನ್ ಎಲ್ 3
11 ಆಹಾರ 1
ಅಂತೂ 91
ಶ್ರೀ ಚೌಡೇಶ್ವರಿ ದೇವಿಯ ವಾರ್ಷಿಕೋತ್ಸವ ಹಾಗೂ ಯಕ್ಷಗಾನ ಸೇವೆ ಸಂಪನ್ನ
ಸಿದ್ಧಾಪುರ ತಾಲೂಕಿನ ಇಟಗಿ ಗ್ರಾಮದ ಹೊನ್ನೆಘಟಗಿಯಲ್ಲಿ ಶ್ರೀ ಚೌಡೇಶ್ವರೀ ದೇವಿಯ ಶಾರ್ವರೀ ಸಂವತ್ಸರದ ವಾರ್ಷಿಕೋತ್ಸವವು ಇತ್ತೀಚೆಗೆ ನಡೆಯಿತು. ಪ್ರತಿ ವರ್ಷದಂತೆ ಈ ವರ್ಷವೂ ಸಹಾ ವಿವಿಧ ಧರ್ಮಿಕ ಕಾರ್ಯಕ್ರಮಗಳು, ಅನ್ನ ಸಂತರ್ಪಣೆ ಹಾಗೂ ಯಕ್ಷಗಾನ ಸೇವೆಯು ಇಟಗಿಯ ಆಗಮಿಕರಾದ ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ಟರ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಿತು.
ನಂತರ ಜಾಗರಣೆಯ ನಿಮಿತ್ತವಾಗಿ ಕಲಾಭಾಸ್ಕರ (ರಿ.) ಇಟಗಿ ಯಿಂ ದ ಹೆಮ್ಮನಬೈಲ್ ಲಕ್ಷ್ಮೀನಾರಾಯಣ ಯಕ್ಷಗಾನ ಮಂಡಳಿಯವರ ಸಹಕಾರದೊಂದಿಗೆ ಕವಿ ಪೆರ್ಡೂರ ರಾಮ ವಿರಚಿತ ಶಶಿಪ್ರಭಾ ಪರಿಣಯ ಹಾಗೂ ಕವಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ಶಿವಭಕ್ತ ವೀರಮಣಿ ಎಂಬ ಸುಂದರ ಪೌರಾಣಿಕ ಯಕ್ಷಗಾನ ಪ್ರದರ್ಶನಗಳು ನಡೆದವು.
ಭಾಗವತರಾಗಿ ಸುರೇಶ ಶೆಟ್ಟಿ ಶಂಕರನಾರಾಯಣ, ರಾಮಚಂದ್ರ ನಾಯ್ಕ ಹೆಮ್ಮನ್‍ಬೈಲು ತಮ್ಮ ಸುಶ್ರಾವ್ಯ ಕಂಠದಿಂದ ಮಿಂಚಿದರು. ಮದ್ದಳೆವಾದನದಲ್ಲಿ ಗುಡ್ಡೆದಿಂಬ ಮಂಜುನಾಥ ರಾವ್, ಶರತ್ ಹೆಗಡೆ ಜಾನಕೈ ಹಾಗೂ ಚಂಡೆಯ ನಿನಾದದಲ್ಲಿ ಕೆ.ಎನ್.ಭಾರ್ಗವ ಸಾಗರ, ಕೆರೆಕೈ ಗಣೇಶ ಭಟ್ಟ ಉತ್ತಮ ಸಾಥ್ ಒದಗಿಸಿದರು. ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ ಮಾರ್ತಾಂಡತೇಜನಾಗಿ, ಲೋಕೇಶ ಗೌಡ ಗುಣವಂತೆ ಉತ್ತಮವಾಗಿ ಅಭಿನಯಿಸಿದರು.
ರಾಣಿ ಶಶಿಪ್ರಭೆಯಾಗಿ ಇಟಗಿ ಮಹಾಬಲೇಶ್ವರ, ಮಂತ್ರಿಣಿ ಭ್ರಮರಕುಂತಳೆಯಾಗಿ ಸದಾಶಿವ ಭಟ್ಟ ಯಲ್ಲಾಪುರ, ಸೇನಾ ಕಮಲಗಂಧಿಯಾಗಿ ನಾಗಪತಿ ಹೆಗಡೆ ಕೊಪ್ಪ ಮನೋಜ್ಞವಾಗಿ ಹಾವ ಭಾವ ಲಾಸ್ಯಗಳಿಂದ ಪ್ರದರ್ಶನಗಳಿಗೆ ಕಳೆಗಟ್ಟಿದರು. ವನಪಾಲಕಿ ಅಜ್ಜಿಯ ಪಾತ್ರದಲ್ಲಿ ಮುರೂರು ರಮೇಶ ಭಂಡಾರಿ ಹಾಸ್ಯದ ಹೊನಲನ್ನು ಹರಿಸಿದರು.
ಕಿರಾತನಾಗಿ ಹುಣಸೆಮಕ್ಕಿ ಸಂತೋಷ ಹೆಗಡೆ, ರಾಕ್ಷಸ ಘೋರರೂಪಿಯಾಗಿ ನಾಗೇಂದ್ರ ಭಟ್ಟ ಹಾಗೂ ಮಾಂಡವ್ಯಮುರ್ತಿ ಯಾಗಿ ವಿ.ಎನ್.ಹೆಗಡೆ ಬೊಗರಿ ಅದ್ಭುತ ಕಲಾಲೋಕವನ್ನೆ ತೆರೆದಿಟ್ಟರು. ಶ್ರೀಕಾಂತ ಹಗ್ಗೋಡು (ವೀರಮಣಿ) ವೆಂಕಟೇಶ ಹೆಗಡೆ ಬೊಗರಿಮಕ್ಕಿ (ಹನುಮಂತ), ಕಬ್ಬಗಾರ್ ಕೆರಿಯ ನಾಯ್ಕ (ಈಶ್ವರ), ಸಂತೋಷ ಹೆಗಡೆ (ರುಕ್ಮಾಂಗ), ಗಣಪತಿ ಗೌಡ ಕಲ್ಮನೆ (ಶುಭಾಂಗ) ಹಾಗೂ ಮಂಜುನಾಥ ರಾಮ ಭಟ್ಟ (ಶತ್ರಘ್ನ) ಮುಂತಾದವರು ರಾಮಾಶ್ವಮೇಧದ ಈ ಕತೆ ಶಿವಭಕ್ತ ವೀರಮಣಿಯನ್ನು ಶ್ರಮ ಸಾರ್ಥಕತೆಯನ್ನು ಹೊಂದಿದರು. ಸಹಕರಿಸಿದ ಎಲ್ಲರಿಗೂ ಚೌಡೇಶ್ವರಿ ಸೇವಾ ಸಮಿತಿಯ ಪರವಾಗಿ ಅಧ್ಯಕ್ಷ ಮಂಜು ಹಾಲ ಚೆನ್ನಯ್ಯ ಹಾಗೂ ಕಾರ್ಯದರ್ಶಿ ರವಿ ಕನ್ನ ಚೆನ್ನಯ್ಯ ಕೃತಜ್ಞತೆಯನ್ನು ಸಮರ್ಪಿಸಿದರು.
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತು ಸಂಸದ ಅನಂತಕುಮಾರ ಹೆಗಡೆ ವಿರುದ್ಧದ ಖಾಸಗಿ ದೂರನ್ನು ಹೊಸದಾಗಿ ಪರಿಗಣಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
2017ರಲ್ಲಿ ರಾಜ್ಯ ಸರ್ಕಾರ ಆಯೋಜಿಸಿದ್ದ ಟಿಪ್ಪು ಜಯಂತಿ ಸಂದರ್ಭದಲ್ಲಿ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಖಾಸಗಿ ದೂರನ್ನು ಬೆಂಗಳೂರಿನ 10ನೇ ಎಸಿಎಂಎಂ ನ್ಯಾಯಾಲಯ ವಜಾಗೊಳಿಸಿತ್ತು.
ಆಗ ಕೇಂದ್ರ ಸಚಿವರಾಗಿದ್ದ ಅನಂತಕುಮಾರ ಹೆಗಡೆ ವಿರುದ್ಧ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ದೂರು ದಾಖಲಿಸಲಾಗಿದೆ ಎಂದು ನ್ಯಾಯಾಲಯ ಹೇಳಿತ್ತು. ‘ತನಿಖೆ ಪೂರ್ಣಗೊಂಡ ನಂತರವೇ ಈ ಪ್ರಶ್ನೆ ಉದ್ಭವಿಸುತ್ತದೆ. ಸಿಆರ್‌ಪಿಸಿ 196 (1) ಮತ್ತು (1–ಎ) ಸೆಕ್ಷನ್ ಅನ್ನು ತಪ್ಪಾಗಿ ಅರ್ಥೈಸಿಕೊಂಡು ಈ ಆದೇಶವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅಂಗೀಕರಿಸಿದೆ’ ಎಂದು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
‘ಈ ವಿಷಯವನ್ನು ಸಂಬಂಧಿಸಿದ ನ್ಯಾಯಾಲಯಕ್ಕೆ ರವಾನಿಸಲಾಗಿದೆ. ಕಾನೂನಿನ ಪ್ರಕಾರ ಹೊಸ ದೂರನ್ನು ಪರಿಗಣಿಸುವಂತೆ’ ತಿಳಿಸಿದೆ. ‘ಸಿ.ಟಿ. ರವಿ ಮತ್ತು ಅನಂತಕುಮಾರ ಹೆಗಡೆ ಅವರ ಟ್ವೀಟ್‌ಗಳು ಧರ್ಮಗಳ ನಡುವೆ ದ್ವೇಷ ಹೆಚ್ಚಿಸುತ್ತವೆ’ ಎಂದು ಆರೋಪಿಸಿ ಉದ್ಯಮಿ ಆಲಂ ಪಾಷಾ ದೂರು ದಾಖಲಿಸಿದ್ದರು. ನ್ಯಾಯಾಲಯ 2017ರ ನವೆಂಬರ್ 4 ರಂದು ದೂರನ್ನು ವಜಾಗೊಳಿಸಿತ್ತು. ಟಿಪ್ಪು ಜಯಂತಿ ಆಚರಣೆಗಳ ಮೇಲೆ ಎರಡು ಧರ್ಮಗಳ ನಡುವೆ ದ್ವೇಷವನ್ನು ಉಂಟುಮಾಡುವುದು ಮತ್ತು ಕೋಮು ಸೌಹಾರ್ದತೆಗೆ ಭಂಗ ತರುವ ಉದ್ದೇಶವನ್ನು ಹೊಂದಿದೆ ಎಂದು ಹೇಳಲಾಗಿತ್ತು. (kpc)
